Chitradurga news | nammajana.com|12-07-2025
ನಮ್ಮಜನ.ಕಾಂ, ಚಿತ್ರದುರ್ಗ: ರಾಜ್ಯ ಸರಕಾರ ಗ್ರಾಮೀಣ ಭಾಗದಲ್ಲಿ ಸ್ಮಾರ್ಟ್ ಮೀಟರ್ (Smart Meter) ಅಳವಡಿಕೆಗೆ ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಚಿತ್ರದುರ್ಗದಿಂದಲೇ ಹೋರಾಟ ರೂಪಿಸಲಾಗುವುದು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ ತಿಳಿಸಿದರು.
ಇದನ್ನೂ ಓದಿ: ಕಾರ್ಮಿಕ ಇಲಾಖೆಯಿಂದ SC-ST ಯುವಕರಿಗೆ “ಆಶಾದೀಪ ಯೋಜನೆ” ಜಾರಿ:Santhosh Lad

ನಗರದ ಪ್ರವಾಸಿ ಮಂದಿರದಲ್ಲಿ ಸಮಾನ ಮನಸ್ಕ ರೈತ ಸಂಘಟನೆಗಳ ಸಮಾಲೋಚನೆ, ಸಮನ್ವಯ ಮತ್ತು ಅನುಷ್ಠಾನ ಸಮಿತಿ ರಚಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸರಕಾರ ಎಸ್ಕಾಂಗಳ ಖಾಸಗೀಕರಿಸುವ ಉದ್ದೇಶದಿಂದಲೇ ಮೀಟರ್‌ಗಳನ್ನು ಜುಲೈ 1ರಿಂದಲೇ ಅಳವಡಿಸಲು ಮುಂದಾಗಿದೆ. ಇದು ರೈತಾಪಿ ಸಮುದಾಯಕ್ಕೆ ಹಿಂಬಾಗಿಲಿನಿಂದ ಹೊರೆ ಹೊರಿಸುವ ಹುನ್ನಾರವಾಗಿದೆ ಎಂದು ಟೀಕಿಸಿದರು.
ಗ್ರಾಹಕರ ಮೇಲೆ ಹೊರೆ ಹೊರಿಸುತ್ತಿರುವ ಎಸ್ಕಾಂಗಳು ಒಂದು ಕಿಲೋ ವ್ಯಾಟ್‌ಗೆ 145 ಕನಿಷ್ಠ ಶುಲ್ಕ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮೊದಲು ಪ್ರತಿ ಕುಟುಂಬಕ್ಕೂ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ಘೋಷಣೆ(Smart Meter) ಮಾಡಿತ್ತು. ಅಧಿಕಾರಕ್ಕೆ ಬಂದ ನಂತರ ವಾರ್ಷಿಕ ಬಳಕೆಯ ಸರಾಸರಿ ಆಧರಿಸಿ, 10 ಯೂನಿಟ್ ಸೇರ್ಪಡೆ ಮಾಡಿ ಕೊಡುತ್ತಿದೆ.
ಇದನ್ನೂ ಓದಿ: ಇಂದು ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ
ಈಗ ಸರಾಸರಿ ಯೂನಿಟ್‌ಗಳಲ್ಲೇ ರೈತರು ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಈಗ ಗ್ಯಾರಂಟಿಗಳಿಂದ ಆಗಿರುವ ಹೊರೆ ತಪ್ಪಿಸಿಕೊಳ್ಳಲು ಕೆಇಆರ್‌ಸಿ, ಎಸ್ಕಾಂಗಳು ಗ್ರಾಹಕರ ಮೇಲೆ ಹೊರೆ ಹೊರಿಸಲು ಹೊರಟಿವೆ ಎಂದು ಆರೋಪಿಸಿದರು.
ಮೊದಲು ಒಂದು ಮೀಟರ್ ಬೆಲೆ 40 ರೂ. ಇತ್ತು. ಈಗ ಕಿಲೋವ್ಯಾಟ್‌ಗೆ ಪರಿವರ್ತಿಸಲಾಗಿದೆ. ಈಗ ಒಂದು ಕಿಲೋವ್ಯಾಟ್ ಗೆ 145 ರೂ. ಕನಿಷ್ಠಶುಲ್ಕ ವಿಧಿಸಲಿದ್ದಾರೆ. ಇದು ಕಿಲೋವ್ಯಾಟ್ ಸಂಖ್ಯೆ ಹೆಚ್ಚುತ್ತಾ ಹೋದಂತೆ ಶುಲ್ಕದ ಪ್ರಮಾಣವೂ ಹೆಚ್ಚಲಿದೆ. ಗ್ರಾಮೀಣ ಪ್ರದೇಶದಲ್ಲಿ ಎಣ್ಣೆಮಿಲ್, ಫ್ಲೋರ್ ಮಿಲ್, ನಾರಿನ್ ಮಿಲ್‌ಗಳಿಗೆ ಕನಿಷ್ಠ ಎಂಟತ್ತು ಕಿಲೋವ್ಯಾಟ್ ಪಡೆದುಕೊಂಡಿರುತ್ತಾರೆ. ಅಂತವರು ಕನಿಷ್ಠ 1450 ರೂ. ಪಾವತಿಸಬೇಕು. ಇದು ಜನರನ್ನು ಕೊಳ್ಳೆ ಹೊಡೆಯುವ ಕೆಲಸ ಎಂದರು.
ಕೆಇಆರ್‌ಸಿ ಈ ರೀತಿಯ ಹೆಚ್ಚಳಕ್ಕೆ ಅನುಮತಿ ನೀಡುವಾಗಲೂ(Smart Meter) ಸಾರ್ವಜನಿಕ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ನಂತರ ಅಭಿಪ್ರಾಯ ಕೊಡಬೇಕು. ಎಲ್ಲೂ ಸಾರ್ವಜನಿಕ ಸಭೆ ನಡೆಸಿರುವ ನಿದರ್ಶನಗಳಿಲ್ಲ, ಜನರು ನೀಡುತ್ತಿರುವ ಉಚಿತ ವಿದ್ಯುತ್ ಹೊರೆ ತಪ್ಪಿಸಿಕೊಳ್ಳಲು ಹಿಂಬಾಗಿಲಿನಿಂದ ಇಂತಹ ಕ್ರಮ ಕೈಗೊಂಡಿದ್ದಾರೆ. ಪರಿಣಾಮ ಭವಿಷ್ಯದ ದಿನಗಳಲ್ಲಿ ಸಾವಿರಾರು ರೂ. ವಿದ್ಯುತ್ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ನರೇಗಾ ಹೊರಗುತ್ತಿಯ ಸಿಬ್ಬಂದಿಗೆ ಆರು ತಿಂಗಳಿಂದ ವೇತನ ಕೊರತೆ
ಸಭೆಯಲ್ಲಿ ಸಮನ್ವಯ ಸಮಿತಿ ಸದಸ್ಯರಾದ ಆರ್.ಬಿ.ನಿಜಲಿಂಗಪ್ಪ, ಕೊಟ್ರಬಸಪ್ಪ, ಎನ್.ಎಸ್.ಕರಿಸಿದ್ದಯ್ಯ, ಚಿಕ್ಕಬ್ಬಿಗೆರೆ ನಾಗರಾಜ್, ಚಿಕ್ಕಣ್ಣ ಪರಶುರಾಂಪುರ, ಅಖಂಡ ಕರ್ನಾಟಕ ರೈತ ಸಂಘದ ಹಳಿಯೂರು ಸಿದ್ದಪ್ಪ, ಎಲ್. ಬಸವರಾಜ್, ರೈತ ಮುಖಂಡರಾದ ಧನಂಜಯ ಹಂಪಯ್ಯನ ಮಾಳಿಗೆ, ಎಚ್.ಪ್ರಕಾಶ್, ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಕೆ.ಟಿ.ತಿಪ್ಪೇಸ್ವಾಮಿ ಮತ್ತಿತರರಿದ್ದರು.
ಅಳವಡಿಕೆ ತಕ್ಷಣ ಬಿಡಿ
ಕೃಷಿ ಬೆಲೆ ಆಯೋಗ ಸರಕಾರಕ್ಕೆ ಯಾವ ಬೆಳೆಯ ಉತ್ಪಾದನಾ ವೆಚ್ಚ ಎಷ್ಟು ಬರುತ್ತದೆ ಎಂದು ವರದಿ ನೀಡಿದೆ. ಅದನ್ನು ಆಧರಿಸಿ ವಿದ್ಯುತ್ ಉತ್ಪಾದನೆ ಮತ್ತು ಸರಬರಾಜಿಗೆ ಬರುವ ವೆಚ್ಚ, ನಾವು ಬೆಳೆದ ಉತ್ಪಾದನೆಗೂ, ಜೀವನ ವೆಚ್ಚವನ್ನು ಸಮತೋಲನ ಮಾಡಿ ಬೆಲೆ ನಿಗದಿಪಡಿಸಬೇಕು ಎಂದು ಹೇಳಿದೆ. ಆ ಪ್ರಕಾರ ಜಾರಿ ಮಾಡಿದಲ್ಲಿ ನಾವು ಪಾವತಿಸುತ್ತೇವೆ. ಇದನ್ನು ಹೊರತುಪಡಿಸಿ ಸರಕಾರ ಏಕಮುಖವಾಗಿ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ಸರಕಾರ ಮೀಟರ್ ಅಳವಡಿಕೆ ಕ್ರಮವನ್ನು ತಕ್ಷಣ ಕೈಬಿಡಬೇಕು. ಇಲ್ಲವಾದಲ್ಲಿ ಗ್ರಾಮೀಣ ಪ್ರದೇಶದ ಗೃಹ ಬಳಕೆ ಹಾಗೂ ಇತರೆ ಬಳಕೆಯ ಮೀಟರ್ ತೆರವುಗೊಳಿಸಿ ಜಿಲ್ಲಾಧಿಕಾರಿ ಮುಖಾಂತರ ವಾಪಸ್ ಮಾಡಲಿದ್ದೇವೆ ಎಂದು ರೈತರು ಎಚ್ಚರಿಸಿದರು.
ಭದ್ರಾ ಶೀಘ್ರ ಅನುಷ್ಠಾನವಾಗಲಿ
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಾರಂಭವಾಗಿ ಹದಿನಾರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ.ಬಾಕಿ ಇರುವ ಕೆಲಸವೂ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ. ಕೇಂದ್ರವನ್ನು ರಾಜ್ಯ ದೂರುವುದು, ರಾಜ್ಯವನ್ನು ಕೇಂದ್ರ ದೂರುವುದು ಸರಿಯಾದ ಕ್ರಮವಲ್ಲ, ರಾಜ್ಯ ಸರಕಾರ ಕೇಂದ್ರ ಸರಕಾರವನ್ನು ನಂಬಿಕೊಂಡು ಯೋಜನೆಯನ್ನು ಕೈಗೆತ್ತಿಕೊಂಡಿರಲಿಲ್ಲ. ಪ್ರತಿ ಚುನಾವಣೆಯಲ್ಲೂ ನೀರು ಹರಿಸುವ ಭರವಸೆ ನೀಡುತ್ತಿದ್ದಾರೆ. ಆದರೆ, ಇಂದಿನವರೆಗೂ ನೀರು ಹರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭದ್ರಾ ಮೇಲ್ದಂಡೆ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಹೋರಾಟ ರೂಪಿಸಲಿದ್ದೇವೆ ಎಂದು ಈಚಘಟ್ಟಿ ಸಿದ್ದವೀರಪ್ಪ ತಿಳಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252