
Chitradurga news|nammajana.com|23-11-2024
ನಮ್ಮಜನ.ಕಾಂ, ಚಿತ್ರದುರ್ಗ: ನಮಗೆ ಪ್ರೋತ್ಸಾಹ ನೀಡಿದಂತೆ ಹೊಸ ಕಲಾವಿದರ ಚಿತ್ರಗಳನ್ನು ವಿಕ್ಷಣೆ ಮಾಡುವುದರ ಮೂಲಕ ಪ್ರೋತ್ಸಾಹವನ್ನು ನೀಡುವಂತೆ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ (Shivraj Kumar) ಹೀರೋ ಶಿವರಾಜ ಕುಮಾರ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಚಿತ್ರದುರ್ಗದ ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ಅವರು ನಟಿಸಿದ “ಭೈರತಿ ರಣಗಲ್” ಚಿತ್ರ ತೆರೆ ಕಂಡಿದ್ದು (Shivraj Kumar) ಅಭಿಮಾನಿಗಳಿಂದಲೂ ಸಹಾ ಉತ್ತಮವಾದ ಪ್ರೋತ್ಸಾಹ ಸಿಕ್ಕಿದೆ.

ಈ ಹಿನ್ನಲೆಯಲ್ಲಿ ಚಿತ್ರ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಿಗೆ ಭೇಟಿಯನ್ನು ನೀಡುವ ಸಲುವಾಗಿ ಚಿತ್ರದುರ್ಗ ನಗರಕ್ಕೆ ಪತ್ನಿ ಗೀತಾ ಶಿವರಾಜ ಕುಮಾರ್ ಜೊತೆಯಾಗಿ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ 3-4 ದಶಕಗಳಿಂದ ನಮಗೆ ಆಭಿಮಾನಿಗಳು ಚಿತ್ರವನ್ನು ವೀಕ್ಷಣೆ ಮಾಡುವುದರ ಮೂಲಕ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ.
ಇತ್ತೀಚಿನ ದಿನಮಾನದಲ್ಲಿ ಪ್ರೇಕ್ಷಕರು ಚಲನ ಚಿತ್ರ ಮಂದಿರಕ್ಕೆ ಬರುವುದು ಕಡಿಮೆಯಾಗಿತ್ತು, ಆದರೆ ಇತ್ತೀಚಿನ ದಿನದಲ್ಲಿ ಉತ್ತಮವಾದ ಚಿತ್ರಗಳು ತೆರೆ ಕಾಣುತ್ತಿರುವುದರಿಂದ ಪ್ರೇಕ್ಷಕರು ಚಿತ್ರ ಮಂದಿರದತ್ತ ಕಾಲು ಹಾಕುತ್ತಿದ್ದಾರೆ. ಉತ್ತಮವಾದ (Shivraj Kumar) ಚಿತ್ರಗಳನ್ನು ನೀಡಿದರೆ ಪ್ರೇಕ್ಷಕರು ಬರುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದರು.
ಅಪ್ಪು ನಮ್ಮೆಲ್ಲರಲ್ಲು ಇದ್ದಾನೆ, ಅಪ್ಪು ನೆನೆಸಿಕೊಳ್ಳದ ದಿನಗಳಿಲ್ಲ. ಅವನನ್ನ ನೆನೆಸಿಕೊಳ್ಳದಿದ್ದರೆ ನಾನು ಅಣ್ಣನೆ ಆಗುವುದಿಲ್ಲ. ಅಪ್ಪುನ ನೆನೆಸಿಕೊಳ್ಳಲು ಯಾವಾಗ ಆದರು ಸರಿ ಅಪ್ಪು, ನನ್ನೊಳಗೆ ಸದಾ ಅಪ್ಪು ಇದ್ದಾನೆ ಎಂದಾಗ ನೆನೆಸಿಕೊಳ್ಳುವ ಅವಶ್ಯಕತೆಯೇ ಇಲ್ಲ.
ಭೈರತಿ ರಣಗಲ್ ಯಶಸ್ವಿಯಾಗಿ ನಡೆಯುತ್ತಿದೆ. ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವ ಅಪವಾದ ಇತ್ತು. ಆದರೆ, ಜನ ಬರುತ್ತಿದ್ದಾರೆ. ಅಮೇರಿಕಾದಲ್ಲೂ ಎರಡನೇ ವಾರ ಚಿತ್ರ ನಡೆಯುತ್ತಿದೆ. ದುಬೈನಲ್ಲೂ ರಿಲೀಸ್ ಆಗಿದೆ.
ಮುಂದಿನ ವಾರ ತೆಲುಗು, ತಮಿಳು ಸೇರಿದಂತೆ ಎಲ್ಲ ಕಡೆಗಳಲ್ಲಿ ಚಿತ್ರ ಬರಲಿದೆ ಎಂದರು. ಮಫ್ತಿ-೨ ತೆರೆಗೆ ಬರುವ ನಿರೀಕ್ಷೆ ಇದೆ. ಭೈರತಿ ರಣಗಲ್ ಮೊದಲು ಬಂದು ಮಫ್ತಿಯಲ್ಲಿ ಮುಗಿಯಲಿದೆ.
ಭೈರತಿ ರಣಗಲ್ ಹಾಗೂ ಮಫ್ತಿ ಸರಣಿ ಕಥೆಗಳು ಎಂದು ಹೇಳಿದ ಅವರು ಈ ವರ್ಷ ಕನ್ನಡದಲ್ಲಿ ಉತ್ತಮ ಚಿತ್ರಗಳು ತೆರೆಗೆ ಬಂದಿವೆ. ಭೀಮ, ಭಗೀರ, ಭೈರತಿ ರಣಗಲ್, ಕೃಷ್ಣಂ ಪ್ರಣಯ ಸಖಿ ರೀತಿಯ ಒಳ್ಳೆಯ ಕಥೆಗಳು ಬಂದಿವೆ. ಹೀಗಾಗಿ ಚಿತ್ರಮಂದಿರಕ್ಕೆ ಜನ ಬರುತ್ತಿದ್ದಾರೆ. ಚಿತ್ರ ಯಶಸ್ವಿಯಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಿಂದ ಪ್ರವಾಸ ಆರಂಭಿಸಿದ್ದೇವೆ. ನಾಳೆ ದಾವಣಗೆರೆ, ಶಿರಸಿ, ಶಿವಮೊಗ್ಗ, ರಾಣೆಬೆನ್ನೂರು ಹಾಗೂ ಹುಬ್ಬಳ್ಳಿಗೆ ಪ್ರವಾಸ ಮಾಡಿ ಅಭಿಮಾನಿಗಳನ್ನು ಮಾತನಾಡಿಸಲಿದ್ದೇವೆ ಎಂದರು.
ಇಂದು ಚಿತ್ರದುರ್ಗದ ಪ್ರಸನ್ನ ಚಿತ್ರಮಂದಿರಕ್ಕೆ ಆಗಮಿಸಿದ್ದ ನಟ ಶಿವಣ್ಣ ಅಭಿಮಾನಿಗಳನ್ನು ಕಂಡು ಖುಷಿಯಾದರು. ಇತ್ತ ಶಿವಣ್ಣನನ್ನು ಕಂಡ ತಕ್ಷಣ ನೆರೆದಿದ್ದ ಸಾವಿರಾರು (Shivraj Kumar) ಅಭಿಮಾನಿಗಳು, ಶಿಳ್ಳೆ, ಕೇಕೆ, ಚಪ್ಪಾಳೆ ಹಾಕಿ ಸಂಭ್ರಮಿಸಿದರು. ಚಿತ್ರಮಂದಿರದ ಎದುರು ಬೃಹತ್ ಹಾರ ಹಾಕಿದ ಅಭಿಮಾನಿಗಳು, ಶಿವಣ್ಣನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.
ಇದನ್ನೂ ಓದಿ: ಬೆಂಬಲ ಬೆಲೆ ಯೋಜನೆ | ರೈತರಿಂದ ರಾಗಿ ಖರೀದಿ ನೋಂದಣಿ ಪ್ರಾರಂಭ: ಡಿಸಿ ಟಿ.ವೆಂಕಟೇಶ್ | Millet Purchase Centre
ಈ ಸಂದರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಬಿ.ಕಾಂತರಾಜ್, ಗೀತಾ ಶಿವರಾಜ್ ಕುಮಾರ್, ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್, ಪ್ರಸನ್ನ ಚಲನಚಿತ್ರ ಮಂದಿರದ ಮಾಲಿಕರಾದ ಪ್ರಜ್ವಲ್, ಟಿಪ್ಪು ಖಾಸಿಂ ಆಲಿ ಸೇರಿದಂತೆ ಆಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು.
