Chitradurga news|nammajana.com|24-2-2025
ನಮ್ಮಜನ.ಕಾಂ, ಚಳ್ಳಕೆರೆ: ತೆಲುಗು ಮಾತನಾಡುವ ಯುವಕರು ಗುರುತಿನ ಚೀಟಿ ತೋರಿಸಿ ನಾವು ಅಧಿಕಾರಿಗಳು ತನಿಖೆ (Robbery) ಮಾಡಲು ಬಂದಿದ್ದೇವೆಂದು ಹೆದರಿಸಿ, ಗೃಹಿಣಿಯನ್ನು ಕಟ್ಟಿಹಾಕಿ ಚಾಕು ತೋರಿಸಿ ಒಡವೆ ದರೋಡೆ ಮಾಡಿದ ಘಟನೆ ನಗರದ ವಾಸವಿ ಕಾಲೋನಿಯಲ್ಲಿ ಶನಿವಾರ ನಡೆದಿದೆ.
ವಾಸವಿ ಕಾಲೋನಿ ನಿವಾಸಿ, ವಾಣಿಜ್ಯೋದ್ಯಮಿ ಚಲಂರವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಪತ್ನಿ ಲತಾ (50) ಹಾಗೂ ಅವರ ಅತ್ತೆ ಮನೆಯಲ್ಲಿದ್ದು, ಗುರುತಿನ ಚೀಟಿ ತೋರಿಸಿ ಮನೆಗೆ ನುಗ್ಗಿದ ಇಬ್ಬರು ಆಘಂತಕರು ಅತ್ತೆಯನ್ನು ಮನೆಯ ಬಾತ್‌ರೂಂನಲ್ಲಿ ಕೂಡಿಹಾಕಿ ಗೃಹಿಣಿ ಲತಾರವರನ್ನು ಮನೆಗೆ ಮತ್ತೊಂದು ರೂಂನಲ್ಲಿ ಕೂಡಿಹಾಕಿಕೈಗೆ ಒಡೆದಿದ್ದಲ್ಲದೆ, ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ ಕೈಯಲ್ಲಿದ್ದ ಬಳೆ ಹಾಗೂ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ. ದರೋಡೆಕೋರರು ಅರ್ಧ ಗಂಟೆ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್‌ಬಂಡಾರು ನಿರ್ದೇಶನದಂತೆ ಹೆಚ್ಚುವರಿ ಎಸ್ಪಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆಯ ಮಾಲೀಕರೊಂದಿಗೆ ಮಾತನಾಡಿದ ಅವರು, ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳದೇ ಇರುವುದಕ್ಕೆ ಬೇಸರ (Robbery) ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಹಾಡುಹಗಲೇ ಈ ದರೋಡೆ ನಡೆದಿದ್ದು ದರೋಡೆಕೋರರನ್ನು ಪತ್ತೆ ಹಚ್ಚಲು ಕ್ರಮವಹಿಸಲಾಗುವುದು ಎಂದರು.
ಘಟನೆ ನಡೆದು ಕೆಲಹೊತ್ತಿನ ನಂತರ ಮನೆಯವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ಇಬ್ಬರೂ ದರೋಡೆಕೋರರು ಕಾರಿನಲ್ಲಿ ಬಂದಿದ್ದರು ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ಮನೆಯಲ್ಲಿ ಲತಾರವರ ಅತ್ತೆಯ ಕಿವಿ ಓಲೆಯನ್ನು ಕಳ್ಳರು ಹಾಡುಹಗಲೇ ಕಿತ್ತುಕೋಡು ಹೋಗಿದ್ದರು.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ , ಇವತ್ತು ಯಾವ ರಾಶಿಗೆ ಶುಭ ಯೋಗ?
ಅದಕ್ಕೂ ಮುನ್ನ ಇದೇ ಮನೆಯ ಎದುರ ಭಾಗದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರನ್ನು ಸಹ ಅಪಹರಿಸಿದ್ದರು. ವಾಸವಿಕಾಲೋನಿಯ ಈ ಬೀದಿಯಲ್ಲಿ ಆಗಾಗ ಕಳ್ಳತನ, ದರೋಡೆ ಪ್ರಕರಣಗಳು (Robbery) ಪುನಾರವರ್ತನೆಯಾಗುತ್ತಿದ್ದು, ಪೊಲೀಸರು ನಿಯಂತ್ರಿಸಲು ಮುಂದಾಗಬೇಕಿದೆ. ಸಾರ್ವಜನಿಕರು ಸಹ ಎಚ್ಚರಿಕೆಯಿಂದ ಇರಬೇಕಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252