Chitradurga news|nammajana.com|15-7-2024
ನಮ್ಮಜನ.ಕಾಂ, ಚಳ್ಳಕೆರೆ: ಉಪವಿಭಾಗದ ಡಿವೈಎಸ್ಪಿ ಹಾಗೂ ಚಳ್ಳಕೆರೆ ಠಾಣಾ ಇನ್ಸ್ಪೆಕ್ಟರ್ ಮಾರ್ಗದರ್ಶನದಲ್ಲಿ ವಿವಿಧೆಡೆ (Speed gambling) ಜೂಜಾಟ ವಾಡುತ್ತಿದ್ದ ತಂಡವನ್ನು ಪತ್ತೆ ಹಚ್ಚಿ ಹಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ಧರೆಪ್ಪಬಾಳಪ್ಪದೊಡ್ಡಮನಿ ತಿಳಿಸಿದ್ಧಾರೆ.

ಅವರು, ಈ ಬಗ್ಗೆ ಮಾಹಿತಿ ನೀಡಿ, ತಾಲ್ಲೂಕಿನ ಕಾಟಪ್ಪನಹಟ್ಟಿ (Speed gambling) ದುಗ್ಗಾವರ ರಸ್ತೆಯ ಮಧ್ಯಭಾಗದಲ್ಲಿ ರಘು ಹಾಗೂ ಇತರೆ ಮೂವರು ಇಸ್ಪೀಟ್ ಜೂಜಾಟವಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಜೂಜಾಟ ಹಣ ೭೧೧೦ ವಶಕ್ಕ ಪಡೆಯಲಾಗಿದೆ.
ಇದನ್ನೂ ಓದಿ: hosadurga accident: ಬೈಕ್‌ಗೆ ಕಾರು ಡಿಕ್ಕಿ ಸ್ಥಳದಲ್ಲೇ ಇಬ್ಬರು ಸಾವು
ಗಂಜಿಗುಂಟೆ ಲಂಬಾಣಿ ಹಟ್ಟಿ ಬಳಿ ಹಾಡುಹಗಲೇ (Speed gambling) ಹನುಮಂತನಾಯ್ಕ, ಕೆ.ಸಿ.ವೀರೇಶ್ ಇವರು ಜೂಜಾಟವಾಡುತ್ತಿದ್ದು, ಸಾರ್ವಜನಿಕ ಮಾಹಿತಿ ಮೇರೆಗೆ ದಾಳಿ ನಡೆಸಿ ಜೂಜಾಟದ ಹಣ ೧೦೨೦೦ರೂಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ಧಾರೆ.
