ನಮ್ಮಜನ.ಕಾಂ, ಚಿತ್ರದುರ್ಗ: ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ (South East Teacher Election) ಮತ ಎಣಿಕೆ ಕಾರ್ಯ ಬೆಂಗಳೂರಿನಲ್ಲಿ ನಡೆಯುತ್ತಿದ್ದು 3ನೇ ಸುತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರು ಭಾರೀ ಮುನ್ನಡೆ ಸಾಧಿಸುವ ಮೂಲಕ ಮುನ್ನುಗುತ್ತಿದ್ದಾರೆ.
ಕಳೆದ ಮೂರು ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ (South East Teacher Election) ಸಾಕಷ್ಟು ಹಿಡಿತ ಹೊಂದಿದ್ದ ಬಿಜೆಪಿಗೆ ಈ ಬಾರಿ ಹಿನ್ನಡೆ ಆದಂತೆ ಕಾಣುತ್ತಿದೆ.
ಮೂರನೇ ಸುತ್ತಿನಲ್ಲೂ ಸಹ ಡಿ.ಟಿ.ಶ್ರೀನಿವಾಸ್ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ.
ನಾಲ್ಕನೇ ಸುತ್ತಿನ ಮತಗಳ ವಿವರ
- ಡಿ.ಟಿ.ಶ್ರೀನಿವಾಸ್ ಕಾಂಗ್ರೆಸ್- 932
- ವೈ .ಎ.ನಾರಾಯಣಸ್ವಾಮಿ ಬಿಜೆಪಿ-656
- ವಿನೋದ್ ಶಿವರಾಜ್ ಪಕ್ಷೇತರ-1288
ಅಭ್ಯರ್ಥಿಗಳು ಪಡೆದ ಮತಗಳ ಒಟ್ಟು ವಿವರ:
- ಡಿ.ಟಿ.ಶ್ರೀನಿವಾಸ್ ಕಾಂಗ್ರೆಸ್- 8871
- ವೈ .ಎ.ನಾರಾಯಣಸ್ವಾಮಿ ಬಿಜೆಪಿ-7113
- ವಿನೋದ್ ಶಿವರಾಜ್ ಪಕ್ಷೇತರ-6863
ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಮ್ಮದೇ ಎಂದು ಹೇಳಿತ್ತು ಮತ್ತು ಕಾಂಗ್ರೆಸ್ ಸಹ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತಿ ಡಿ.ಟಿ.ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದು ಅಭ್ಯರ್ಥಿ ಮಾಡಿತ್ತು. ಆದರೆ ಯಾರು ಗೆಲುವು ಸಾಧಿಸುತ್ತಾರೆ ಎಂಬುದನ್ನು (South East Teacher Election) ಕಾದು ನೋಡಬೇಕಿದೆ.