
Chitradurga news|Nammajana.com|21-1-2025
ನಮ್ಮಜನ.ಕಾಂ, ಚಿತ್ರದುರ್ಗ: ಉದ್ಯಮ ಎಂಬುದು ಒಂದು ಚಾಲೆಂಜ್ ಇದ್ದಂತೆ, ಉದ್ಯಮಕ್ಕೆ ಎಂಟ್ರಿಯಾದ ಮೇಲೆ ಏಳು ಬೀಳುಗಳನ್ನು ಮೆಟ್ಟಿ ನಿಂತು ಸಾಧನೆಯ ಮೆಟ್ಟಿಲುಗಳನ್ನು ಏರಿ ಯಶಸ್ಸಿನ ಗರಿಮೆ ಪಡೆಯುವುದು ಸಾಹಸದ ಕೆಲಸ, ಆದರೆ ಅಂತಗ ಸಾಲು ಸಾಲು ಸಮಸ್ಯೆಗಳನ್ನು ಎದುರಿಸಿ ಯಶಸ್ವಿ (Sri Ahobala TVS) ಮೂರು ವರ್ಷಗಳ ವಸಂತವನ್ನೂ ಪೂರೈಸಿದ ಹೆಮ್ಮೆ ಚಿತ್ರದುರ್ಗದ ಶ್ರೀ ಅಹೋಬಲ ಟಿವಿಎಸ್ ಗೆ ಸಲ್ಲುತ್ತದೆ.
ಹೌದು ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿರುವ ಶ್ರೀ ಅಹೋಬಲ ಟಿವಿಎಸ್ ಆರಂಭವಾಗಿ ಇಂದಿಗೆ ಮೂರು ವರ್ಷ ಪೂರ್ಣಗೊಂಡಿದ್ದು ಗ್ರಾಹಕ ಸ್ನೇಹಿ ಕಾರ್ಯದ ಮೂಲಕ ಚಿತ್ರದುರ್ಗ ಜಿಲ್ಲೆಯ ಜನರ ಮನ ಗೆದ್ದಿದೆ.
ಶ್ರೀ ಅಹೋಬಲ ಟಿವಿಎಸ್ 2022 ಜನವರಿ 21 ರಂದು ಶುಭಾರಂಭವಾದಾಗ ಟಿವಿಎಸ್ ಕಂಪನಿ ಚಿತ್ರದುರ್ಗ ಜಿಲ್ಲೆಯ ಮಟ್ಟಿಗೆ ಸಾಕಷ್ಟು ಸಮಸ್ಯೆಗಳು ಮತ್ತು ಮಾರ್ಕೆಟ್ ನಲ್ಲಿ ಕುಸಿತದ ಸ್ಥಿತಿಯಲ್ಲಿತ್ತು. ಆದರೆ ಟಿವಿಎಸ್ ಕಂಪನಿಯವರು (Sri Ahobala TVS) ಪಿ.ವಿ.ಅರುಣ್ ಕುಮಾರ್ ಮಡಿಲಿಗೆ ಟಿವಿಎಸ್ ಕಂಪನಿ ಹಾಕಿದರು.
ಶ್ರೀ ಅಹೋಬಲ ಟಿವಿಎಸ್ ಸಂಸ್ಥೆ ಕಟ್ಟಲು ಅರುಣ್ ಶ್ರಮ
ಶ್ರೀ ಅಹೋಬಲ ಸ್ಟೀಲ್ ಸಿಮೆಂಟ್ ಉದ್ಯಮದಲ್ಲಿ ಸಾಕಷ್ಟು ಹೆಸರು, ಖ್ಯಾತಿ ಗಳಿಸಿದ್ದ ಅರುಣ್ ಅವರಿಗೆ ಹೊಸ ಉದ್ಯಮವಾದರೂ ಒಂದಿಷ್ಟು ಮಾರ್ಕೆಟಿಂಗ್ ಸ್ಟಾಟಜಿ ಮತ್ತು ಜನರ ಮೈಡ್ ಸೆಟ್ ತಿಳಿದಿದ್ದರಿಂದ ಟಿವಿಎಸ್ ಕಂಪನಿಯ ಬೈಕ್, ಸ್ಕೂಟಿಗಳ ಮಾರಟಕ್ಕೆ ಮೊದಲು ಪ್ರಚಾರದ ವ್ಯಾಪ್ತಿ(Sri Ahobala TVS) ಹೆಚ್ಚಿಸಿಕೊಂಡು ದಿನದಿಂದ ದಿನಕ್ಕೆ ಅರುಣ್ ಹೆಸರಿನಲ್ಲಿ ಟಿವಿಎಸ್ ಇತರೆ ಕಂಪನಿಗಳ ಮಾರಟಕ್ಕೆ ಪೈಪೋಟಿ ನೀಡುವಂತೆ ಮಾಡಿ ಚಿತ್ರದುರ್ಗದಲ್ಲಿ ಟಿವಿಎಸ್ ಗೆ ಹೊಸ ಬುನಾದಿ ಹಾಕಿ ಜನರನ್ನು ಸೆಳೆಯುವ ಮೂಲಕ ಜನಪ್ರಿಯವಾಗಿ ಎಷ್ಟರಮಟ್ಟಿಗೆ ಎಂದರೆ ಟಿವಿಎಸ್ ಎಂದರೆ ಅಹೋಬಲ ಟಿವಿಎಸ್ ಎನ್ನುವಷ್ಟು ಹೆಸರು ಗಳಿಸಿ ಬೆಳೆದು ನಿಂತಿದ್ದಾರೆ ಇತಿಹಾಸದ ಪುಟಗಳಲ್ಲಿ ಸೇರುತ್ತಿದೆ.
ನಾರ್ತ್ ಕರ್ನಾಟಕಕ್ಕೆ ನಂಬರ್ ಒನ್ ಪ್ರಶಸ್ತಿ
ಶ್ರೀ ಅಹೋಬಲ ಟಿವಿಎಸ್ ಅತಿ ಹೆಚ್ಚು ವಾಹನಗಳ ಮಾರಟದ ಮೂಲಕ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ನಾರ್ತ್ ಕರ್ನಾಟಕದ ನಂಬರ್ ಒನ್ ಸ್ಥಾನ ಪಡೆದು ಪ್ರಶಸ್ತಿ ಪಡೆದ ಟಿವಿಎಸ್ ಕಂಪನಿ ಹಲವು ಅತಿ ಹಳೆಯ ಮಾರಟಗಾರರ ಮುಂದೆ
ಅತಿ ಕಡಿಮೆ ಅವಧಿಯಲ್ಲಿ ಸಾವಿರಾರು ವಾಹನಗಳ ಮಾರಟ ಮಾಡಿ ಕಂಪನಿಯ ಪ್ರಶಂಸೆಗೆ ಸಹ ಭಾಜನರಾಗಿದ್ದಾರೆ.
ಭವಿಷ್ಯದಲ್ಲಿ ಚಿತ್ರದುರ್ಗ ನಗರದಲ್ಲಿ ಶ್ರೀ ಅಹೋಬಲ ಟಿವಿಎಸ್ ನಂಬರ್ ಒನ್ ಸ್ಥಾನವಾಗಲಿ ಎಂಬ ಹೆಬ್ಬಯಕೆ ಸಹ ಹಿಡೇರಲಿ ಮತ್ತು ಜನರ ಸಹಕಾರ ಅಹೋಬಲ ಟಿವಿಎಸ್ ಮತ್ತಷ್ಟು (Sri Ahobala TVS) ವಸಂತಗಳನ್ನೂ ಪೂರೈಸಲಿ ಎಂಬ ಬಯಕೆ ನಮ್ಮದು.
ಇದನ್ನೂ ಓದಿ: January 24 ರಿಂದ ಮೆಕ್ಕೆಜೋಳ ಮಾರುಕಟ್ಟೆ ಬಂದ್
ಜನರ ಸಹಕಾರಕ್ಕೆ ಚಿರಋಣಿ
ನಮ್ಮಜನ.ಕಾಂ ಜೊತೆ ಮಾತನಾಡಿದ ಪಿ.ವಿ.ಅರುಣ್ ಕುಮಾರ್ ಶ್ರೀ ಅಹೋಬಲ ಟಿವಿಎಸ್ ನಾನು ಕಟ್ಟಿದ ಸಂಸ್ಥ ಇರಬಹುದು. ಆದರೆ ಅದನ್ನೂ ಕೈ ಹಿಡಿದು ನಡೆಸಿದ್ದು ಕೋಟೆ ನಾಡಿನ ಜಿಲ್ಲೆಯ ಜನ. ಅವರು ಟಿವಿಎಸ್ ವಾಹನಗಳ ಖರೀದಿ ಮೂಲಕ ನನ್ನ ಬೆಂಬಲಕ್ಕೆ ನಿಂತು ಮನೆ ಮಗನಂತೆ ಬೆಳೆಸುತ್ತಿದ್ದಾರೆ. ನಮ್ಮ ಶೋ ರೂಂ ಮೂರು ವರ್ಷಗಳು ಪೂರ್ಣಗೊಂಡಿದ್ದು ಚಿತ್ರದುರ್ಗ ಜಿಲ್ಲೆಯ ಜನರ ಕೋಟಿ ಕೋಟಿ ನಮನಗಳು ಮತ್ತು ನಿಮ್ಮ ಈ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ.
ಪಿ.ವಿ.ಅರುಣ್ ಕುಮಾರ್
ಮಾಲೀಕರು
ಶ್ರೀ ಅಹೋಬಲ ಟಿವಿಎಸ್
