Chitradurga news|Nammajana.com|7-8-2025
ನಮ್ಮಜನ.ಕಾಂ, ಚಿತ್ರದುರ್ಗ: ಹಿರಿಯೂರು ತಾಲೂಕಿನ (Sports) ಉಡುವಳ್ಳಿ ನವೋದಯ ಶಾಲೆಯಲ್ಲಿ ಓದುತ್ತಿರುವ ಐವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಹಿರಿಯೂರು ಗ್ರಾಮೀಣ ಹಿನ್ನೆಲೆಯ ಹತ್ತನೇ ತರಗತಿಯ ಕೆ.ವಿ.ಭರತ್ ಹಾಗೂ ಎಂಟನೇ ತರಗತಿಯ ಪ್ರಕೃತಿ ಆಗಸ್ಟ್ 25, 26 ಮತ್ತು 27ರಂದು ಒಡಿಶಾದಲ್ಲಿ ನಡೆಯಲಿರುವ ರಾಷ್ಟ್ರೀಯ ಖೋ ಖೋ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಲ್ಲದೆ, ಕ್ರಮವಾಗಿ ಚಿತ್ರದುರ್ಗ, ಚಳ್ಳಕೆರೆ ಮತ್ತು ಹಿರಿಯೂರು ಮೂಲದ ಪ್ರದೇಶದ ಹತ್ತನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ.
ನಾಲ್ಕು ವಿದ್ಯಾರ್ಥಿಗಳ ವಿವರ
ಚಿರಂಜೀವಿ, 12ನೇ ತರಗತಿಯ ತ್ರಿವೇಣಿ (Sports)
ರಮ್ಯ ಆಗಸ್ಟ್ 20, 21 ಹಾಗೂ 22ರಂದು ಓರಿಸ್ಸಾದಲ್ಲಿ ನಡೆಯುವ ವಾಲಿಬಾಲ್ ಪಂದ್ಯದಲ್ಲಿ ಭಾಗವಹಿಸಲಿ ದ್ದಾರೆ. ಇಲ್ಲಿ ಆಯ್ಕೆಯಾದರೆ ಇವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಸ್ಪರ್ಧಿಸಲಿದ್ದಾರೆ. ಈ ಮೊದಲು ತೆಲಂಗಾಣದಲ್ಲಿ ನಡೆದ ಪಂದ್ಯದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು.
ಶಾಲೆಯಲ್ಲಿ ಮುಖುಲ್ ಚೌದರಿ ಹಾಗೂ ಸಣ್ಣಪಾಪಣ್ಣ ನಾಯ್ಕ ಅವರು ದೈಹಿಕ ಶಿಕ್ಷಕರಾಗಿದ್ದಾರೆ. ನವೋದಯ ಶಾಲೆಯಲ್ಲಿ ಪ್ರತಿ ದಿನವೂ ಬೆಳಗ್ಗೆ 5.30ರಿಂದ ಒಂದು ತಾಸು ಮಕ್ಕಳಿಗೆ ಇದ್ದು, (Sports) ಕ್ರೀಡಾ ಚಟುವಟಿಕೆ ಪ್ರತಿಭಾವಂತರಿಗೆ ಹೆಚ್ಚಿನ ತರಬೇತಿ ನೀಡುವ ಕ್ರಮದಿಂದ ಇದೆಲ್ಲ ಸಾಧ್ಯವಾಗುತ್ತಿದೆ ಎಂದು ಸಣ್ಣ ಪಾಪಣ್ಣ ನಾಯ್ಕ ತಿಳಿಸಿದರು.
ಆಯ್ಕೆಯಾದವರಲ್ಲಿ ಅತ್ಯಂತ ಕಿರಿಯ ವಿದ್ಯಾರ್ಥಿನಿ ಪ್ರಕೃತಿ (Sports) ಐಮಂಗಳ ಹೋಬಳಿಯ ಸೊಂಡೆಕೆರೆ ನಿಜಲಿಂಗಪ್ಪ ಮತ್ತು ಜ್ಯೋತಿ ಎಸ್.ದಂಪತಿ ಪುತ್ರಿಯಾ ಗಿದ್ದು, ವಿದ್ಯಾಭ್ಯಾಸದ ಜತೆಗೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಳು.
ಮಕ್ಕಳ ಸಾಧನೆಗೆ ಹೆಮ್ಮೆಪಟ್ಟ ಪೋಷಕರು
ರಾಷ್ಟ್ರಮಟ್ಟದ ಖೋ-ಖೋ ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ಪೋಷಕರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. 5 ತರಗತಿವರೆಗೆ ಸೊಂಡೆಕೆರೆ ಗ್ರಾಮದ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರಕೃತಿಯು, ನವೋದಯ ಪರೀಕ್ಷೆಯಲ್ಲಿ (Sports) ತೇರ್ಗಡೆಯಾಗಿ, 6ನೇ ತರಗತಿಯಿಂದ ಉಡುವಳ್ಳಿ ನವೋದಯ ಶಾಲೆಯಲ್ಲಿ ಶಿಕ್ಷಣ ಮುಂದುವರೆಸಿದರು.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ | 7-8-2025
ಇದೀಗ ಪ್ರಕೃತಿಯ ಕ್ರೀಡಾಸಕ್ತಿಯನ್ನು ಗುರುತಿಸಿದ ಎಂ.ಡಿ.ಕೋಟೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ನರಸಿಂಹರಾಜು, ಪ್ರಕೃತಿಯು ರನ್ನಿಂಗ್ ರೇಸ್ ಮತ್ತು ಖೋ-ಖೋ ಕ್ರೀಡೆಯಲ್ಲಿ ಆರಂಭಿಕ ಪ್ರೋತ್ಸಾಹ ನೀಡಿದ್ದರು. ನವೋದಯ ಶಾಲೆಯಲ್ಲಿನ ವಾತಾವರಣವೂ ಮಗಳ ಸಾಧನೆಗೆ ಕಾರಣವಾಗಿದ್ದು, ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾಳೆ.
-ಪ್ರಕೃತಿಯ ಪಾಲಕರು
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252
