Chitradurga news | nammajana.com | 14-5-2024
ನಮ್ಮಜನ.ಕಾಂ, ಚಿತ್ರದುರ್ಗ: ಬಿರುಗಾಳಿ ಸಹಿತ ಸುರಿದ ಮಳೆಗೆ ಉದುರಿ ಬಿದ್ದ ಹುಣಸೆ ಹಣ್ಣು ತಿಂದು ಸುಮಾರು 12 ಕುರಿ ಮೃತಪಟ್ಟ ಘಟನೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿ ಕರಿಯಾಲ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಕರಿಯಾಲ ಗ್ರಾಮದ ರಾಮಕೃಷ್ಣಪ್ಪ ಎಂಬುವವರ 70 ಕುರಿಗಳಲ್ಲಿ 12 ಕುರಿಗಳು ಸಾವನ್ನಪ್ಪಿದ್ದು ಇನ್ನೂ ಹತ್ತು ಕುರಿಗಳ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ಹಿರಿಯೂರು: IPL ಬೆಟ್ಟಿಂಗ್ ದಂಧೆ ಇಬ್ಬರ ಬಂಧನ
ಈ ಘಟನೆ ತಿಳಿದ ಪಶುವೈದ್ಯ ಡಾ. ಅರುಣ್ ಚಿಕಿತ್ಸೆ ನೀಡಿದ್ದು, ಕೆಲವು ಕುರಿಗಳು ಸುಧಾರಿಸಿಕೊಳ್ಳುತ್ತಿವೆ.
ಹುಣಸೆ ಮರದಲ್ಲಿ ಹಣ್ಣು ಗಾಳಿ ಮಳೆಗೆ ಉದುರಿವೆ. ಈ ಹುಣಸೆಹಣ್ಣು ತಿಂದಂತಹ ಕುರಿಗಳ ಕುತ್ತಿಗೆ ಮತ್ತು ಹೊಟ್ಟೆಯಲ್ಲಿ ಬೀಜಗಳು ಸೇರಿ ಹೊಟ್ಟೆ ಊದಿಕೊಂಡ ಪರಿಣಾಮ ಕುರಿಗಳು ಸಾವನ್ನಪ್ಪಿವೆ ಎಂದು ಮೂಲಗಳು ಮಾಹಿತಿ ತಿಳಿಸಿದ್ದಾರೆ.