Chitradurga News | Nammajana.com | 30-08-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಚಿತ್ರದುರ್ಗದ ನಗರಸಭೆಯಲ್ಲಿ(Municipal Council) ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪ್ರಭಾರೆ ಅಧ್ಯಕ್ಷರಾಗಿ ಉಪಾಧ್ಯಕ್ಷರಾದ ಶಕೀಲ ಬಾನು ಆಧಿಕಾರ ಸ್ವೀಕಾರ ಮಾಡಿದರು.

ಇದನ್ನೂ ಓದಿ: ಡಿಜೆಗೆ ಸರಕಾರಕ್ಕೆ ಮನವಿ: ಮಾದಾರ ಚನ್ನಯ್ಯ ಶ್ರೀ
ನಗರಸಭೆಗೆ ಕಳೆದ ಒಂದು ವರ್ಷದ ಹಿಂದೆ ಸುಮಿತಾರವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದರು, ಈಗ ಅವರ ಒಪ್ಪಂದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು, ಕಾನೂನು ಪ್ರಕಾರ ಅಧ್ಯಕ್ಷ ಸ್ಥಾನ ತೆರವಾದಾಗ ಉಪಾಧ್ಯಕ್ಷರು ಪ್ರಬಾರೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುವುದು ಸಾಮಾನ್ಯವಾಗಿದೆ.
ಇದೇ ಹಿನ್ನಲೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ನಗರಸಭೆಯ ಉಪಾಧ್ಯಕ್ಷರಾದ ಶಕೀಲ ಬಾನು ಅಧ್ಯಕ್ಷರಾಗಿ ಹಿಂದಿನ ಅಧ್ಯಕ್ಷರಿಂದ ಅಧಿಕಾರವನ್ನು ಸ್ವೀಕಾರ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷರಾದ ಸಮಿತಾ, ಕಳೆದ ಒಂದು ವರ್ಷದಿಂದ ನಾನು ಚಿತ್ರದುರ್ಗ ನಗರಸಭೆಯ ಅಧ್ಯಕ್ಷರಾಗಿ ಅಧಿಕಾರವನ್ನು ನಡೆಸಿದ್ದೇನೆ.
ಈ ಸಮಯದಲ್ಲಿ ನಗರಸಭೆಯ ಪೌರಾಯುಕ್ತರು, ಎಲ್ಲಾ ಸಿಬ್ಬಂದಿಗಳು ಉತ್ತಮವಾದ ಸಹಕಾರವನ್ನು ನೀಡಿದ್ದಾರೆ ಎಂದರು.
ನೂತನ ಅಧ್ಯಕ್ಷರಾದ ಶಕೀಲಬಾನು ಮಾತನಾಡಿ, ನನಗೆ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಸಂತೋಷವಾಗಿದೆ. ಈ ಸಮಯದಲ್ಲಿ ಚಿತ್ರದುರ್ಗ ನಗರದಲ್ಲಿ ವಿವಿಧ ರೀತಿಯ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಇದಕ್ಕೆ ನಗರಸಭೆಯ ಸದಸ್ಯರು, ಪೌರಾಯುಕ್ತರು ಹಾಗೂ ಸಿಬ್ಬಂದಿ ಸಹಕಾರ ನೀಡುವಂತೆ ಮನವಿ ಮಾಡಿದರು.
ಇದನ್ನೂ ಓದಿ: Today Gold Rate | ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
ನಗರಸಭೆ ಪೌರಾಯುಕ್ತೆ ರೇಣುಕಾ,(Municipal Council) ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ನಸ್ರುಲ್ಲಾ, ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ನಗರಸಭೆಯ ಮಾಜಿ ಸದಸ್ಯರಾದ ಮಹೇಶ್, ರಮೇಶ್, ನಿಸಾರ್, ನ್ಯಾಯಾವಾದಿಗಳಾದ ಉಮೇಶ್, ಜಯ್ಯಣ್ಣ, ಸೈಯದ್ ಸೇರಿದಂತೆ ಇತರರು ಭಾಗವಹಿಸಿದ್ದರು.
