Chitradurga news | nammajana.com | 24-8-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲೂಕಿನ ಸಾಣಿಕೆರೆ ಗ್ರಾಮದಲ್ಲಿ ಎರಡು ಮನೆ ಒಡೆದು 37 ಸಾವಿರ ನಗದು ಮತ್ತು 38 ಗ್ರಾಂ ಚಿನ್ನ ಹಾಗೂ 250 ಗ್ರಾಂ ಬೆಳ್ಳಿ ಆಭರಣಗಳನ್ನು ಕಳ್ಳರು (Serial theft) ದೋಚಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಗ್ರಾಮದಲ್ಲಿನ ಶಿವಕುಮಾರ್, ನರಸಿಂಹಮೂರ್ತಿ ಈ ಎರಡು ಮನೆಗಳಲ್ಲಿ ಯಾರು ಇಲ್ಲದ ಮಾಹಿತಿ ತಿಳಿದ ಕಳ್ಳರು ಸರಣಿ (Serial theft) ಕಳ್ಳತನ ಮಾಡಿದ್ದಾರೆ.

ನರಸಿಂಹಮೂರ್ತಿ ಅವರ ತಾಯಿ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದರಿಂದ ಹಿಂದಿನ ಬಾಗಿಲು ಒಡೆದು ಬೀರುವಿನಲ್ಲಿದ್ದ 12 ಸಾವಿರ ನಗದು ಹಾಗೂ 25 ಗ್ರಾಂ ಸರ, 5 ಗ್ರಾಂ ಉಂಗುರ ಮತ್ತು 8 ಗ್ರಾಂ ಕಿವಿಯೋಲೆ ಹೀಗೆ ಸುಮಾರು 1.30 ಲಕ್ಷ ಮೌಲ್ಯದ ಚಿನ್ನ ದೋಚಿದ ಬಳಿಕ ಮತ್ತೊಂದು (Serial theft) ಮನೆಗೆ ಕನ್ನ ಹಾಕಿದ್ದಾರೆ.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ 24-8-2024 | ಯಾವ್ಯಾವ ರಾಶಿಗೆ ಶುಭ, ಅಶುಭ?
ಶಿವಕುಮಾರ್ ಎಂಬವರು ಬೆಂಗಳೂರಿಗೆ ಹೋಗಿದ್ದರಿಂದ ಮನೆಯ ಮುಖ್ಯ ದ್ವಾರದ ಬಾಗಿಲು ಮುರಿದು ವಾರ್ಡ್ ರೂಫ್ ನಲ್ಲಿದ್ದ 15 ಸಾವಿರ ನಗದು ಮತ್ತು 250 ಗ್ರಾಂ ಬೆಳ್ಳಿ (Serial theft) ದೋಚಿಕೊಂಡು ಹೋಗಿದ್ದಾರೆ. ಘಟನಾಸ್ಥಳಕ್ಕೆ ಪೊಲೀಸರು ಮತ್ತು ಶ್ವಾನದಳದ ಜತೆಗೆ ಬೆರಳಚ್ಚು ತಜ್ಞರು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಇಂದಿನಿಂದ ನಾಲ್ಕು ದಿನ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ | Power Cut
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252