Chitradurga news|Nammajana.com|29-8-2025
ನಮ್ಮಜನ.ಕಾಂ, ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 48ರ ಬಳಿ (Varshita Murder Case) ಪತ್ತೆಯಾದ ಅಪ್ರಾಪ್ತ ಯುವತಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿ ವರ್ಷಿತಾಳ ಶವ ಪ್ರಕರಣಕ್ಕೆ ಆರೋಪಿ ಚೇತನ್ ಎಂಬಾತನೇ ಕೊಲೆ ಮಾಡಿದ್ದು, ಸದ್ಯ ಪೊಲೀಸರು ಬಂಧನ ಮಾಡಿದ್ದಾರೆ.

ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ ಕೋವೇರಹಟ್ಟಿ ಮೂಲದ ವರ್ಷಿತಾ(19) ಬರ್ಬರವಾಗಿ ಹತ್ಯೆಗೊಳಗಾಗಿದ್ದ ಯುವತಿ ಏನೋ ಸಾಧನೆ ಮಾಡಬೇಕೆಂಬ ಗುರಿಯಿಟ್ಟುಕೊಂಡಿದ್ದಳು.
ಸಮಾಜ ಕಲ್ಯಾಣ ಇಲಾಖೆ ವಾರ್ಡ್‌ನ ಗಳ ಲೋಪವು ಇಂತಹ ಪ್ರಕರಣಕ್ಕೆ ದಾರಿ ಆಗಬಹುದು?
ಹೆಣ್ಣು ಮಕ್ಕಳ ಎಂದರೆ ಮಡಿಲಲ್ಲಿ ಕೆಂಡ ಕಟ್ಟಿಕೊಂಡ ಹಾಗೇ ಅಂತ ಎಲ್ಲಾರೂ ಹೇಳುತ್ತಾರೆ. ಮನೆಯಲ್ಲಿ ಹೆಣ್ಮಕ್ಕಳು ಇದ್ದರೆ ವಯಸ್ಸು, ಇತರೆ ಕಾರಣಗಳಿಂದ ಮನೆಯವರು ಅವಳನ್ನು ಎಲ್ಲೂ ತೊಂದರೆ ಆಗದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳತ್ತಾರೆ. ಆದರೆ ಹಾಸ್ಟೆಲ್ ಯುವತಿಯರಲ್ಲಿ ಜಾಗೃತಿ ಮೂಡಿಸುವಲ್ಲಿ ವಾರ್ಡನ್ ಗಳು ಸಂಪೂರ್ಣ ವಿಫಲರಾಗಿದ್ದಾರೆ.
ಊಟ ಹಾಕಿ ಕೈ ತೊಳೆದುಕೊಳ್ಳುತ್ತಿರುವ ವಾರ್ಡನ್ ಗಳು
ಪೋಷಕರು ತಮ್ಮ ಮಕ್ಕಳು ಹೆಚ್ಚಿನ ಅಭ್ಯಾಸ ಮಾಡುವ ದೃಷ್ಟಿಯಿಂದ ನಗರಗಳಿಗೆ ಕಳಿಸಿ ಸರ್ಕಾರದ ಹಾಸ್ಟೆಲ್ ಗಳಿಗೆ ಸೇರಿಸಿ ಹೋದ ನಂತರ ಹಾಸ್ಟೆಲ್ ವಾರ್ಡನ್ ಎರಡನೇ ತಾಯಿ,ತಂದೆ, ಪೋಷಕರು ಆಗಿರುತ್ತಾರೆ. ಆದರೆ ವಾರ್ಡನ್ ನಿರ್ಲಕ್ಷ್ಯ ಸಹ ಮಕ್ಕಳು ದಾರಿ ತಪ್ಪುವಂತೆ ಮಾಡುತ್ತಿದೆ. ಪ್ರತಿ ನಿತ್ಯ ಮಕ್ಕಳ ಚಲನವಲನ ಗಮನಿಸಿ ಅವರ ಅಧ್ಯಯನಕ್ಕೆ ಒತ್ತು ಕೊಡಬೇಕಿರುವ ವಾರ್ಡನ ಗಳು 7 ಗಂಟೆಗೆ ಮನೆ ಬಿಟ್ಟು ತಿಂಡಿ ಕೊಡಲಿಕ್ಕೆ ಹೋಗುತ್ತಾರೆ. ಮಕ್ಕಳಿಗೆ ವಾರ್ಡನಗಳಿಗೆ ಸಂಬಂಧ ಇಲ್ಲದಂತೆ ನಡೆದುಕೊಳ್ಳತಿದ್ದರೆ ಮಕ್ಕಳ ಯಾವ ರೀತಿ ಬೆಳೆಸುತ್ತಾರೆ. ಕೇವಲ ಊಟ ಮಾಡಸಲಿಕ್ಕೆ ಅಡಿಗೆ ಸಹಾಯಕರು ಮತ್ತು ನೈಟ್ ವಾಚ್ ಮ್ಯಾನ್ ಇದ್ದರೆ ಸಾಕಲ್ಲ ಎಂಬ ಪ್ರಶ್ನೆ ಎಲ್ಲಾರಲ್ಲೂ ಮೂಡುತ್ತಿದೆ.
ಹಾಸ್ಟೆಲ್ ಸುತ್ತಮುತ್ತ ಕಾಲೇಜು ಹುಡುಗ ಹುಡುಗಿಯರ ಮಾತುಕತೆ
ವಿಶೇಷವಾಗಿ ಕಾಲೇಜು ಯುವತಿಯರ ಹಾಸ್ಟೆಲ್ ಬಳಿಯಲ್ಲಿ ಯುವಕರು, ಯುವತಿ ಗಂಟೆ ಗಂಟೇಲೇ ಹಾಸ್ಟೆಲ್ ಹೊರಗಡೆ ನಿಂತು ಮಾತಡುತ್ತಿರುವ ದೃಶ್ಯಗಳು ವಾರ್ಡನ್ ಸಿಸಿ ಟಿವಿಯಲ್ಲಿ ಸೆರೆಯಾಗಿರುತ್ತವೆ. ಇದನ್ನೂ ಗಮನಿಸಲು ವಾರ್ಡನ್ ಬೆಳಗ್ಗೆ ಯಿಂದ ಸಂಜೆವರೆಗೆ ಹಾಸ್ಟೆಲ್ ನಲ್ಲಿ ಇದ್ದು ಮಕ್ಕಳ ಚಲನ ವಲನ ಗುರುತಿಸಿದ್ದರೆ ಸ್ವಲ್ಪ ಭಯದಲ್ಲಿ ಯುವಕ ಯುವತಿಯರು ಎಚ್ಚರಿಕೆ ವಹಿಸುತ್ತಿದ್ದರು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಪೋಷಕರ ಸಭೆ ನಡೆಸಿ ಮಕ್ಕಳ ತಪ್ಪುಗಳ ಬಗ್ಗೆ ತಿಳಿಸಲಿ
ಹಾಸ್ಟೆಲ್ ವಾರ್ಡನ್ ಗಳ ಯುವತಿಯರ ತಪ್ಪುಗಳನ್ನು ತಿದ್ದುವ ಜೊತಗೆ ಪೋಷಕರಿಗೆ ಮಕ್ಕಳ ಮಾಡುವ ತಪ್ಪುಗಳನ್ನು ತಿಳಿಸಲು ಪೋಷಕರ ಸಭೆ ನಡೆಸಿ ನಿಮ್ಮ ಮಕ್ಕಳ ಪರಿಸ್ಥಿತಿ ಈಗಿದೆ ಎಂದರೆ ಯವಕ, ಯುವತಿಯರಿಗೆ ಒಂದು ರೀತಿಯಲ್ಲಿ ಸ್ವಲಯ ಆತಂಕ ಮತ್ತು ಪೋಷಕರ ಭಯ ಕಾಡುವುದರಿಂದ ವರ್ಷಿತಾ ಆದಂತಹ ಪರಿಸ್ಥಿತಿ ಬೇರೆ ಮಕ್ಕಳಿಗೆ ಬರುವುದು ತಪ್ಪಿಸಲು ಇನ್ನಾದರೂ ವಾರ್ಡನ್ ಗಳು ತಮ್ಮ ಕೆಲಸದ ವೇಳೆ ಮತ್ತು ನಡವಳಿಕೆ ಬದಲಾಯಿಸಿಕೊಳ್ಳಬೇಕು.
ಇದನ್ನೂ ಓದಿ: ಹಿರಿಯೂರು | ದಸರಾ ಉದ್ಘಾಟನೆ : ಬಾನು ಮುಸ್ತಾಕ್ ಆಯ್ಕೆಗೆ ವಿರೋಧ
ಸಮಾಜ ಕಲ್ಯಾಣ ಇಲಾಖೆ ಅಧಿಕಾರಗಳೇ ವಾರ್ಡನ್ ಮೇಲೆ ನಿಯಂತ್ರಣ ಇಲ್ವ ನಿಮಗೆ:
ಯಾರೋ ಹೇಳಿದ ಒತ್ತಡಕ್ಕೆ ಮಣಿದು ವಾರ್ಡನ್ ಗಳನ್ನು ಮನಸೋಇಚ್ಚೆ ಇರಲು ಬಿಟ್ಟಿರುವ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳೇ, ನಿಮ್ಮ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹೇಳಿ ಹೊಸ ಕಾನೂನು ಮೂಲಕ ಮಕ್ಕಳ ರಕ್ಷಣೆಗೆ ಮುಂದಾಗಿ. ಸರ್ಕಾರದ ಕಾನೂನಿನ ಜೊತೆಗೆ ತಮ್ಮ ಮಕ್ಕಳಂತೆ ವಾರ್ಡನ್ ಗಳು ಹಾಸ್ಟೆಲ್ ಮಕ್ಕಳನ್ನು ನೋಡಿಕೊಳ್ಳುವಂತೆ ಬುದ್ದಿ ಹೇಳಿ ಕೇಳಿಲ್ಲ ಅಂದರೆ ಜಾಗ ಖಾಲಿ ಮಾಡಿಸಿ, ವಾರ್ಡನ್ ಪರ ಇನ್ಫ್ಲೇನ್ಸ್ ಮಾಡಿದ ಮಕ್ಕಳಿಗೆ ವರ್ಷಿತಾ ಸ್ಥಿತಿ ಬಂದಿದ್ದರೆ ಆಗಾ ಗೊತ್ತಾಗತ್ತಿತ್ತು ವಾರ್ಡನಗಳು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಅಂತ, ಇನ್ನಾದರೂ ಅಧಿಕಾರಿ ವರ್ಗ ಹಾಸ್ಟೆಲ್ ಭೇಟಿ ನೀಡಿ ಒಂದಿಷ್ಟು ಟೈಟ್ ರೂಲ್ಸ್ ಜೊತೆಗೆ ಹಾಸ್ಟೆಲ್ ಸುತ್ತಮುತ್ತಲಿನ ಅಂಗಡಿ ಎತ್ತಿಸಿ , ಹಾಸ್ಟೆಲ್ ಮುಂದೆ ಆಟೋ ನಿಲ್ಲಾಣ ಮಾಡಿಕೊಂಡು ಕಾಲೇಜು ಹುಡುಗಿಯರಿಗೆ ಆಸೆ ತೋರಿಸುತ್ತಿರು ಗಂಟೆ ಗಂಟೆ ಹಾಸ್ಟೆಲ್ ಮುಂದೆ ಮಾತಡುವ ಹಾಸ್ಟೆಲ್ ವಿದ್ಯಾರ್ಥಿ ವಿರುದ್ದ ಕ್ರಮಕ್ಕೆ ಮುಂದಾಗಿ, ಕ್ರಮ ಕೈಗೊಳ್ಳದ ವಾರ್ಡನ್ ಗಳ ವಿರುದ್ಧವಾದರೂ ಕ್ರಮ ಕೈಗೊಂಡು ನಿಮ್ಮ ಹಾಸ್ಟೆಲ್ ಸುಧಾರಣೆಗೆ ಇಲಾಖೆ ಮುಂದಾಗಲಿ.
