
Chitradurga news|nammajana.com|21-02-2025
ನಮ್ಮಜನ.ಕಾಂ, ಹೊಸದುರ್ಗ: ರಾಜ್ಯದ ಸರ್ಕಾರಿ ಶಾಲೆಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಕಾರ್ಯ 2-3 ವರ್ಷಗಳಿಂದ ವೇಗವಾಗಿ ನಡೆಯುತ್ತಿದೆ. ‘ಸರ್ಕಾರಿ (Sadhguru Ayurveda) ಶಾಲೆಗಳನ್ನು ಉಳಿಸಿ’ ಎನ್ನುವ ಆಂದೋಲನದಲ್ಲಿ ಬಹಳಷ್ಟು ಮಂದಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಕೆಲ ಸಾಧಕರು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕಾರ ಮಾಡಿ, ಮೂಲಸೌಕರ್ಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಅದರಂತೆಯೇ, ಸದ್ಗುರು ಆಯುರ್ವೇದ ಸಂಸ್ಥೆಯ ಮಾಲೀಕರಾಗಿರುವ ಸದ್ಗುರು ಪ್ರದೀಪ್ ಮತ್ತು ಅವರ ಪತ್ನಿ ಡಾ. ಸ್ವಾತಿ ಪ್ರದೀಪ್ ಅವರು ಹೊಸದುರ್ಗ ತಾಲೂಕಿನಲ್ಲಿ 25ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕಾರ ಮಾಡಿ, ಮೂಲಸೌಕರ್ಯ ಮತ್ತು ಮಕ್ಕಳ ಕಲಿಕೆಗೆ ಬೇಕಾಗಿರುವ ಪರಿಕರಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ, ತಾಲೂಕಿನ ಮತ್ತೋಡು ಹೋಬಳಿಯ ನಾಗತೀಹಳ್ಳಿ ಸರ್ಕಾರಿ ಶಾಲೆಯನ್ನು ಸದ್ಗುರು ಪ್ರದೀಪ್ ದತ್ತು ಸ್ಪೀಕಾರ ಮಾಡಿದರು. ಈ ಕುರಿತು ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಬಾಲ್ಯ ಜೀವನದಲ್ಲಿ ಚಿಕ್ಕ ಮಕ್ಕಳಿಗೆ (Sadhguru Ayurveda) ಚಂದಮಾಮ ತೋರಿಸಿ, ನೀತಿ ಕಥೆ ಹೇಳುತ್ತಾ, ಲಾಲಿ ಹಾಡು, ಜೋಗುಳ ಪದಗಳನ್ನು ಹಾಡುತ್ತಾ, ಊಟ ಮಾಡಿಸುವ ಮತ್ತು ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ಸಂಸ್ಕೃತಿ-ಸಂಸ್ಕಾರ ಮತ್ತು ಸಂಪ್ರದಾಯವಿತ್ತು. ಆದರೆ, ಇಂದಿನ ದಿನಗಳಲ್ಲಿ ಅಧಿಕ ಒತ್ತಡದಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಮೊಬೈಲ್ ನಲ್ಲಿ ವಿಡಿಯೋ, ಸಂತಸ ಪಡುವ ಯಾವುದೇ ಮಕ್ಕಳ ಹಾಸ್ಯ ಭರಿತ ಹಾಡು ಅಥವಾ ಗೇಮ್ ಗಳನ್ನು ತೋರಿಸುತ್ತಾ, ಊಟ ಮಾಡಿಸುವ ಪರಿ ನೋಡಿದರೆ, ನಾವೇ ನಮ್ಮ ಮಕ್ಕಳನ್ನು ಮೊಬೈಲ್ ದಾಸ್ಯಕ್ಕೆ ಒಳಪಡಿಸುತ್ತಿದ್ದೆವೇನೊ ಎನ್ನುವ ಆತಂಕ ಕಾಡುತ್ತಿದೆ. ಮೊಬೈಲ್ ಮಕ್ಕಳಲ್ಲಿ ಮಾಹಿತಿ ಸಂಗ್ರಹ, ವಿಷಯ ಜ್ಞಾನ ಹೆಚ್ಚಿಸುತ್ತದೆ. ಆದರೆ, ಹಿರಿಯರಿಗೆ ಗೌರವ ನೀಡುವುದು, ಮನೆಗೆ ಬಂದವರನ್ನು ಸ್ವಾಗತಿಸುವುದು ಮತ್ತು ಆತ್ಮೀಯತೆಯನ್ನು ಇಲ್ಲದಂತಾಗಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೊಬೈಲ್ ಬಳಕೆ ಅತಿಯಾದಂತೆ ಅನುಬಂಧ ಮತ್ತು ಸಂಬಂಧಗಳು ದೂರವಾಗುತ್ತಿವೆ. ಮೊಬೈಲ್ ಸೆಳೆತ ಮಿತಿಮೀರುತಿದ್ದು, ಇಂದು ನಮ್ಮ ಭಾವನೆ, ಕಲ್ಪನೆ, ಅನಿಸಿಕೆ, ಅಭಿಪ್ರಾಯ, ಸಲಹೆ-ಸೂಚನೆ ಮತ್ತು ಚಿಂತನೆಗಳಿಗೆ ಬೆಲೆಯಿಲ್ಲದೇ ಮೊಬೈಲ್ ನಲ್ಲಿ ಕಾಣಸಿಗುವ ಯಾರದೋ ಸಂಗತಿ, ಮಾಹಿತಿ ಅಥವಾ ವಿಷಯಗಳಿಗೆ ಚಿಂತನೆಯ (Sadhguru Ayurveda) ಚಿತೆಯೊಳಗೆ ದಹಿಸುವ ಮನಸ್ಥಿತಿ ನಮ್ಮದಾಗುತ್ತಿದೆ. ಮೊಬೈಲ್ ಮಾತ್ರ ಜೀವನವಲ್ಲ, ಅದರ ಆಚೆಗೂ ಮೀರಿ ನಮ್ಮ ಬದುಕಿದೆ ಎನ್ನುವುದನ್ನು ಮಕ್ಕಳಿಗೆ ಪೋಷಕರು ಅರ್ಥೈಸಬೇಕಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕೆಂಬ ಮಹತ್ತರ ಉದ್ದೇಶದಿಂದಾಗಿ ಹಿಂದುಳಿದಿರುವ ತಾಲೂಕಿನ ಕೆಲ ಶಾಲೆಗಳನ್ನು ದತ್ತು ಸ್ವೀಕಾರ ಮಾಡಿ, ಮೂಲಸೌಕರ್ಯ ಒದಗಿಸುವ ಕಾರ್ಯ ನಮ್ಮ ಸಂಸ್ಥೆಯಿಂದ ನಡೆಯುತ್ತಿದೆ. ಶಾಲೆಗಳಿಗೆ ಪೀಠೋಪಕರಣ, ಕುಡಿಯುವ ನೀರು, ಕಂಪ್ಯೂಟರ್, ಶೌಚಾಲಯ, ಸ್ಮಾರ್ಟ್ ತರಗತಿಗಳಿಗೆ ಬೇಕಾದ ವಸ್ತುಗಳು ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಅದರಂತೆಯೇ, ನಾಗತೀಹಳ್ಳಿ ಸರ್ಕಾರಿ ಶಾಲೆಗೆ ಬೇಕಾಗಿರುವ ಮೂಲಸೌಕರ್ಯ ಒದಗಿಸಿ, ಮಕ್ಕಳ ಉತ್ತಮ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲು ನಮ್ಮ ಸದ್ಗುರು ಸಂಸ್ಥೆ ಸದಾ ಬದ್ಧವಾಗಿದೆ ಎಂದು ತಿಳಿಸಿದರು.
ಬಾಕ್ಸ್
ನಾಗತೀಹಳ್ಳಿ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದ ಜನಾಂಗದವರು ಹೆಚ್ಚಾಗಿ ವಾಸಮಾಡುವ ಗ್ರಾಮವಾಗಿದ್ದು, ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಗ್ರಾಮದ ಸರ್ಕಾರಿ ಶಾಲೆಗೆ ಮೂಲಸೌಕರ್ಯಗಳ ಅಗತ್ಯವಿತ್ತು. ಈ ವಿಷಯವನ್ನು ಸದ್ಗುರು ಆಯುರ್ವೇದ ಸಂಸ್ಥೆಯ ಮಾಲೀಕರಾದ ಡಿ.ಎಸ್. ಪ್ರದೀಪ್ ರವರಿಗೆ ತಿಳಿಸಲಾಯಿತು. ವಿಷಯ ತಿಳಿದ ತಕ್ಷಣವೇ ನಿಮ್ಮ ಶಾಲೆಯನ್ನು ನಮ್ಮ ಸಂಸ್ಥೆ ದತ್ತು ಸ್ವೀಕಾರ ಮಾಡುತ್ತಿದೆ. ಶಾಲೆಗೆ ಬೇಕಾಗಿರುವ ಸೌಕರ್ಯವನ್ನು ಒದಗಿಸುವ ಕೆಲಸ (Sadhguru Ayurveda) ಮಾಡುತ್ತೇವೆಂದು ಹೇಳಿದ್ದರು. ಅದರಂತೆಯೇ, ಶಾಲೆಗೆ ಬೇಕಾಗಿರುವ ಪರಿಕರಗಳನ್ನು ನೀಡುತ್ತಿದ್ದಾರೆ. ಶಾಲೆಗಳ ನಿಜವಾದ ದೇವಾಲಯವೆಂದು ಅರಿತು, ಶಾಲೆಗಳ ಪ್ರಗತಿ ಕಾರ್ಯಕ್ಕೆ ಮುಂದಡಿಯಿಟ್ಟಿರುವ ಪ್ರದೀಪ್ ರವರ ಕಾರ್ಯ ಶ್ಲಾಘನೀಯವಾದದ್ದು.
ಜಯಪ್ರಕಾಶ್.
ಮುಖ್ಯೋಪಾಧ್ಯಾಯರು
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ನಾಗತೀಹಳ್ಳಿ
ಇದನ್ನೂ ಓದಿ: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ಸ್ನಾತಕ, ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ | Karnataka Open University
ಬಾಕ್ಸ್
ನಾಗತೀಹಳ್ಳಿ ಗ್ರಾಮ ಜಿಲ್ಲೆ ಮತ್ತು ತಾಲೂಕಿನ ಗಡಿಗ್ರಾಮವಾಗಿದೆ. ಈ ಗ್ರಾಮದಲ್ಲಿ ಹೆಚ್ಚಾಗಿ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದ ಜನರು ಹೆಚ್ಚಾಗಿ ವಾಸ ಮಾಡುತ್ತಿದ್ದು, ಈ ಗ್ರಾಮದ ಮಕ್ಕಳ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು, ಶಾಲೆಗೆ ಬೇಕಾದ ಮೂಲಸೌಕರ್ಯ ಕಲ್ಪಿಸಬೇಕು ಎನ್ನುವ (Sadhguru Ayurveda) ಸದುದ್ದೇಶದಿಂದ ನಮ್ಮ ಸದ್ಗುರು ಸಂಸ್ಥೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ಬೇಕಾಗಿರುವ ಮೂಲಸೌಕರ್ಯ, ಮಕ್ಕಳ ಕಲಿಕೆಗೆ ಅಗತ್ಯವಿರುವ ಪರಿಕರಗಳನ್ನು ಒದಗಿಸಿಕೊಡುವ ಕಾರ್ಯ ನಡೆಯಲಿದೆ.
ಡಿ.ಎಸ್. ಪ್ರದೀಪ್
ಮಾಲೀಕರು, ಸದ್ಗುರು ಆಯುರ್ವೇದ ಸಂಸ್ಥೆ, ಹೊಸದುರ್ಗ
