Chitradurga news|nammajana.com|19-6-2024
ನಮ್ಮ ಜನ.ಕಾಂ, ಹೊಸದುರ್ಗ: ಧರ್ಮ, ಸಮಾಜ, ಮಠ, ಸಂಸ್ಕ್ರತಿ ಕುರಿತಂತೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಮಠಾಧೀಶರು ಹಾಗೂ ಅವರ ಉತ್ತರಾಧಿಕಾರಿಗಳಿಗೆ ಜುಲೈ 1 ರಿಂದ 5 ವರೆಗೆ ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ‘ವಚನ ಕಮ್ಮಟ’ ನಡೆಯಲಿದೆ ಎಂದು
ಸಾಣೇಹಳ್ಳಿ (Sanehalli) ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಠಗಳು ಮಾರ್ಗದರ್ಶನ ಮಾಡುವ ಕೇಂದ್ರಗಳಾಗಬೇಕು. ಆದರೆ ಪ್ರಸ್ತುತ ಹಲವು ಮಠಗಳು ಅಜ್ಞಾನ, ಮೌಡ್ಯ, ಕಂದಾಚಾರಗಳಿಂದ ತುಂಬಿ ತುಳುಕುತ್ತಿರುವುದನ್ನು ಕೆಲವರು ಕಂಡಿದ್ದಾರೆ. ಕೆಲ ಬಸವ ಪರಂಪರೆ ಮಠಗಳು ಬಸವ ತತ್ವ ಹೇಳುತ್ತವೆ, ಆದರೆ ಅದಕ್ಕೆ ವಿರುದ್ಧದ ಆಚರಣೆ ನಡೆಯುತ್ತಿದೆ. ಹೀಗಾಗಿ ಸ್ವಾಮೀಜಿಗಳಿಗೆ ಬಸವ ತತ್ವ ಪ್ರಜ್ಞೆ ಮೂಡಿಸಿದರೆ, ಅದರ ಮೂಲಕ ಸಮಾಜದ ಪರಿವರ್ತನೆಯಾಗಬಹುದು ಎಂಬ ಉದ್ದೇಶದಿಂದ ಐದು ದಿನಗಳ ಕಾಲ ವಚನ ಕಮ್ಮಟ ಕಾರ್ಯಕ್ರಮ ಆಯೋಜಿಸಲಾಗಿದೆ.
ವಚನ ಕಮ್ಮಟ (Sanehalli) ಸಂವಾದದ ರೂಪದಲ್ಲಿರುತ್ತದೆ. ಉಪನ್ಯಾಸಕ ವಿಷಯದ ಬಗ್ಗೆ ಮಾಹಿತಿ ನೀಡುವರು. ಚರ್ಚೆ ಮತ್ತು ಸಂವಾದಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಮಠಾಧೀಪತಿಗಳ ಆತ್ಮಾವಲೋಕನಕ್ಕೆ ಇದೊಂದು ಅವಕಾಶ. ಸುಮಾರು 50 ಕ್ಕೂ ಅಧಿಕ ಮಠಾಧೀಶರು ಭಾಗವಹಿಸುವ ನಿರೀಕ್ಷೆಯಿದೆ. ಈ ವಿನೂತನ ಪ್ರಯತ್ನ ಯಶಸ್ವಿಯಾದರೆ, ಯುವ ಪೀಳಿಗೆಗೂ ಈ ಕಮ್ಮಟ ಆಯೋಜಿಸುವ ಉದ್ದೇಶವಿದೆ. ನಿತ್ಯ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಯೋಗಾಸನ, ಶಿವಧ್ವಜಾರೋಹಣ, ಶಿವಮಂತ್ರ ಲೇಖನ, ವಚನಗೀತೆ, ಇಷ್ಟಲಿಂಗ ಪೂಜೆ, ವಿವಿಧ ವಿಷಯಗಳ ಮೇಲೆ ಗೋಷ್ಠಿ ಮತ್ತು ಸಂವಾದಗಳು, ಪೂಜ್ಯರ ಆರ್ಶೀವಚನ, ವಚನ ನೃತ್ಯ ರೂಪಕ ಹಾಗೂ ಶಿವಕುಮಾರ ಕಲಾಸಂಘದ ಹಿರಿಯ ಕಲಾವಿದರಿಂದ ಉರಿಲಿಂಗ ಪೆದ್ದಿ, ಮರಣವೇ ಮಹಾನವಮಿ, ಕ್ರಾಂತಿಗಂಗೋತ್ರಿ ಅಕ್ಕ ನಾಗಲಾಂಬಿಕೆ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ಚಲನಚಿತ್ರದ ನಟ ನಟಿಯರನ್ನು ಅಭಿಮಾನಿಗಳು (Sanehalli) ದೇವರ ರೀತಿಯಲ್ಲಿ ಭಾವಿಸುತ್ತಾರೆ. ಹಿಂದಿನ ನಟ ನಟಿಯರು ಈ ಭಾವನೆಯನ್ನು ಗಳಿಸಿ, ಉಳಿಸಿಕೊಂಡಿದ್ದರು. ಆದರೆ ಪ್ರಸ್ತುತ ಕೆಲ ನಟ ನಟಿಯರು ದೆವ್ವದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಕಾರಣ ಅವರಿಗೆ ಸಾಕಷ್ಟು ಸಂಪನ್ಮೂಲ ದೊರೆಯುತ್ತಿದೆ. ಗುಂಪುಗಾರಿಕೆ ಅಧಿಕವಾಗಿದೆ. ತುಂಬಾ ಜವಾಬ್ದಾರಿ ಇರೋ ಅಭಿಮಾನಿಗಳಿಗಿಂತ ಹುಚ್ಚೆದ್ದು ಕುಣಿಯೋ ಅಭಿಮಾನಿಗಳು ಹೆಚ್ಚಾಗಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252