Chitradurga News |Nammajana. Com | 23-4-2024
ನಮ್ಮಜನ.ಕಾಂ. ಚಿತ್ರದುರ್ಗ :ಚಿತ್ರದುರ್ಗ ಮುರುಘಾ ಶರಣರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಪೋಕ್ಸೋ ಪ್ರಕರಣದಲ್ಲಿ ಬಿಗ್ ರಿಲೀಫ್ ನಲ್ಲಿದ್ದ ಶರಣರಿಗೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಆದೇಶ ನೀಡಿದ್ದು ಚಿಂತೆಗಿಡು ಮಾಡಿದೆ.
ಶರಣರ ಬಂಧನವಾಗಿದ್ದು ಏಕೆ?
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಫೋಕ್ಸೋ ಪ್ರಕರಣದಲ್ಲಿ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಹೊರಗಡೆ ಇದ್ದರು.ಆದರೆ ಈ ಪ್ರಕರಣಕ್ಕೆ ಹೊಸ ತಿರುವಿನಂತೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶ್ರೀಗಳ ಜಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ಜಾಮೀನು ನೀಡಿದ್ದ ಕಾರಣದಿಂದ ಹೊರಗಿದ್ದ ಮುರುಘಾ ಶ್ರೀ ಒಂದು ವಾರದಲ್ಲಿ ನ್ಯಾಯಾಂಗ ಬಂಧನಕ್ಕೆ ತೆರಳುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.