Chitradurga news | nammajana.com | 02-08-2025
ನಮ್ಮಜನ.ಕಾಂ, ಹಿರಿಯೂರು: ತಾಲೂಕಿನ(HIRIYAR) ಗೌಡನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಕುಡಿಯುವ ನೀರುಕೊಡಿ ಎಂದು ಶುಕ್ರವಾರ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ
ಗೌಡನಹಳ್ಳಿ ಗ್ರಾಮ ಸೇರಿದಂತೆ(HIRIYAR)ಶಾಲೆಯಲ್ಲಿಯೂ ಸಹ ಕುಡಿಯುವ ನೀರಿನ ತೊಂದರೆಯಾಗಿದೆ ಎಂದು ಶಾಲಾ ಮಕ್ಕಳು ಪ್ರತಿಭಟಿಸಿದ ವಿಷಯ ತಿಳಿದು ಸ್ಥಳಕ್ಕೆ ತಹಸೀಲ್ದಾರ್ ಸಿದ್ದೇಶ್ ಹಾಗೂ ಪ್ರಭಾರ ಇಒ ಹಸೇನ್ ಭಾಷಾ ಭೇಟಿ ನೀಡಿ, ಶೀಘ್ರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತಾಪಂ ಪ್ರಭಾರ ಇಒ ಹಸೇನ್ ಭಾಷ ಪ್ರತಿಕ್ರಿಯಿಸಿ, ಶಾಲೆಯಲ್ಲಿ ನೀರಿನ ಸಮಸ್ಯೆ ಇಲ್ಲ. ಬೆಳಗ್ಗೆಯೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿದೆ.
ಗೌಡನಹಳ್ಳಿಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಚಾಲನೆಯಲ್ಲಿದೆ. ಒಂದು ಕೊಳವೆ ಬಾವಿಯಿಂದ ಓವರ್ ಟ್ಯಾಂಕ್ ಗೆ ನೀರು ಬಿಡಲಾಗುತ್ತಿದೆ. ಕ್ಯಾನ್ ಮೂಲಕ ಶುದ್ಧ ಕುಡಿಯುವ ನೀರು ಬಳಕೆ ಮಾಡುತ್ತಿದ್ದು ಶಾಲೆಯ ಎಸ್‌ಡಿಎಂಸಿ ಸದಸ್ಯರು ಫೋಕಸ್ ಮಾಡಲು ಶಾಲಾ ವಿದ್ಯಾರ್ಥಿಗಳನ್ನು ಕೂರಿಸಿ ಘೋಷಣೆ ಕೂಗಿಸಿದ್ದಾರೆ.
ಇದನ್ನೂ ಓದಿ: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭ
ಸ್ಥಳಕ್ಕೆ ಭೇಟಿ ನೀಡಿ ಮಕ್ಕಳಿಂದ(HIRIYAR) ಘೋಷಣೆ ಕೂಗಿಸಬಾರದು ಎಂದು ಸದಸ್ಯರಿಗೆ ತಿಳಿಹೇಳಿ ಬರಲಾಗಿದೆ. ಗ್ರಾಮದಲ್ಲಿ ಎರಡು ಕೊಳವೆ ಬಾವಿಯಿದ್ದು, ಒಂದರಲ್ಲಿ ಇಳುವರಿ ಕಡಿಮೆ ಇರುವುದರಿಂದ ಕಡಿಮೆ ನೀರು ಬರುತ್ತಿದೆ. ಈಗಾಗಲೇ ಮತ್ತೊಂದು ಬೋವೆಲ್ ಕೊರೆಯಲು ಇಳುವರಿ ಇರುವ ಕಡೆ ಸರ್ವೇ ಮಾಡಲಾಗಿದೆ ಎಂದು ಹೇಳಿದರು.
ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಸೋಮಶೇಖರ್, ಲಕ್ಷ್ಮಣಪ್ಪಕುಮಾರಸ್ವಾಮಿ, ಕೆ.ರಂಗನಾಥ, ಸುರೇಶ್, ರಾಘು, ಸುಮಂತ್, ಪ್ರತಾಪಸಿಂಹ, ನಾಗೇಂದ್ರಪ್ಪ, ಪರಮೇಶ್ವಪ್ಪ, ನರೇಟದ್ರಪ್ಪ ಮುಂತಾದವರು ಹಾಜರಿದ್ದರು.
