ಜಪ್ತಿ ಮಾಡಿಕೊಂಡ ಅಕ್ಕಿ ಬಹಿರಂಗ ಹರಾಜು
*********
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 40.21 ಕ್ವಿಂ. ಪಡಿತರ ಅಕ್ಕಿಯನ್ನು (Rice Auction Chitradurga) ವಶಪಡಿಸಿಕೊಳ್ಳಲಾಗಿದ್ದು, ಈ ರೀತಿ ವಶಪಡಿಸಿಕೊಂಡ ಅಕ್ಕಿಯನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ಜೂ.28 ರಂದು ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗ ತಾಲ್ಲೂಕಿನ ಟಿಎಪಿಎಂಸಿ. ಗೋದಾಮು ನಂ. 01 ಇಲ್ಲಿ ಬಹಿರಂಗ ಹರಾಜು (Rice Auction Chitradurga) ಮಾಡಲಾಗುವುದು, ಆಸಕ್ತ ವ್ಯಾಪಾರಸ್ಥರು ಹರಾಜಿನಲ್ಲಿ ಭಾಗವಹಿಸಬಹುದು ಎಂದು ಚಿತ್ರದುರ್ಗ ತಹಸಿಲ್ದಾರ್ ನಾಗವೇಣಿ ಅವರು ತಿಳಿಸಿದ್ದಾರೆ.
ಕಳೆದ 2022 ರ ಏಪ್ರಿಲ್ 05 ರಂದು ಚಿತ್ರದುರ್ಗ ನಗರದ ಹೊರವಲಯದಲ್ಲಿನ ಮೆದೇಹಳ್ಳಿ ರಸ್ತೆಯಲ್ಲಿರುವ ಸೆಕ್ರಟರಿ ತಿಮ್ಮಣ್ಣ ಬಡಾವಣೆಯ ಖಾಲಿ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಇರುವ ವಾಹನದಲ್ಲಿ 40.21 ಕ್ವಿಂ. ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿತ್ತು. ಅಕ್ರಮ ಸಾಗಾಣಿಕೆಯನ್ನು ಪತ್ತೆ ಹಚ್ಚಿದ ಅಧಿಕಾರಿಗಳು, 40.21 ಕ್ವಿಂ. ಪಡಿತರ ಅಕ್ಕಿಯನ್ನು (Rice Auction Chitradurga) ವಶಕ್ಕೆ ಪಡೆದುಕೊಂಡಿದ್ದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಜೂ.28 ರಂದು ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗ ತಾಲ್ಲೂಕಿನ ಟಿಎಪಿಎಂಸಿ. ಗೋದಾಮು ನಂ. 01 ಇಲ್ಲಿ ಬಹಿರಂಗ ಹರಾಜು (Rice Auction Chitradurga) ನಡೆಸಲಾಗುವುದು. ಪ್ರತಿ ಕ್ವಿಂಟಾಲ್ ಅಕ್ಕಿಗೆ ರೂ. 2335 ಕನಿಷ್ಟ ದರ ನಿಗದಿಪಡಿಸಲಾಗಿದೆ. ಆಸಕ್ತ ವ್ಯಾಪಾರಸ್ತರು 20 ಸಾವಿರ ರೂ. ಮುಂಗಡ ಠೇವಣಿಯನ್ನು ಡಿಡಿ ರೂಪದಲ್ಲಿ ಪಾವತಿಸಿ ಹರಾಜಿನಲ್ಲಿ ಭಾಗವಹಿಸಬಹುದು. ಹೆಚ್ಚಿನ ವಿವರಗಳನ್ನು ಚಿತ್ರದುರ್ಗ ತಹಸಿಲ್ದಾರರ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.