Chitradurga news|nammajana.com|7-11-2024
ನಮ್ಮಜನ.ಕಾಂ, ನಾಯಕನಹಟ್ಟಿ: ಕ್ರೀಡೆ ಯುವಕರ ಉಸಿರು ಮತ್ತು ಅವಿಭಾಜ್ಯ ಅಂಗವಾಗಬೇಕು ಯುವಕರಿಗೆ ಶ್ರದ್ಧೆ ಅತಿ (Sports) ಮುಖ್ಯವಾದದ್ದು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ ಹೇಳಿದರು
ಅವರು ಇಂದು ನಾಯಕನಹಟ್ಟಿ ಪ್ರೀಮಿಯರ್ ಲೀಗ್ ಕ್ರಿಕೆಟರ್ಸ್ ಹಮ್ಮಿಕೊಂಡಿದ್ದಂತಹ ಕ್ರಿಕೆಟ್ ಪಂದ್ಯಾವಳಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಚಿತ್ರದುರ್ಗದ ಜಿಲ್ಲೆಯ ಯುವಕರಿಗೆ ಕ್ರೀಡೆ ಅತ್ಯಂತ ಪ್ರಯೋಜನಕಾರಿ ಇಲ್ಲಿನ ಯುವಕರು ಉತ್ತಮವಾದ ದೇಹದ ಅಂಗ ಸೌಷ್ಠವ ಹೊಂದಿದವರಾಗಿದ್ದು ಇದು ಕ್ರೀಡೆಗೆ ಅತ್ಯಂತ (Sports) ಹೆಚ್ಚಿನ ಸಹಕಾರಿಯಾಗಿದೆ ಯುವಕರು ತಮ್ಮ ದಿನನಿತ್ಯದ ಬದುಕಿನಲ್ಲಿ ಕ್ರೀಡೆಯನ್ನು ಮೈ ಗೂಡಿಸಿಕೊಡಬೇಕು.
ಕ್ರೀಡೆ ಮನಸ್ಸಿನ ಸ್ತಿಮಿತವನ್ನು ಸಮತೋಲನದಲ್ಲಿಡುತ್ತದೆ. ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಕ್ರೀಡೆಗಳಲ್ಲಿ ಸೋಲು ಗೆಲುವುಗಳು ಸಹಜ ಇದನ್ನು ಯುವಕರುಗಳು ಸಮಚಿತ್ತದಿಂದ ತೆಗೆದುಕೊಳ್ಳಬೇಕು ಇವತ್ತಿನ ಸೋಲು ಮುಂದಿನ ಗೆಲುವಿಗೆ ಮೆಟ್ಟಿಲಾಗುತ್ತವೆ ವೈಫಲ್ಯಗಳು ಒಂದು ಘಟನೆಗಳು ಅಷ್ಟೇ ಇವುಗಳಿಗೆ ಎಂದ ಎದೆಗುಂದದೆ ಇಂತಹ ಸವಾಲುಗಳನ್ನು (Sports) ಬೆನ್ನತ್ತಿದಾಗ ಮಾತ್ರ ಅವಿರತವಾದ ಪರಿಶ್ರಮದ ಮುಖಾಂತರ ಇಂತಹ ಕ್ರೀಡೆಗಳನ್ನು ಎದುರಿಸಿ ಯಶಸ್ಸು ಪಡೆಯುವುದು ಸಾರ್ಥಕವೆನಿಸುವುದು.
ಇದನ್ನೂ ಓದಿ: ಚಿತ್ರದುರ್ಗ ನಗರಸಭೆ: ಪ್ರೋತ್ಸಾಹ ಹಾಗೂ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ | Municipal facility
ಪಂದ್ಯದಲ್ಲಿ ಭಾಗವಹಿಸುವಂತ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರತಿಭೆಗಳಾಗಿ ಹೊರಹೊಮ್ಮಬೇಕೆಂದು ಆಶಿಸಿದರು.
ಈ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನಿರಂಜನ್ ಬಿಜೆಪಿ ಮುಖಂಡ ವಿಷ್ಣು ತಿಪ್ಪೇಸ್ವಾಮಿ ನಾಯಕನಹಟ್ಟಿ ಪ್ರೀಮಿಯರ್ ಲೀಗ್ ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ಎಲ್ಲ ಕ್ರೀಡಾಪಟುಗಳು ಉಪಸ್ಥಿತರಿದ್ದರು