Chitradurga news|Nammajana.com|06-10-2025
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ನಾಯಕನಹಟ್ಟಿಯ ರೇಖಲಗೆರೆ ಲಂಬಾಣಿಹಟ್ಟಿಯ ಪ್ರೌಢಶಾಲೆಯ ವಿದ್ಯಾರ್ಥಿನಿ ಎನ್.ಪಲ್ಲವಿ ತನ್ನ ಅಪ್ರತಿಮ ಸಾಧನೆಯಿಂದ ರಾಷ್ಟೀಯ (Sports) ಮಟ್ಟದಲ್ಲಿ ಗುರುತಿಸಿಕೊಂಡಿದ್ದಾಳೆ. ಬಾಲಕಿಯ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಬಾಲವಿಜ್ಞಾನಿಯಾಗಿ ಎನ್.ಪಲ್ಲವಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಶಾಲೆಯ ಅಧ್ಯಾಪಕ ವರ್ಗ ಶುಭಹಾರೈಸಿದೆ.

ಬೆಂಗಳೂರಿನಲ್ಲಿ ರಾಜ್ಯಸಂಶೋಧನಾ ಮತ್ತು ತರಬೇತಿ ಇಲಾಖೆ ನಡೆಸಿದ ರಾಜ್ಯಮಟ್ಟದ ಸ್ತರೀಯ ಬಾಲವೈಜ್ಞಾನಿಕ ಪ್ರದರ್ಶಿನಿ (Sports) ಕಾರ್ಯಕ್ರಮದಲ್ಲಿ ರೇಖಲಗೆರೆ ಲಂಬಾಣಿಹಟ್ಟಿಯ ಪ್ರೌಢಶಾಲೆ ವಿದ್ಯಾರ್ಥಿನಿ ಎನ್.ಪಲ್ಲವಿ ದ್ವಿತೀಯ ಸ್ಥಾನಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ಧಾರೆ.
ತ್ಯಾಜ್ಯ ನಿರ್ವಹಣೆ ಎಂಬ ವಿಷಯದಲ್ಲಿ ಪ್ಲಾಸ್ಟಿಕ್ ಕವರ್‌ಗಳಿಂದ ಜಲ್ಲಿಕಲ್ಲು ತಯಾರಿಕೆ, ಥರ್ಮೋಕೂಲ್ ತ್ಯಾಜ್ಯದಿಂದ ತಯಾರಿಸಿದ ರಾಳ ಮಾದರಿ ವಿನೂತನವಾಗಿದ್ದು ಬಾಲಕಿಯ ಸಾಧನೆಯನ್ನು ರಾಜ್ಯ ಸಂಶೋಧನಾ ಮತ್ತು ತರಬೇತಿ ಇಲಾಖೆಯ ಪ್ರಾಧ್ಯಾಪಕಿ ರುಚಿವರ್ಮ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬಾಲಕಿಯ ಸಾಧನೆ ಕುರಿತು ಮಾತನಾಡಿದ ರುಚಿವರ್ಮರವರು, ಪ್ಲಾಸ್ಟಿಕ್‌ಕನ್ನು ಮರುಬಳಕೆ ಮಾಡಿಕೊಂಡು ಜಲ್ಲಿಕಲ್ಲು ಹಾಗೂ ರಾಳ ತಯಾರಿಸುವ ಕುರಿತು ವಿದ್ಯಾರ್ಥಿನಿ ನಿರೂಪಿಸಿದ ಪ್ರಯೋಗ ಅದ್ಬುತವಾದದ್ದು. ಗ್ರಾಮೀಣ ಭಾಗದ ಈ ಪ್ರತಿಭೆ ಪರಿಶ್ರಮದಿಂದ ವಿನೂತನ ಪ್ರಯೋಗಮಾಡಿ ವೈಜ್ಞಾನಿಕವಾಗಿ ಸಾಧನೆಯತ್ತ ದೃಢಹೆಜ್ಜೆಇಟ್ಟಿರುವುದು ಸಂತಸತAದಿದೆ. ನವೆಂಬರ್ ತಿಂಗಳಲ್ಲಿ ನವದೆಹಲಿಯಲ್ಲಿ ನಡೆಯುವ ೫೨ನೇ ರಾಷ್ಟçಮಟ್ಟದ ಬಾಲವೈಜ್ಞಾನಿಕ ಪ್ರದರ್ಶಿನಿ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಎನ್.ಪಲ್ಲವಿ ಭಾಗವಹಿಸಲಿದ್ದು ಅಲ್ಲೂ ಯಶಸ್ಸು ಕಾಣಲಿ ಎಂದು ಶುಭಹಾರೈಸಿದರು.
ಇದನ್ನೂ ಓದಿ: V V Sagara ನೀರಿನ ಮಟ್ಟ ಏರಿಕೆ | ಭರ್ತಿಗೆ ಒಂದು ಅಡಿ ಮಾತ್ರ ಬಾಕಿ
ಡಿಡಿಪಿಐ ಪ್ರಶಂಸೆ :
ರೇಖಲಗೆರೆ ಲಂಬಾಣಿಹಟ್ಟಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎನ್.ಪಲ್ಲವಿಯ ರಾಷ್ಟçಮಟ್ಟಕ್ಕೆ ಆಯಐ ಮಂಜುನಾಥ ಬಾಲವಿಜ್ಞಾನಿಯ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ಧಾರೆ. ರಾಜ್ಯಪ್ರಶಸ್ತಿ ಪುರಸ್ಕೃತ ವಿಜ್ಞಾನಶಿಕ್ಷಕ (Sports) ನಾಗಭೂಣಷ್‌ಮಾರ್ಗದರ್ಶನದಲ್ಲಿ ಎನ್.ಪಲ್ಲವಿ ಸಾಧನೆಗೈದಿದ್ದು ಸಂತಸ ತಂದಿದೆ ಎಂದಿದ್ಧಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಮುಖ್ಯಶಿಕ್ಷಕ ವೆಂಕಟೇಶ್, ಎಸ್‌ಡಿಎಂಸಿ ಅಧ್ಯಕ್ಷ ಕಾಟಯ್ಯ, ಶಿಕ್ಷಕ ವರ್ಗ ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ಧಾರೆ.
