
Chitradurga news |nammajana.com|15-9-2024
ನಮ್ಮಜನ.ಕಾಂ, ಚಳ್ಳಕೆರೆ: ನಗರ ಸಂಯುಕ್ತ ಪದವಿ ಪೂರ್ವ ಕಾಲೇಜು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮೂರು ಪ್ರಮುಖ ಪಂದ್ಯಗಳಲ್ಲಿ ವಿಜಯಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದು, (Sports) ಎಲ್ಲಾ ಕ್ರೀಡಾಪಟುಗಳು ಹಾಗೂ ತರಬೇತುದಾರರಿಗೆ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಜಗದೀಶ್, ಆಡಳಿತಾಧಿಕಾರಿ ಜಿ.ಬಾಲರೆಡ್ಡಿ ಅಭಿನಂದಿಸಿದ್ಧಾರೆ.
ಶನಿವಾರ ಬಾಪೂಜಿ ಸಂಯುಕ್ತಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಆಡಳಿತಾಧಿಕಾರಿ ಜಿ.ಬಾಲರೆಡ್ಡಿ, ಜಿಲ್ಲಾ ಮಟ್ಟದಲ್ಲಿ ವಿವಿಧ ಕಾಲೇಜುಗಳ ಕ್ರೀಡಾಪಟುಗಳೊಂದಿಗೆ ಸೆಣಸಿ ಖೊ-ಖೋ, ಕಬ್ಬಡಿ ಮತ್ತು ವಾಲಿಬಾಲ್ ಪಂದ್ಯದಲ್ಲಿ ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ಧಾರೆ.

ನಮ್ಮ ಕಾಲೇಜಿನ ಕ್ರೀಡಾಪಟುಗಳ ಸಾಧನೆಯನ್ನು ವರ್ಣಿಸಲು ಸಾಧ್ಯವಿಲ್ಲ. ಬಾಪೂಜಿ ವಿದ್ಯಾಸಂಸ್ಥೆ ಫಲಿತಾಂಶದ ಜೊತೆಯಲ್ಲಿ ಕ್ರೀಡೆಗೂ ಸಹ ಹೆಚ್ಚಿನ ಉತ್ತೇಜನ ನೀಡುತ್ತದೆ ಎಂದರು.
ಪ್ರಾಂಶುಪಾಲ ಸತೀಶ್ಚಂದ್ರರೆಡ್ಡಿ ಮಾತನಾಡಿ, ದೈಹಿಕ ಶಿಕ್ಷಕರಾದ ಜಯಶೀಲರೆಡ್ಡಿ ಮತ್ತು ಉಪನ್ಯಾಸಕರು ಪ್ರತಿಹಂತದಲ್ಲೂ (Sports) ಪ್ರತಿಕ್ರೀಡೆಯ ಬಗ್ಗೆ ಕ್ರೀಡಾಪಟುಗಳಿಗೆ ಮಾರ್ಗದರ್ಶನದ ಜೊತೆಗೆ ತರಬೇತಿಯನ್ನು ನೀಡುತ್ತಿದ್ದರು.
ಉತ್ಸಾಹದಿಂದ ದೈರ್ಯದಿಂದ ಕ್ರೀಡೆಯನ್ನು ಆಡುವಂತೆ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮ ಸಂಸ್ಥೆಗೆ ಹ್ಯಾಟ್ರಿಕ್ ಗೆಲುವು ಸಾಧನೆ ಮಾಡುವ ಕನಸು ಇಂದು ನನಸಾಗಿದೆ.ಎಲ್ಲಾ (Sports) ಕ್ರೀಡಾಪಟುಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: ಡಿವೈಡರ್ ಗೆ ಬೈಕ್ ಡಿಕ್ಕಿ, ಇಬ್ಬರು ಸ್ಥಳದಲೇ ಸಾವು | Accident
ಉಪನ್ಯಾಸಕ ಈರಣ್ಣ, ಜಗದೀಶ್, ಅಶ್ವಥರೆಡ್ಡಿ, ಉಮೇಶ್, ಸಾದ್ದೀಕ್, ಯಶವಂತ್, ರೇಖಾ, ಗಾಯಿತ್ರಿ, ಮುರುಳಿ, ನಾಗರಾಜು, ರಾಘವೇಂದ್ರ, ಶಬ್ಬಿರ್, ಚಂದ್ರಶೇಖರ್, ಚಂದ್ರಣ್ಣ, ಎಚ್.ಮಹಲಿಂಗಪ್ಪ, ರಾಜೇಶ್, ಪಂಕಜಾಕ್ಷಿ, ಪಾಂಡುರಂಗಪ್ಪ, ಪಾಪಣ್ಣ, ಕದರಪ್ಪ, ಸಂತೋಷ್, ಸಿದ್ದಿಕ್ ಮುಂತಾದವರು ಉಪಸ್ಥಿತರಿದ್ದರು.
