Chitradurga news|nammajana.com|29-6-2024
ನಮ್ಮಜನ.ಕಾಂ, ಚಳ್ಳಕೆರೆ: ಕರ್ನಾಟಕದಲ್ಲಿ ಸಣ್ಣಕೈಗಾರಿಕೆಗಳ (Small industry) ಅಭಿವೃದ್ದಿಗೆ ಸರ್ಕಾರ ಹಲವಾರು ಯೋಜನೆಗಳ ಮೂಲಕ ಆರ್ಥಿಕ ನೆರವು ಒದಗಿಸಲಿದೆ. ನಿಗಮದ ನೂತನ ಅಧ್ಯಕ್ಷರಾಗಿ ಶಾಸಕ ಟಿ.ರಘುಮೂರ್ತಿ ಈಗಾಗಲೇ ಅಧಿಕಾರ ಪದಗ್ರಹಣ ಮಾಡಿದ್ದು ಅವರ ಮಾರ್ಗದರ್ಶನದಲ್ಲಿ ಸಣ್ಣಕೈಗಾರಿಕೆ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲಿದೆ ಎಂದು ಸಣ್ಣಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಿಗಳ ಸಚಿವ ಶರಣಬಸಪ್ಪದರ್ಶನಾಪುರ ತಿಳಿಸಿದರು.
ಅವರು, ಬೆಂಗಳೂರಿನ ಸಣ್ಣಕೈಗಾರಿಕೆಗಳ (Small industry) ಅಭಿವೃದ್ದಿ ನಿಗಮದ ಸಭಾಂಗಣದಲ್ಲಿ ಎಂಎಸ್ಎಂಇ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕದಲ್ಲಿ ಇನ್ನೂ ಹೆಚ್ಚಿನ ಕೈಗಾರಿಕೆಗಳ ಸ್ಥಾಪನೆಯಾಗಬೇಕಿದೆ, ಸರ್ಕಾರ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಎಂದೂ ಹಿಂದೆ ಬಿದ್ದಿಲ್ಲ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಇಂದಿನ ದಿನ ಭವಿಷ್ಯ 29-6-2024 | Dina Bhavishya kannada
ಸಣ್ಣಕೈಗಾರಿಕೆ (Small industry) ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿ ಕೇವಲ ಎಂಟು ತಿಂಗಳಾಗಿದೆ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿಯ ಹಲವಾರು ಯೋಜನೆಗಳ ಬಗ್ಗೆ ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಗಳೊಂದಿಗೆ ಚರ್ಚೆ ನಡೆಸಿದ್ದೇನೆ. ರಾಜ್ಯದಲ್ಲಿ ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮ ನಿರೀಕ್ಷೆಗೂ ಮೀರಿ ಎತ್ತರ ಬೆಳೆಯಲಿದೆ ಎಂದರು.