Chitradurga news|nammajana.com|30-6-2024
ನಮ್ಮಜನ.ಕಾಂ, ಹೊಸದುರ್ಗ: ನಾವುಗಳು ಒತ್ತಡದ ಬದುಕಿನಿಂದ ದೂರ ಬಂದು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವನ್ನ ಸದೃಢಗೊಳಿಸಿದಾಗ ಮಾತ್ರ ಸಮಾಜದಲ್ಲಿ ಸಾಧನೆ ಮಾಡಬಹುದು ಒತ್ತಡ ಮತ್ತು ಜಂಜಾಟದಿಂದ (Sadhguru DS Pradeep) ದೂರವಾದಾಗ ನೆಮ್ಮದಿಯ ಜೀವನ ನಡೆಸಲು ಸಾಧ್ಯ, ಎಂದು ಸದ್ಗುರು ಆಯುರ್ವೇದ ಮಾಲೀಕ ಉದ್ಯಮಿ ಡಿ.ಎಸ್ ಪ್ರದೀಪ್ ಜನಿಸಿದರು.
ವಿಶ್ವ ಹಿಂದೂ ಪರಿಷತ್ – ಬಜರಂಗದಳ ಹೊಸದುರ್ಗ ಪ್ರಖಂಡ ವತಿಯಿಂದ ನಡೆದ ಸೇವಾ ಸಪ್ತಾಹ ನಿಮಿತ್ತ ನಗರದ ಕೆನರಾ ಬ್ಯಾಂಕ್ ವೃತ್ತದಲ್ಲಿ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಮ್ಮ ಪೂರ್ವಜರು ಪ್ರತಿನಿತ್ಯ (Sadhguru DS Pradeep) ಸೇವಿಸುತ್ತಿದ್ದ ಆಹಾರ ಪದಾರ್ಥಗಳನ್ನು ಯುವ ಪೀಳಿಗೆ ದೂರ ಮಾಡಿ ಪಿಜ್ಜಾ ಬರ್ಗರ್ ಬೇಕರಿ ತಿನಿಸು ಈ ಆಹಾರ ವಸ್ತುಗಳಿಗೆ ಮಾರುಹೋಗಿ ನಮ್ಮ ಆರೋಗ್ಯದಲ್ಲಿ ಗಣನೀಯವಾಗಿ ವ್ಯತ್ಯಾಸವಾಗಿ ದೈಹಿಕವಾಗಿ ಯುವ ಪೀಳಿಗೆಯ ಆರೋಗ್ಯ ಕುಂದುತ್ತಿರುವುದು ವಿಷಾದನೀಯ,
ನಾವು ಸೇವಿಸುತ್ತಿರುವ ಸಾವಯವ ಉತ್ತೇಜಿತ ರಾಗಿ ಜೋಳ ನವಣೆ ಸಜ್ಜೆಯಂತಹ ಆಹಾರಗಳು ನಮ್ಮ ಸದೃಢ ಆರೋಗ್ಯಕ್ಕೆ ಸಹಕಾರಿಯಾಗುತ್ತವೆ. ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ರಕ್ತ ಪರೀಕ್ಷೆ ಮಾಡಿಸಿ ಮಧುಮೇಹ ರಕ್ತದೊತ್ತಡ ದಂತಹ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಪ್ರತಿನಿತ್ಯ ಬೆಳಿಗ್ಗೆ ವಾಯು ವಿಹಾರ ಹೋಗುವುದರಿಂದ ಪರಿಶುದ್ಧವಾದ ಆಮ್ಲಜನಕ ನಮ್ಮ ದೇಹಸೇರಿ ಶ್ವಾಸಕೋಶವನ್ನು ಶುದ್ಧೀಕರಿಸುತ್ತದೆ ಎಂದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಮಾತನಾಡಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಘಟನೆ ಇದೊಂದು ರಾಷ್ಟ್ರಭಕ್ತ ಕರುಣರ ಸಂಘಟನೆಯಾಗಿದ್ದು ಈ ಸಮಾಜಕ್ಕೆ (Sadhguru DS Pradeep) ಪ್ರಾಕೃತಿಕ ವಿಕೋಪಗಳಂತಹ ಸಮಸ್ಯೆ ಬಂದಾಗ ನಮ್ಮ ಕಾರ್ಯಕರ್ತರು ಇಡೀ ದೇಶದಾದ್ಯಂತ ಕೊರೋನಾ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರಜೆಗಳ ರಕ್ಷಣೆಗೆ ಹೋರಾಡುತ್ತಾರೆ , ಮಾದಕ ವ್ಯಸನಿಗಳಿಂದ ದೂರವಾಗಿ ಶುದ್ಧವಾದ ಆಹಾರ ಸೇವನೆ ಮಾಡಿ ಸದೃಢ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಈ ದೇಶ ಸದೃಢ ದೇಶ ಎಂದು ಹೇಳಲು ಸಾಧ್ಯ ಎಂದರು.
ಹೊಸದುರ್ಗದ ಹೆಸರಾಂತ ವೈದ್ಯ ಡಾ.ಬ್ರಹ್ಮರಾಜ್ ಮತ್ತು ತಂಡದಿಂದ ಸುಮಾರು 70 ಕ್ಕೂ ಹೆಚ್ಚು ರೋಗಿಗಳಿಗೆ ಮಧುಮೇಹ ಚರ್ಮರೋಗಕ್ಕೆ ಸಂಬಂಧಿಸಿದಂತೆ ಭತ್ತದ (Sadhguru DS Pradeep) ರಕ್ತದೊತ್ತಡಡ ತಪಾಸಣೆ ಮಾಡಲಾಯಿತು.ಈ ಆರೋಗ್ಯ ತಪಾಸಣೆಯಲ್ಲಿ ಸಾಮಾನ್ಯ ಚಿಕಿತ್ಸೆ,ಹೃದಯ ಸಂಬಂಧಿತ ಚಿಕಿತ್ಸೆಗೆ ಚಿಕಿತ್ಸೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜಸೇವಕ ತುಂಬಿನಕೆರೆ ಬಸವರಾಜ್ ತಾಲ್ಲೂಕ ಭಾಜಪ ಪ್ರಧಾನ ಕಾರ್ಯದರ್ಶಿ ಜಗದೀಶ್ ರಾಮಯ್ಯ, ಬಜರಂಗದಳ ಸಂಚಾಲಕ ಸಿದ್ದೇಶ್ ಬಿ ಎಚ್ ಪಿ ಕಾರ್ಯದರ್ಶಿ ಕುಮಾರ್, ರವಿಕಿರಣ್_ಪಾಟೀಲ್ ಪಂಪ, ಚೇತನ್ ಪೀಲಾಪುರ ರವಿ.ಕಣ್ವ ಮನು, ಹೊನ್ನೇನಹಳ್ಳಿ ಶ್ರೀನಿವಾಸ್,ವಿದ್ಯಾರ್ಥಿ ಪ್ರಮುಖ್ ಗಜೇಂದ್ರ ಉಷಾ,ರಾಧ, ಹೆಚ್.ಒ. ಉಪಸ್ಥಿತರಿದ್ದರು.