Chitradurga news|nammajana.com |29-6-2024
ನಮ್ಮಜನ.ಕಾಂ, ಚಳ್ಳಕೆರೆ: ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ, ಖೋ-ಖೋ ತರಬೇತುದಾರ (sports field) ಎಚ್.ತಿಪ್ಪೇಸ್ವಾಮಿ ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಕಾಲೇಜು ಸಭಾಂಗಣದಲ್ಲಿ ಬೀಳ್ಕೊಡಿಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ. ಆದರೆ, (sports field) ಎಚ್.ತಿಪ್ಪೇಸ್ವಾಮಿ ಈ ಕಾಲೇಜಿಗೆ ಆಗಮಿಸಿ ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕ್ರೀಡಾಪಟುಗಳಲ್ಲಿ ಶಿಸ್ತು ರೂಪಿಸುವುದು ಕಷ್ಟವಾಗಿದ್ದರೂ ಎಲ್ಲಾ ಕ್ರೀಡಾಪಟುಗಳಿಗೂ ಸೂಕ್ತ ಮಾರ್ಗದರ್ಶನ ನೀಡಿ ಅವರಲ್ಲಿ ಶಿಸ್ತು ಉಂಟಾಗುವಂತೆ ಮಾಡಿದ್ಧಾರೆ.
ಚಳ್ಳಕೆರೆ ನಗರದಲ್ಲಿ ಖೋ-ಖೋ ತರಬೇತುದಾರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ನಂತರ ಇಲ್ಲಿನ ಕ್ರೀಡಾಪಟುಗಳು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸುವ ತನಕ ಇವರ ಮಾರ್ಗದರ್ಶನ ಅವಶ್ಯಕವಾಗಿದೆ.
ಸೇವೆಯಿಂದ ನಿವೃತ್ತರಾದರೂ ಕ್ರೀಡಾಕ್ಷೇತ್ರದಲ್ಲಿ ಸದಾ ತಮ್ಮ ಸೇವೆ ಮುಂದುವರೆಸಲೆಂದು ಆಶಿಸುತ್ತೇನೆ ಎಂದರು.
ಇದನ್ನೂ ಓದಿ: ಕಚೇರಿ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ | District Bal Bhavan
ಅಭಿನಂದನೆ ಸ್ವೀಕರಿಸಿ ಬಾವುಕರಾಗಿ ಮಾತನಾಡಿದ ನಿರ್ಗಮನ ದೈಹಿಕ ಶಿಕ್ಷಣ ನಿರ್ದೇಶಕ ಎಚ್.ತಿಪ್ಪೇಸ್ವಾಮಿ, ಎಲ್ಲಿ ನಾನು ಕ್ರೀಡೆಯನ್ನು ಆರಂಭಿಸಿದ್ದೇನೋ ಅದೇ ನೆಲದಲ್ಲಿ ನನಗೆ (sports field) ಬೀಳ್ಕೊಡಿಗೆ ಸಮಾರಂಭ ಹಮ್ಮಿಕೊಂಡಿರುವುದು ಸಂತಸ ತಂದಿದೆ.
ಚಳ್ಳಕೆರೆ ಕ್ರೀಡಾಪಟುಗಳಿಗೆ ಸದಾಕಾಲ ಪ್ರೋತ್ಸಾಹ ನೀಡುವ ಪ್ರದೇಶವಾಗಿದೆ. ಕಳೆದ ಸುಮಾರು ೪೦ ವರ್ಷಗಳಿಂದ ವಿವಿಧ ಕ್ರೀಡೆಗಳು ಈ ಭಾಗದಲ್ಲಿ ನಡೆದಿದ್ದು, ಎಲ್ಲಾ ಕ್ರೀಡಾಪಟುಗಳು (sports field) ಮಾರ್ಗದರ್ಶನ ಪಡೆದು ಮುನ್ನಡೆದಿದ್ದಾರೆ. ನನ್ನ ಕ್ರೀಡಾ ಕ್ಷೇತ್ರದ ಸೇವೆಗೆ ಪತ್ನಿ ಕೆ.ಕೋಮಲ ಸಹಕಾರ ಪ್ರೇರಣೆಯಾಗಿತ್ತು.
ಸೇವೆಯಿಂದ ನಿವೃತ್ತರಾದರೂ ಕ್ರೀಡಾಕ್ಷೇತ್ರದಲ್ಲಿ ನನ್ನ ಸೇವೆಯನ್ನು ಮುಂದುವರೆಸುವೆ ಎಂದರು.
ಇದನ್ನೂ ಓದಿ: 29 ಜೂನ್ 2024 | ಚನ್ನಗಿರಿ | ಎಲ್ಲೆಲ್ಲಿ ಎಷ್ಟಿದೆ ಅಡಿಕೆ ಧಾರಣೆ? | Adike Rate channagiri
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಸ್.ಮಂಜುನಾಥ ಮಾತನಾಡಿ, ತಿಪ್ಫೇಸ್ವಾಮಿಯವರ ವಯೋನಿವೃತ್ತಿ ಪಡೆಯುತ್ತಿದ್ದರೂ ಅವರ ಮಾರ್ಗದರ್ಶನ ಕ್ರೀಡಾ ಕ್ಷೇತ್ರಕ್ಕೆ ಅವಶ್ಯಕತೆ ಇದೆ. ಇಲ್ಲಿಯೇ ಹುಟ್ಟಿಬೆಳೆದ ತಿಪ್ಪೇಸ್ವಾಮಿ ಇಲ್ಲಿಯೇ ನಿವೃತ್ತರಾಗುತ್ತಿರುವುದು ಸಂತೋಷ ವಿಷಯ. ಕ್ರೀಡಾ ಕ್ಷೇತ್ರದಲ್ಲಿ ಚಳ್ಳಕೆರೆ ನಗರ ಖ್ಯಾತಿಯಾಗಿದ್ದರೆ ಅದರಲ್ಲಿ (sports field) ತಿಪ್ಪೇಸ್ವಾಮಿಯವರ ಪಾಲು ಅಧಿಕ ಎಂದರು.
ಕಾರ್ಯಕ್ರಮದಲ್ಲಿ ಚಿತ್ರಹಳ್ಳಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ಶಿವಲಿಂಗಪ್ಪ, ಹಿರಿಯೂರು ವಾಣಿ ಸಕ್ಕರೆ ಕಾಲೇಜು ಧರಣೇಂದ್ರಯ್ಯ, ಸಿ.ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರಲಗುಂಟೆರಾಮಪ್ಪ, ಎಂ.ಎಸ್.ಮುತ್ತಯ್ಯ, ಸುಭಾನು, ರಘುನಾಥ, ಕೆ.ಚಿತ್ತಯ್ಯ ಮುಂತಾದವರು ಉಪಸ್ಥಿತರಿದ್ದರು.