
Chitradurga news|nammajana.com|9-8-2024
ನಮ್ಮಜನ.ಕಾಂ, ಚಿತ್ರದುರ್ಗ: ಸಂಬಂಧಿಗಳಿಗೆ ಸಿರಿಗೆರೆ ಮಠದ ಹಣ ನೀಡಿಲ್ಲಭರಮಸಾಗರ ಶ್ರೀಗಳು ತಮ್ಮ ಪೂರ್ವಾಶ್ರಮದ ಸಂಬಂಧಿಗಳಿಗೆ ಮಠದಿಂದ ಹಣ ನೀಡಿದ್ದಾರೆಂದು ವ್ಯಕ್ತಿಯೊಬ್ಬ (Sirigere Taralabalu Math) ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ”ತಾವು ಸಂಬಂಧಿಗಳಿಗೆ ಮಠದ ಹಣ ಯಾವತ್ತೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುಳ್ಳು ಆರೋಪಗಳನ್ನು ಬಿಟ್ಟು ಸತ್ಯದ ಮೂಲವನ್ನು ಹುಡುಕಿ ಮಾತನಾಡಬೇಕಿದೆ” ಎಂದು ವಿರೋಧಿಗಳಿಗೆ ಎಚ್ಚರಿಸಿದರು.

ಭರಮಸಾಗರ ಸಮೀಪದ ಕೊಳಹಾಳು ಗ್ರಾಮದಲ್ಲಿ ಗುರುವಾರ ಜರುಗಿದ ಶ್ರೀಬಸವೇಶ್ವರಸ್ವಾಮಿ ನೂತನ ದೇವಸ್ಥಾನದ (Sirigere Taralabalu Math) ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ತಾವು ಮತ್ತು ತಮ್ಮ ಪೂರ್ವಾಶ್ರಮದ ಆಸ್ತಿಯ ವಿಚಾರದ ಬಗ್ಗೆ ವಿವರವಾಗಿ ಹೇಳಿದರು. ‘ನಮ್ಮ ಪೂರ್ವಾಶ್ರಮದ ತಾಯಿ (Sirigere Taralabalu Math) ಗಂಗಮ್ಮ ಗಂಡನ ನಿಧನದ ನಂತರ 3 ಜನ ಸಹೋದರ ಜತೆ ಶ್ರೀಮಠಕ್ಕೆ ಬಂದು ಆಸ್ತಿ ಭಾಗ ಮಾಡಿಕೊಡಲು ತಿಳಿಸಿದರು. ನಾವು ಎಲ್ಲಾ ಆಸ್ತಿಯನ್ನು 3 ಜನ ಸಹೋದರಿಯರಿಗೆ ಹಂಚಿದೆವು.
ಮಠಕ್ಕೆ ನಮ್ಮನ್ನು ನಾವು ಅರ್ಪಿಸಿಕೊಂಡಿದ್ದೇವೆ (Sirigere Taralabalu Math)
ನಾವಂತೂ ಸಂಬಂಧದಿಂದ ದೂರವಾಗಿ ಮಠಕ್ಕೆ ನಮ್ಮನ್ನು ಅರ್ಪಿಸಿಕೊಂಡಿದ್ದೇವೆ. ಅವರಿಗೆ ನಾನೊಬ್ಬನೇ ಮಗ. ತಾಯಿಯ ಜೀವನಾಂಶಕ್ಕಾಗಿ 3 ಜನ ಸಹೋದರಿಯರಿಗೆ ತಲಾ 1 ಲಕ್ಷವನ್ನು ತಾಯಿಯ ಹೆಸರಿನಲ್ಲಿ ಶಿವಮೊಗ್ಗದ ಬ್ಯಾಂಕ್‌ನಲ್ಲಿಡಬೇಕೆಂದು ಆಜ್ಞಾಪಿಸಿದವು” ಎಂದರು. ತಾಯಿ ಮರಣದ ನಂತರ 3 (Sirigere Taralabalu Math) ಜನಸಹೋದರಿಯರು ಬ್ಯಾಂಕ್‌ನಲ್ಲಿರುವ ಹಣಕ್ಕೆ ತಾಯಿ ನಿಮ್ಮನ್ನು ನಾಮಿನಿ ಆಗಿ ಮಾಡಿದ್ದಾರೆ.
ಆದ ಕಾರಣ ಈ ಹಣ ನಿಮಗೆ ಸೇರಬೇಕೆಂದು ದಾಖಲೆ (Sirigere Taralabalu Math) ನೀಡಿದರು. ಈಗಲೂ ಆ ಹಣ ನಮ್ಮ ನ್ಯಾಯಪೀಠದಲ್ಲಿದೆ. ಅದು ಮಠಕ್ಕೆ ಸಲ್ಲುತ್ತದೆ” ಎಂದರು.
“ನಮ್ಮ ಪೂರ್ವಾಶ್ರಮದ ತಾಯಿ ಗಂಗಮ್ಮ ವೃದ್ಧಾಪ್ಯದಲ್ಲಿ ಬೆಂಗಳೂರು ಕೇಂದ್ರದಲ್ಲಿ ನಮ್ಮ ದರ್ಶನಕ್ಕಾಗಿ ಬಂದು ನಮಗೆ 25 ಲಕ್ಷ ರೂ. ಕಾಣಿಕೆಯಾಗಿ ನೀಡಿದರು. ನಾವು ಏಕೆ ಅಂತ ಕಾರಣ ಕೇಳಿದಾಗ ‘ಚಿಕಿತ್ಸೆಗೆಂದು ಮಣಿಪಾಲ್ ಆಸ್ಪತ್ರೆಗೆ (Sirigere Taralabalu Math) ಸೇರಿದಾಗ ನನ್ನ ಅಳಿಯ ತರಳಬಾಳು ಕೇಂದ್ರದಿಂದ ಕೈಗಡವಾಗಿ ಹಣವನ್ನು ತಂದಿದ್ದರು. ನಮಗೆ ತಿಳಿದ ಕಾರಣ ಈ ಹಣವನ್ನು ನೀಡಲು ಬಂದಿದ್ದೇವೆ ಎಂದು ತಿಳಿಸಿದರು. ಮಠದ ಹಣ ಬೇಡವೆಂದು ಹಣವನ್ನು ಹಿಂತಿರುಗಿಸಿದರು” ಎಂದರು.
ಇದನ್ನೂ ಓದಿ: Suspended: ಊಟ ಸೇವಿಸಿ ಮಕ್ಕಳು ಅಸ್ವಸ್ಥ, ಹಾಸ್ಟೆಲ್ ವಾರ್ಡನ್ ಸಸ್ಪೆಂಡ್
“ನನಗೆ ಆಸ್ತಿ ಮಠ ಹಾಗೂ ಭಕ್ತರು ಹೊರತು ಸಂಬಂಧಿಗಳಲ್ಲ” (Sirigere Taralabalu Math)
ತಮಗೆ ಆಸ್ತಿ ಮಠ ಹಾಗೂ ಭಕ್ತರೇ ವಿನಃ ಸಂಬಂಧಿಗಳಲ್ಲ, ಯಾರಿಗೂ ಸಹ ಮಠದ ಆಸ್ತಿಯನ್ನು ನೀಡಿಲ್ಲ. ಎಷ್ಟೋ ಜನರಿಗೆ ಮಠದಿಂದ ಕೋಟ್ಯಂತರ ರೂಪಾಯಿಗಳ ಸಹಾಯ (Sirigere Taralabalu Math) ಮಾಡಿದ್ದೇವೆ. ಆದರೆ ನಮ್ಮನ್ನು ಹತ್ತು ಹೊತ್ತು ಸಾಕಿದ ತಾಯಿಗೆ ಸಹಾಯ ಮಾಡಲಾಗಲಿಲ್ಲ. ಅವರು ಸಹ ನಿರೀಕ್ಷೆ ಮಾಡಿಲ್ಲ.
ಇದನ್ನೂ ಓದಿ: Power Cut: 8 ದಿನ ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ವ್ಯತ್ಯಯ | ಈ ಹಳ್ಳಿಗಳಲ್ಲಿ ಕರೆಂಟ್ ಕಟ್
“ನೂರಾರು ವರ್ಷಗಳಿಂದ ಬಂದ ಮಠದ ಪರಂಪರೆಯನ್ನ ಕೆಲವು ಆಯೋಗ್ಯರು ಸೇರಿಕೊಂಡು ಹಾಳು ಮಾಡುತ್ತಿದ್ದಾರೆ. ಇನ್ನು ಕೆಲವರು ಜಾಲತಾಣಗಳಲ್ಲಿ ಮಠದ ವಿರುದ್ಧ ಅವಹೇಳನವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಾ ಕೆಸರು ಸಿಡಿಸುವ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರೂ ರಿಯಲ್ (Sirigere Taralabalu Math) ಎಸ್ಟೇಟ್ ಬಿಸಿನೆಸ್ ಖದೀಮರು ಇವರು” ಎಂದರು.
‘ಸಿರಿಗೆರೆ ಮಠಕ್ಕೆ ಹೋಗಿ ಬಂದ ಮೇಲೆ ಮಂತ್ರಿ ಆದೆ’ ಎಂದು ಹೇಳಿ ಈಗ ಮಠದ ವಿರುದ್ದ ಧ್ವನಿಯಾಗಿದ್ದಾನೆ. (Sirigere Taralabalu Math)
“ಹಿಂದೆ ಬಿ.ಸಿ.ಪಾಟೀಲ್ ತಾನು ಸಿರಿಗೆರೆ ಮಠಕ್ಕೆ ಹೋಗಿ ಬಂದ ಮೇಲೆ ಮಂತ್ರಿ ಆದೆ ಎಂದು ಹೇಳಿದ್ದ ಇಂದು ಮಠದ ವಿರುದ್ಧವೇ ಧ್ವನಿಯಾಗಿದ್ದಾನೆ. ಗುರುಗಳಿಂದಲೇ ಎಲ್ಲ (Sirigere Taralabalu Math) ಉಪಕಾರಗಳನ್ನ ಪಡೆದುಕೊಂಡು ಈಗ ಗುರುಗಳ ಮೇಲೆಯೇ ಕತ್ತಿ ಮಸೆಯಲು ಹೊರಟಿದ್ದಾರೆ” ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: Residential School: ಇಂದಿರಗಾಂಧಿ ವಸತಿ ಶಾಲೆಗೆ ತಾ.ಪಂ.EOb ಶಶಿಧರ ದಿಢೀರ್ ಭೇಟಿ ನೀಡಿ ಪರಿಶೀಲನೆ.
ಕಾರ್ಯಕ್ರಮದಲ್ಲಿ ಹೆಚ್.ಆರ್.ಬಸವರಾಜಪ್ಪ, ಗೌರವಾಧ್ಯಕ್ಷರಾದ ಹಾಲವರ್ತಿ ಸಿದ್ದಪ್ಪ ಗ್ರಾ.ಪಂ. ಅಧ್ಯಕ್ಷರಾದ ಉಚ್ಚಂಗಮ್ಮರಂಗಪ್ಪ, ಸಮಿತಿ ಅಧ್ಯಕ್ಷರಾದ ಕೆ.ಈ.ರಾಜಣ್ಣ ಹಾಗೂ ಸದಸ್ಯರು, ಗ್ರಾಮಸ್ಥರು
