Chitradurga news | nammajana.com | 27-08-2025
ನಮ್ಮಜನ.ಕಾಂ, ಸಿರಿಗೆರೆ: ತರಳಬಾಳು(Sirigere) ಜಗದ್ಗುರು ಬೃಹನ್ಮಠ ಹಾಗೂ ಅದರ ಶಾಖಾ ಮಠಗಳ ವ್ಯಾಪ್ತಿಯಲ್ಲಿ ಬರುವ ಅಡಕೆ ತೋಟಗಳಲ್ಲಿನ ಈ ಹಂಗಾಮಿನ ಅಡಿಕೆ ಫಸಲು ಹರಾಜು ಪ್ರಕ್ರಿಯೆ ನಡೆಸಲು ಕೃಷಿ ಸಮಿತಿ ಮುಂದಾಗಿದೆ.

ಇದನ್ನೂ ಓದಿ: ಆ.30ರಂದು ಹಿರಿಯೂರು ನೂತನ ಬಸ್ ಘಟಕದ ಉದ್ಘಾಟನೆ
ತಾಲೂಕಿನ ಸಿರಿಗೆರೆ ಹಾಗೂ ಬಹದ್ದೂರು ಗ್ರಾಮಗಳಲ್ಲಿನ ತೋಟಗಳ ಫಸಲು ಹರಾಜು ಅ.28ರ ಗುರುವಾರ ನಡೆಯಲಿದೆ.
ಬೇಲೂರು ತಾಲೂಕು ಯಲಹಂಕ ತೋಟದ ಹರಾಜು ಅ.29, ಹೊಳಲ್ಕೆರೆ ತಾಲೂಕು ಶಿವಪುರ ಹಾಗೂ ಚನ್ನಗಿರಿ ತಾಲೂಕು ಮರವಂಜಿ ತೋಟಗಳ ಫಸಲು ಹರಾಜು ಸೆ.16ರಂದು ನಡೆಯಲಿದೆ ಎಂದು ಕೃಷಿ ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
