Chitradurga news| nammajana.com|7-7-2024
ನಮ್ಮಜನ.ಕಾಂ, ಚಿತ್ರದುರ್ಗ: ರಾಜ್ಯದಲ್ಲಿ ಉಪ ಚುನಾವಣೆ (Sandur by-election) ಕಾವು ಜೋರಾಗುತ್ತಿದೆ. ಸ್ಥಳೀಯ ಚುನಾವಣೆಯ ಸಹ ಜೊತೆಯಲ್ಲಿ ನಡೆಯಲಿದ್ದು ರಾಜ್ಯ ಬಿಜೆಪಿ ಉಪಚುನಾವಣೆ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ವಿಶೇಷವಾಗಿ ತುಕರಾಂ ರಾಜೀನಾಮೆ ನೀಡಿ ಸಂಸದರಾಗಿ ಆಯ್ಕೆಯಾಗಿರುವ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ (Sandur by-election) ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ನೇಮಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯ ಆಹಾರ ಪದ್ದತಿ ಮತ್ತು ಗರ್ಭಧಾರಣೆಯ ಬಗ್ಗೆ ಎಚ್ಚರ ಅಗತ್ಯ | Health Tips
ಸಂಡೂರು ಕ್ಷೇತ್ರದ ಉಸ್ತುವಾರಿಗಳು(Sandur by-election)
ಸಂಡೂರು ಕ್ಷೇತ್ರದ ಉಪಚುನಾವಣೆಗೆ ಸಂಸದರಾದ ಗೋವಿಂದ್ ಕಾರಜೋಳ್, ಶಾಸಕ ವಿ.ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್, ಕೆಎಸ್ ನವೀನ್ ಜವಾಬ್ದಾರಿಯನ್ನು ನೀಡಲಾಗಿದೆ.