Chitradurga news|Nammajana.com|11-8-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಿ.ಡಿ. ರಸ್ತೆ ಶಾಖೆಯ (SBI Bank) ಮೇಲ್ಭಾಗದಲ್ಲಿ ನೂತನವಾಗಿ ನಿರ್ಮಿಸಿರುವಂತಹ ಚಿತ್ರದುರ್ಗ ಪ್ರಾದೇಶಿಕ ವ್ಯವಹಾರ ಕಚೇರಿಯನ್ನು ಇಂದು ಉದ್ಘಾಟಿಸಲಾಯಿತು.

ಹಲವು ವರ್ಷಗಳ ಕನಸು ನನಸು
ಕಳೆದ ಹಲವು ವರ್ಷಗಳಿಂದ ದಾವಣಗೆರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಕಚೇರಿಯ ಬರುವಿಕೆಗಾಗಿ ದೀರ್ಘಕಾಲದ ನಿರೀಕ್ಷೆ ನಂತರ ಚಿತ್ರದುರ್ಗಕ್ಕೆ (SBI Bank) ಸ್ಥಳಾಂತರಗೊಂಡಿದೆ. ಈ ನೂತನ ಪ್ರಾದೇಶಿಕ ವ್ಯವಹಾರ ಕಚೇರಿಯಿಂದ ಗ್ರಾಹಕರಿಗೆ ಉತ್ತಮ ಹಾಗೂ ತ್ವರಿತ ರೀತಿಯಲ್ಲಿ ಬ್ಯಾಂಕಿಂಗ್ ಸೇವೆಯನ್ನು ಒದಗಿಸಲು ನೆರವಾಗಲಿದೆ.
ಶ್ರೀಮತಿ ಜೂಹಿ ಸ್ಮಿತಾ ಸಿನ್ಹಾ ಅವರಿಂದ ಉದ್ಘಾಟನೆ
ಚಿತ್ರದುರ್ಗ ನಗರದ ನೂತನ ಪ್ರಾದೇಶಿಕ ವ್ಯವಹಾರ ಕಚೇರಿಯನ್ನು ಜೂಹಿ ಸ್ಮಿತಾ ಸಿನ್ಹಾ, CGM, ಬೆಂಗಳೂರು ವೃತ್ತ ಇವರು ಕಚೇರಿಯ ಉದ್ಘಾಟನೆಯನ್ನು ಸಂತೋಷದಿಂದ (SBI Bank) ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿದ ಅತಿಥಿಗಳು
ಕಾರ್ಯಕ್ರಮದಲ್ಲಿ ಜಿಎಂ ನೆಟವರ್ಕ್-2 ನ ಲೇಖಾ ಮೆನನ್,
ಶ್ರೀ ಆಲೋಕ್ ಚಂದ್ರ, DGM, ಎಒ ಬಳ್ಳಾರಿ
ಅವರು ಗೌರವಾನ್ವಿತ ಅತಿಥಿಗಳಾಗಿ ಹಾಜರಿದ್ದರು. ಕಾರ್ಯಕ್ರಮವನ್ನು ಪ್ರಾದೇಶಿಕ ವ್ಯವಸ್ಥಾಪಕ
ಶ್ರೀ ಗಜೇಂದ್ರ ಕುಮಾರ್ ಸಮಾರಂಭದ ನೇತೃತ್ವ ವಹಿಸಿದ್ದರು.
ಇದನ್ನೂ ಓದಿ: ನಾಯಕ ಸಮಾಜದ ಮತ್ತೊಂದು ವಿಕೆಟ್ ಔಟ್ | ಸಚಿವ ಕೆ.ಎನ್. ರಾಜಣ್ಣ ರಾಜೀನಾಮೆ
ಗ್ರಾಹಕರ ಭೇಟಿ ಮಾಡಿದ ಸಿಜಿಎಂ
ಈ ಸಂದರ್ಭದಲ್ಲಿ CGM ಜೂಹಿ ಸ್ಮಿತಾ ಸಿನ್ಹಾ ಅವರು ಚಿತ್ರದುರ್ಗ ನಗರದ ಪ್ರಮುಖ ಗ್ರಾಹಕರನ್ನು ಭೇಟಿಯಾಗಿ ಅಭಿನಂದನೆಯ ಸಂಕೇತವಾಗಿ ಸಸಿಗಳನ್ನು ನೀಡಿ ಗೌರವಿಸಿದರು. ಪ್ರಾದೇಶಿಕ ಕಚೇರಿ ಚಿತ್ರದುರ್ಗಕ್ಕೆ (SBI Bank) ಬಂದಿರುವುದರಿಂದ ಸ್ಥಳೀಯ ಗ್ರಾಹಕರು ಹರ್ಷ ವ್ಯಕ್ತಪಡಿಸಿ, ಮ್ಯಾಡಂಗೆ ತಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
