Chitradurga News | Nammajana.com | 14-09-2025
ನಮ್ಮಜನ.ಕಾಂ, ಚಳ್ಳಕೆರೆ: ಗ್ರಾಮೀಣ(T. Raghumurthy) ಭಾಗದಲ್ಲಿ ಕಿರಿದಾದ ರಸ್ತೆಗಳಿಂದ ವಾಹನ ಸಂಚಾರ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸುಗಮ ಸಂಚಾರ ವ್ಯವಸ್ಥೆ ಹಿತದೃಷ್ಠಿಯಿಂದ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರೈಸುವಂತೆ ಅಧಿಕಾರಿಗಳಿಗೆ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ನಿರ್ದೇಶನ ನೀಡಿದರು.

ಇದನ್ನೂ ಓದಿ: ಹಾಸನದಲ್ಲಿ ಟ್ರಕ್ ದುರಂತ | ಹೊಸದುರ್ಗದ ಮಿಥುನ್ ಸಾವು | Truck accident
ಅವರು, ಶನಿವಾರ ಪರಶುರಾಮಪುರ ಖಾಸಗಿ ಬಸ್ ನಿಲ್ದಾಣದಿಂದ ಕೆಕೆ ರಸ್ತೆಯ ತನಕ ಅಗಲೀಕರಣ ಕಾಮಗಾರಿ ಚಾಲನೆಯಲ್ಲಿದ್ದು, ಕಾಮಗಾರಿಯ ಗುಣಮಟ್ಟ ಹಾಗೂ ಪ್ರಗತಿಯ ಬಗ್ಗೆ ವೀಕ್ಷಿಸಿದರು. ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿ ಕೆಲವಾರು ತಿಂಗಳು ಕಳೆದಿದ್ದು, ನಿರೀಕ್ಷಿಸಿದಂತೆ ಕಾಮಗಾರಿ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಕೂಡಲೇ ಈ ಬಗ್ಗೆ ಜಾಗ್ರತೆ ವಹಿಸಬೇಕೆಂದರು.
ಲೋಕೋಪಯೋಗಿ ಇಲಾಖೆಯ ಸಹಾಯಕಕಾರ್ಯಪಾಲಕ ಅಭಿಯಂತರ ಹಕೀಂ ಮಾತನಾಡಿ, ರಾಜ್ಯಹೆದ್ದಾರಿ ವಿಸ್ತರಣೆ ಯೋಜನೆಯಡಿ ಈ ಕಾಮಗಾರಿಯನ್ನು ಕೈಗೊಂಡಿದೆ. ಕೆಕೆ ರಸ್ತೆಯಿಂದ ಪರಶುರಾಮಪುರ ಗ್ರಾಮದ ಖಾಸಗಿ ಬಸ್ಟಾಂಡ್ ತನಕ ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದೆ.
ಇಂಜಿನಿಯರ್ ರಾಘವೇಂದ್ರರವರು(T. Raghumurthy) ಈ ಕಾಮಗಾರಿ ನೇತೃತ್ವ ವಹಿಸಿದ್ದು, ಶಾಸಕ ಸೂಚನೆಯಂತೆ ಆದಷ್ಟು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಲಾಗುವುದು ಎಂದರು.
ಇದನ್ನೂ ಓದಿ: ಕೋಟೆನಾಡು ಚಿತ್ರದುರ್ಗ | ಅದ್ದೂರಿಯಾಗಿ ಜರುಗಿದ ಹಿಂದೂ ಮಹಾಗಣಪತಿ ಶೋಭಯಾತ್ರೆ | ಸುಮಾರು 4 ಲಕ್ಷ ಜನ ಭಾಗೀ
ಗ್ರಾಪಂ ಅಧ್ಯಕ್ಷ ರುದ್ರೇಶ್, ಸದಸ್ಯರು, ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಚನ್ನಕೇಶವ, ಕಾಂಗ್ರೆಸ್ ಮುಖಂಡರಾದ ಚೌಳುರುಪ್ರಕಾಶ್, ನಾಗಭೂಷಣ್, ಕೃಷ್ಣಪ್ಪ, ಪ್ರಕಾಶ್, ಓಬಳೇಶ್, ಕರಿಯಣ್ಣ, ನಾಗರಾಜ, ಜಯಕುಮಾರ್, ಜಗಲೂರುಸ್ವಾಮಿ, ಚನ್ನಕೇಶವ, ರಾಜಶೇಖರ, ಮುಂತಾದವರು ಉಪಸ್ಥಿತರಿದ್ದರು.
