Chitradurga news|nammajana.com|10-12-2024
ನಮ್ಮಜನ.ಕಾಂ, ಚಿತ್ರದುರ್ಗ: ಒಂದು ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಚಿತ್ರದುರ್ಗಕ್ಕೆ (SM Krishna) ಶಾಂತಿಸಾಗರದಿಂದ ಕುಡಿಯುವ ನೀರನ್ನು ತರಲು ಸಹಾಯ ಮಾಡಿದ ಮಹಾನ್ ವ್ಯಕ್ತಿ ಎಸ್.ಎಂ.ಕೃಷ್ಣ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸ್ಮರಣೆ ಮಾಡಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ನಿಧನದ ಹಿನ್ನಲೆಯಲ್ಲಿ ಚಿತ್ರದುರ್ಗ ನಗರದಲ್ಲಿ ಮಂಗಳವಾರ ಪ್ರವಾಸಿ ಮಂದಿರದಲ್ಲಿ ತಮ್ಮ ಬೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಅವರು 2004ರಲ್ಲಿ ನಾನು ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ದೆ ಮಾಡಿ ವಿಧಾನಸಭೆಯನ್ನು ಪ್ರವೇಶ ಮಾಡಿದ್ದ ಸಮಯದಲ್ಲಿ ಒಂದು ರಾತ್ರಿ ಬೆಂಗಳೂರಿನಿಂದ ವಾಪಾಸ್ ಆಗುವ ಸಮಯದಲ್ಲಿ ಚಿತ್ರದುರ್ಗದಲ್ಲಿ ರಾತ್ರಿ 10 ರ ಸಮಯದಲ್ಲಿ ಗಾಂಧಿ ವೃತ್ತದಲ್ಲಿ ನೂರಾರು ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ನೀರಿಗಾಗಿ ಹೋರಾಟವನ್ನು (SM Krishna) ಮಾಡುತ್ತಿದ್ದರು ಇದರಿಂದ ಚಿತ್ರದುರ್ಗ ನಗರದ ನೀರಿನ ಸಮಸ್ಯೆಯನ್ನು ಪರಿಹಾರ ಮಾಡಬೇಕೆಂದು ತೀರ್ಮಾನ ಮಾಡಿ ಸದನ ಸಮಿತಿಯಲ್ಲಿ ಹೈದರಾಬಾದ್‍ನಲ್ಲಿ ಪ್ರವಾಸ ಇದ್ದಾಗ ಆಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣರವರು ದೆಹಲಿ ಪ್ರವಾಸ ಎಂದು ಮಾಹಿತಿ ಬಂದಾಗ ಅವರನ್ನು ಬೇಟಿ ಮಾಡಲು ದೆಹಲಿಗೆ ಹೋಗಿ ಅಲ್ಲಿ ಅವರನ್ನು ಬೇಟಿ ಮಾಡಿ ಚಿತ್ರದುರ್ಗದ ನೀರಿನ ಸಮಸ್ಯೆಯನ್ನು ತಿಳಿಸಿದಾಗ ಅಲ್ಲಿಂದಲೇ ದೂರವಾಣಿ ಮೂಲಕ ರಾಜ್ಯದ ಮುಖ್ಯ ಕಾರ್ಯದರ್ಶೀಗಳನ್ನು ಸಂಪರ್ಕ ಮಾಡಿ ಈ ವಿಷಯವನ್ನು ಸಚಿವ ಸಂಪುಟಕ್ಕೆ ತರುವಂತೆ ನಿರ್ದೇಶನ ನೀಡಿದರು.
ಎಸ್ ಎಂ.ಕೃಷ್ಣ ರವರು ಚಿತ್ರದುರ್ಗದ ಕುಡಿಯುವ ನೀರಿನ ಕಾಮಗಾರಿಗೆ ಅನುಮತಿಯನ್ನು ನೀಡದಿದ್ದರೆ ಈ ವೇಳೆ ಚಿತ್ರದುರ್ಗ ಕುಡಿಯುವ ನೀರಿನ ಸಮಸ್ಯೆಯನ್ನು (SM Krishna) ಎದುರಿಸಬೇಕಿತ್ತು.
ಅಂದಿನ ಕಾಲದಲ್ಲಿ ನೀರಿಲ್ಲ ಎಂದು ಮನೆಗಳು ಬಾಡಿಗೆ ಹೋಗುತ್ತಿರಲಿಲ್ಲ ಇದ್ದಲ್ಲದೆ ಕುಡಿಯಲು ನೀರಿಲ್ಲ ನೀರು ತರಲು ದೂರ ಕೂಡವನ್ನು ಹಿಡಿದು ತಮ್ಮ ಮಗಳು ಹೋಗಬೇಕೆಂದು ಚಿತ್ರದುರ್ಗದ ಯುವಕರಿಗೆ ಹೆಣ್ಣನ್ನು ಕೂಡುತ್ತಿರಲ್ಲಿಲ್ಲ, ಇಂತಹ ಪರಿಸ್ಥಿತಿ ಇತ್ತು. ಅಂದು ಕೃಷ್ಣ ರವರು ಮನಸ್ಸು ಮಾಡದಿದ್ದರೆ ಚಿತ್ರದುರ್ಗ ಕುಡಿಯುವ ನೀರಿನ ಸಮಸ್ಯೆ ಯಿಂದ ಬಳಲಬೇಕಿತ್ತು ಎಂದು ಅವರು ಮಾಡಿದ ಕಾರ್ಯವನ್ನು ಜಿ.ಎಚ್.ತಿಪ್ಪಾರೆಡ್ಡಿ ಸ್ಮರಣೆ ಮಾಡಿದರು.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ, ಯಾವ್ಯಾವ ರಾಶಿಗೆ ಹೇಗಿದೆ ದಿನ?
ಸಚಿವ ಸಂಪುಟದಲ್ಲಿ ಚಿತ್ರದುರ್ಗಕ್ಕೆ ಕುಡಿಯುವ ನೀರಿನ ಯೋಜನೆ ಮಂಜೂರಾದಾಗ ಅಂದಿನ ಸಚಿವರಾಗಿದ್ದ ರಂಗನಾಥ್ ರವರು ಸಚಿವ ಸಂಪುಟದ ಸಭೆಯಿಂದ ಹೂರ ಬಂದು ನನಗೆ ಶುಭಾಷಯವನ್ನು ತಿಳಿಸಿ ಚಾನ್ಸ್ ಹೊಡೆದು ಅಗ ಅಂದಿನ ಸಮಯದಲ್ಲಿ ಅದು ದೊಡ್ಡದಾದ ಮೊತ್ತವಾಗಿತ್ತು ಎಂದ ಅವರು ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ಅದಕ್ಕೂ ಮೊದಲು ಚಿತ್ರದುರ್ಗಕ್ಕೆ ಹಲವಾರು ಬಾರಿ ಆಗಮಿಸಿ ವಿವಿಧ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.