ಹೈಲೆಟ್ಸ್
- ಹೊಸದುರ್ಗದಲ್ಲಿನ ಹಿರಿಯೂರು ಮುಖ್ಯ ರಸ್ತೆಯಲ್ಲಿ ಸ್ಥಾಪನೆ (Shri Krishna statue)
- ತಾಲೂಕು, ಪುರಸಭೆ ಆಡಳಿತ ವಿರುದ್ಧ ಮೂಡಿದ ಅನುಮಾನ
ನಮ್ಮಜನ.ಕಾಂ, ಹೊಸದುರ್ಗ: ನಗರದಲ್ಲಿ ರಾತ್ರೋ ರಾತ್ರಿ ಶ್ರೀ ಕೃಷ್ಣ ಪ್ರತಿಮೆ ಉದ್ಭವಗೊಂಡಿದ್ದು ಬೆಳ್ಳಂ ಬೆಳಗ್ಗೆ ದಾರಿಹೋಕರು (Shri Krishna statue) ಪ್ರತಿಮೆ ನೋಡಿ ಅಚ್ಚರಿಗೊಂಡಿದ್ದಾರೆ.
ಯಾರು ಪ್ರತಿಷ್ಠಾಪನೆ ಮಾಡಿದರು ಎಂಬುದಕ್ಕೆ ಪೊಲೀಸರಬಳಿಯಾಗಲೀ, ಸ್ಥಳೀಯ ಆಡಳಿತದಲ್ಲಾ ಗಲಿ ಯಾವುದೇ ಕುರುಹುಗಳಿಲ್ಲ. ಹೊಸದುರ್ಗ ದಲ್ಲಿ ಯಾರು ಎಲ್ಲಿ ಬೇಕಾದರೂ ಸಮುದಾಯದ ಮಹನೀಯರ ಪ್ರತಿಮೆಗಳನ್ನು ರಾತ್ರೋ ರಾತ್ರಿ ಪ್ರತಿಷ್ಠಾಪಿಸಬಹುದು. ಇಂತಹ ಸನ್ನಿವೇಶಕ್ಕೆ (Shri Krishna statue) ತಾಲೂಕು ಆಡಳಿತ ಹಾಗೂ ಪುರಸಭೆ ಆಡಳಿತ ಅವಕಾಶ ಕೊಟ್ಟಿತಾ ಎಂಬ ಅನುಮಾನಗಳು ಮೂಡಿವೆ.
ಹೊಸದುರ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ತೋಟಗಾರಿಕೆ ಇಲಾಖೆಗೆ ಹೊಂದಿಕೊಂಡಿರುವ ಸರ್ಕಾರಿ ಜಾಗವನ್ನು ಪುರಸಭೆ ವಾಣಿಜ್ಯ ಮಳಿಗೆ ನಿರ್ಮಾಣಕ್ಕಾಗಿ ಮೀಸಲಿಟ್ಟಿತ್ತು. ಇದೇ ಪ್ರದೇಶದಲ್ಲಿನ ಹಿರಿಯೂರು ಮುಖ್ಯ ರಸ್ತೆಯ ಭಾಗದಲ್ಲಿ ರಾತ್ರೋ ರಾತ್ರಿ ಶ್ರೀ ಕೃಷ್ಣನ ಪ್ರತಿಮೆ ಸ್ಥಾಪಿಸಲಾಗಿದೆ.
ಜಾಗದ ಬಗ್ಗೆಯೂ ಸ್ಪಷ್ಟತೆ ಇಲ್ಲ: ಶ್ರೀ ಕೃಷ್ಣಾ ಪ್ರತಿಮೆ ಸ್ಥಾಪನೆಗೆ ಸರ್ಕಾರ ಹಾಗೂ ಪುರಸಭೆಯಿಂದ ಅನುಮತಿ (Shri Krishna statue) ಪಡೆಯಲಾಗಿದೆಯಾ ಎನ್ನುವುದಕ್ಕೆ ಯಾವುದೇ ಅಧಿಕಾರಿಗಳ ಬಳಿ ಉತ್ತರವಿಲ್ಲ. ಅಲ್ಲದೆ ಜಾಗಯಾರಿಗೆ ಸೇರಿದ್ದೂ ಎನ್ನುವುದು ಅಧಿಕಾರಿಗಳಿಗೆ ಗೊತ್ತಿಲ್ಲ. ಪುರಸಭೆ ಮುಖ್ಯಾಧಿಕಾರಿಯವರು ಸರ್ವೆ ನಂಬರನಲ್ಲಿದೆ. ಆದರೆ ಪುರಸಭೆದಾಖಲೆಯಲ್ಲಿಲ್ಲ ಎಂದು ಹೇಳುತ್ತಿದ್ದು,
ತಹಸೀಲ್ದಾರ್ ಅವರು ಶ್ರೀಕೃಷ್ಣಾ ಪ್ರತಿಮೆ ಸ್ಥಾಪಿಸಿದ ಸ್ಥಳ ಅದು ಕೆರೆ ಅಂಗಳವಾಗಿದ್ದು ಈ ಕುರಿತು ದಾಖಲೆ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂಬ ಹಾರಿಕೆ ಉತ್ತರ (Shri Krishna statue) ನೀಡುತ್ತಿದ್ದಾರೆ. ಒಂದೇ ರಾತ್ರಿಯಲ್ಲಿ ಶ್ರೀಕೃಷ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಿಲ್ಲ.
ಇದನ್ನೂ ಓದಿ: ಕರೆಂಟ್ ಶಾಕ್ | ಏಳು ಮೇಕೆಗಳು ಸಾವು | Nayakanahatti
ವಾರದ ಹಿಂದೆ ಗುಂಡಿ ತೆಗೆಯಲಾಗಿತ್ತು. ಗುಂಡಿ ತೆಗೆದಿರುವ ಬಗ್ಗೆ ಆ ವಾರ್ಡ್‌ನ ಸದಸ್ಯರು ಪುರಸಭೆ ಮುಖ್ಯಾಧಿಕಾರಿಗಳ (Shri Krishna statue) ಗಮನಕ್ಕೂ ತಂದಿದ್ದಾರೆ. ಆದರೂ ಮುಖ್ಯಾಧಿಕಾರಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ ಎನ್ನುವ ಅಸಮಾಧಾನ ಪುರಸಭೆಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.