Chitradurga news|nammajana.com|19-8-2024
ನಮ್ಮಜನ.ಕಾಂ, ಚಿತ್ರದುರ್ಗ: ಶ್ರೀ ಕೃಷ್ಣಜಯಂತಿಯನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸುವ ತೀರ್ಮಾನ ಕೈಗೊಳ್ಳಲಾಗಿದ್ದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಂಕೇತಿಕ ಕಾರ್ಯಕ್ರಮದ (Sri Krishna Jayanti)
ನಂತರಹೊಳಲ್ಕೆರೆ ರಸ್ತೆಯ ಕೃಷ್ಣವೃತ್ತದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಯಾದವ ಸಮಾಜದ ಹಿರಿಯ ಮುಖಂಡ ಸಿ.ಟಿ.ಕೃಷ್ಣಮೂರ್ತಿ ಹೇಳಿದರು.
ಸರ್ಕಾರದ ವತಿಯಿಂದ ಈಗಾಗಲೇ ಆಗಸ್ಟ್ 26ರಂದು ಕೃಷ್ಣ ಜಯಂತಿ ಆಚರಣೆಗೆ ತೀರ್ಮಾನಿಸಿದ್ದು ಸಮುದಾಯ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳಲಿದೆ. ಆಗಸ್ಟ್ 25 ರಂದು ಚಿತ್ರದುರ್ಗ ನಗರದಲ್ಲಿ ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಕೃಷ್ಣ ವೃತ್ತದಿಂದ (Sri Krishna Jayanti) ಆರಂಭವಾಗುವ ರ್ಯಾಲಿ ನಗರ ಪ್ರಮುಖ ಬೀದಿಯಲ್ಲಿ ಸಂಚರಿಸಿ ಅಂತಿಮವಾಗಿ ಕೃಷ್ಣ ವೃತ್ತದಲ್ಲಿ ಮುಕ್ತಾಯವಾಗಲಿದೆ.
ಚಿತ್ರ ದುರ್ಗದ ಜನರು ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಬೈಕ್ ರ್ಯಾಲಿ ಮೂಲಕ ಗಮನ ಸೆಳೆಯಲಾಗುವುದು ಎಂದರು.26 ರಂದು ಬೆಳಿಗ್ಗೆ ಶ್ರೀ ಯಾದವಾನಂದ ಮಠದ ಹತ್ತಿರವಿರುವ ಕೃಷ್ಣವೃತ್ತದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಲಿವೆ. ಯಾದವ ಸಮುದಾಯದ ಸಂಪ್ರದಾಯದ ಪ್ರಕಾರ ಕೋಲಾಟ, ಮೊಸರು ಮಡಿಕೆ (Sri Krishna Jayanti) ಒಡೆಯಲಾಗುತ್ತದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಂಕೇತಿಕ ಕಾರ್ಯಕರ್ಮದ ತರುವಾಯ ಕೃಷ್ಣ ವೃತ್ತದಲ್ಲಿ ಹನ್ನೆರೆಡು ಗಂಟೆಗೆ ಸಭಾ ಕಾರ್ಯ ಕ್ರಮ ಜರುಗುವುದು.
ಜಿಲ್ಲಾಧಿಕಾರಿ ಉದ್ಘಾ ಟನೆ ನೆರವೇರಿಸಲಿದ್ದು, ಶ್ರೀ ಕೃಷ್ಣಯಾದವಾ ನಂದ ಸ್ವಾಮೀಜಿ ಸಮ್ಮುಖ ವಹಿಸುವರು. ಸ್ಥಳೀಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಯಾದವ ಸಮಾಜದ ಮುಖಂಡರು ಪಾಲ್ಗೊಳಲಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ.85 ಕ್ಕಿಂತ ಅಧಿಕ ಅಂಕ ಪಡೆದ ಯಾದವ ಸಮುದಾಯದ 100 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಗುತ್ತದೆ. ಕೇವಲ ಯಾದವ ಜನಾಂಗವಷ್ಟೆ ಅಲ್ಲ ಎಲ್ಲಾ ಜಾತಿಯವರು ಶ್ರೀಕೃಷ್ಣ (Sri Krishna Jayanti) ಜನ್ಮಾಷ್ಠಮಿಯಲ್ಲಿ ಭಾಗವಹಿಸಿ ಜಯಂತಿಯನ್ನು ಯಶಸ್ವಿಗೊಳಿಸುವಂತೆ ಸಿ.ಟಿ.ಕೃಷ್ಣಮೂರ್ತಿ ಮನವಿ ಮಾಡಿದರು.
ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿ ಅಧ್ಯಕ್ಷ ಕದರಪ್ಪ, ಆರ್.ಶಿವಣ್ಣ, ಗರಡಿ ತಿಮ್ಮಣ್ಣ, ಮೈಲಾರಪ್ಪ, ನಗರಸಭೆ ಮಾಜಿ ಸದಸ್ಯ ಡಿ.ಸಿ.ಸುರೇಶ್ ಪತ್ರಿಕಾಗೋಷ್ಠಿಯಲ್ಲಿ