
Chitradurga news|nammajana.com|25-03-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕೇಂದ್ರದ ರಸ್ತೆ ಅಗಲೀಕರಣ ಸದ್ದು ಕಳೆದ ವಿಧಾನ ಸಭಾ ಚುನಾವಣಾ (Road widening) ಸಂದರ್ಭದಿಂದ ಕೇಳಿ ಬರುತ್ತಿದೆ. ರಸ್ತೆ ಅಗಲೀಕರಣ ಮಾಡೇ ಮಾಡುತ್ತೇವೆ ಎಂದು ಕೆಡಿಪಿ ಸಭೆ, ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸ್ಥಳೀಯ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ರಘುಮೂರ್ತಿ, ಚಂದ್ರಪ್ಪ ಸೇರಿ ಎಲ್ಲಾರೂ ಸಹ ಸಭೆಯಲ್ಲಿ ಒತ್ತಡ ಏರುತ್ತಲೇ ಇದ್ದಾರೆ ಆದರೆ ರಸ್ತೆ ಅಗಲೀಕರಣ ಮಾತ್ರ ಕೆಡಿಪಿ ಸಭೆ ಮಾತ್ರ ಸಿಮೀತವಾಗಿದೆ.
ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಪೂರ್ಣಗೊಳ್ಳುತ್ತಿದ್ದರು ಸಹ ಪ್ರತಿ ಸಭೆಯಲ್ಲಿ ಜನರಿಗೆ ರಸ್ತೆ (Road widening) ಅಗಲೀಕರಣ ಗುಮ್ಮ ಬಂದಂತೆ ಬಂದು ಸಭೆ ನಂತರ ಸಭೆಯ ಸೂಚಿಸಿದ ರಸ್ತೆ ಅಗಲೀಕರಣ ವಿಚಾರ ಮೂಲೆಗೆ ಸೇರುತ್ತಿದೆ.
ಪ್ರತಿ ಕೆಡಿಪಿ ಸಭೆಯಲ್ಲಿ ಅರ್ಧ ಗಂಟೆ, ಒಂದು ಗಂಟೆಗಳ ಕಾಲ ಚರ್ಚೆ ಮಾತ್ರ ನಡೆಯುತ್ತದೆ. ಆದರೆ ರಸ್ತೆ ಅಗಲೀಕರಣ ಮಾತ್ರ ಆಗುತ್ತಿಲ್ಲ. ಬಲ್ಲ ಮೂಲಗಳ ಪ್ರಕಾರ ಚಿತ್ರದುರ್ಗ ನಗರಸಭೆ ಆಡಳಿತ ಸದಸ್ಯರು ನಗರಸಭೆಯ ಸಭೆ ಅಜೆಂಡಾದಲ್ಲಿ ರಸ್ತೆ ಅಗಲೀಕರಣ ಪ್ರಸ್ತಾಪ ನಮಗೆ ಬಂದಿಲ್ಲ, ಬಂದಾಗ ನೋಡೋಣ, ನಮ್ಮ ಅಗತ್ಯತೆ ಇಲ್ಲದಂತೆ ಸಚಿವರು, ಶಾಸಕರು ನಿರ್ಧಾರ ಮಾಡಿದರೆ ನಮ್ಮದು ಏನಿಲ್ಲ. ಮಾಡಿಕೊಳ್ಳಲಿ, ಸದ್ಯ ನಮ್ಮ ಸಭೆಯಲ್ಲಿ ರಸ್ತೆ ಅಗಲೀಕರಣ ವಿಚಾರ ಅಜೆಂಡಾದಲ್ಲಿ ಇಲ್ಲ ಎಂಬ ಮಾತು ನಗರಸಭೆ ಸದಸ್ಯರಿಂದ ಕೇಳಿ ಬರುತ್ತಿದ್ದು ಸ್ಥಳೀಯ ಶಾಸಕರು ಮತ್ತು ನಗರಸಭೆ ವೈಮನಸ್ಸಿನ ನಡುವೆ ಅಗಲೀಕರಣ ಆಗುತ್ತದೆಯೋ, ಇಲ್ವೋ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಕೆಡಿಪಿ ಸಭೆಯಲ್ಲಿ ಏನೆಲ್ಲ ಚರ್ಚೆಗಳು ನಡೆದವು (Road widening)
ಚಿತ್ರದುರ್ಗ ನಗರದ ಪಿ.ಬಿ ರಸ್ತೆ ಅಗಲೀಕರಣ ಕಾರ್ಯ ನಮ್ಮ ಅಧಿಕಾರ ಅವಧಿಯಲ್ಲಿಯೇ ಪೂರ್ಣಗೊಳ್ಳಬೇಕು. ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್ ಹಾಗೂ ನಗರಸಭೆ ಅಧಿಕಾರಿಗಳು ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ, ರಸ್ತೆ (Road widening) ಅಗಲೀಕರಣ ಕಾರ್ಯಕ್ಕೆ ಮುಂದಾಗಬೇಕು ಎಂದು ಸಚಿವ ಡಿ.ಸುಧಾಕರ್ ಸಭೆಯಲ್ಲಿ ನಿರ್ದೇಶನ ನೀಡಿದರು.
ಸರ್ವೋಚ್ಚ ನ್ಯಾಯಾಲಯವೇ ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನೇ ರಸ್ತೆ ಅಗಲೀಕರಣಕ್ಕಾಗಿ ಮುಲಾಜು ತೋರದೆ ತೆರವುಗೊಳಿಸುವಂತೆ ಆದೇಶ ನೀಡಿದೆ. ಹಳೆಯ ಪಿ.ಬಿ ರಸ್ತೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿದವರನ್ನು ತೆರವುಗೊಳಿಸಲು ಯಾವುದೇ ಮುಲಾಜು ತೋರಬೇಡಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಚಳ್ಳಕೆರೆ ಹಾಗೂ ಹಿರಿಯೂರಿನಿಂದ ಚಿತ್ರದುರ್ಗ ನಗರ ಪ್ರವೇಶ ಮಾಡುವ ಪಿ.ಬಿ. ರಸ್ತೆ ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಆಸ್ಪತ್ರೆಯವರೆಗೆ ಸಾಕಷ್ಟು ವಿಸ್ತಾರವಾಗಿದೆ. ಅದರೆ ನಗರದ ಮುಖ್ಯಭಾಗದಲ್ಲಿ ಒತ್ತುವಾರಿಯಾಗಿದೆ. ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. ಅಧಿಕಾರಿಗಳು ಒತ್ತುವರಿ ತೆರವಿಗೆ (Road widening) ಮುಂದಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ದಾವಣಗೆರೆ ಮಹಾನಗರ ಪಾಲಿಕೆ ಒತ್ತುವರಿಯಾಗಿದ್ದ ಪಿ.ಬಿ.ರಸ್ತೆಯನ್ನು ತೆರವುಗಳಿಸಿ ಕ್ರಮ ಕೈಗೊಂಡಿದೆ. ಚಿತ್ರದುರ್ಗ ನಗರಸಭೆ ಅಧಿಕಾರಿಗಳು ದಾವಣಗೆರೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳುವಂತೆ ವಿಧಾನಪರಿಷತ್ ಶಾಸಕ ಕೆ.ಎಸ್.ನವೀನ್ ಸಲಹೆ ನೀಡಿದರು.
ಇದನ್ನೂ ಓದಿ: KDP meeting | ಅಭಿವೃದ್ದಿ ಕೆಲಸಗಳಿಗೆ ಹಿನ್ನೆಡೆ, ಜೂನ್ ಅಂತ್ಯಕ್ಕೆ ಜಿಲ್ಲೆಗೆ ಎಲ್ಲಾ ಹೊಸ ಅಧಿಕಾರಿಗಳು: ಡಿ.ಸುಧಾಕರ್
1905ರಲ್ಲಿ ನಗರದ ಮುಖ್ಯರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಗುರುತಿಸಲಾಗಿತ್ತು. ತದನಂತರ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನಂತರ ಇದನ್ನು ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸಲಾಗಿದೆ. ಆದರೆ ಹೆದ್ದಾರಿ ಅಗಲದ ಅಳೆತೆಯನ್ನು ಕಡಿಮೆ ಮಾಡಿಲ್ಲ. ಒತ್ತುವರಿಯಾದ ರಸ್ತೆಯನ್ನು ಅಧಿಕಾರಿಗಳು ಗುರುತಿಸಬೇಕು. ಇದರೊಂದಿಗೆ ನಗರದ ರಾಜಕಾಲುವೆ (Road widening) ಮೇಲಿನ ನಿರ್ಮಾಣಗಳ ತೆರವಿಗೂ ಮುಂದಾಗಬೇಕು ಎಂದು ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಈ ಸಂದರ್ಭದಲ್ಲಿ ಹೇಳಿದರು.
