Holalkere news|nammajana.com |06-02-2025
ವಿಶೇಷ ವರದಿ: ಎಸ್.ವೇದಮೂರ್ತಿ ಹೊಳಲ್ಕೆರೆ
ನಮ್ಮಜನ.ಕಾಂ, ಹೊಳಲ್ಕೆರೆ: ಪಟ್ಟಣದ ಗ್ರಾಮದೇವತೆ ಶ್ರೀಕುಕ್ವಾಡೇಶ್ವರಿ ದೇವಿಯ ನೂತನ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮವನ್ನು (Shri Kukwadeshwari) ಹೊಳಲ್ಕೆರೆ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಕುಕ್ವಾಡೇಶ್ವರಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಮುಂಜಾನೆ 8 ಗೆ ವಿವಿಧ ಸಂಪ್ರದಾಯ ನೆರವೇರಿಸುವ ಮೂಲಕ ಹಮ್ಮಿಕೊಳ್ಳಲಾಗಿದೆ.
ಹಾದಿಶಕ್ತಿಯ ಸ್ವರೂಪಿನಿ ಎನ್ನುವ ಖ್ಯಾತಿಯ ಗ್ರಾಮ ದೇವತೆ ಕುಕ್ವಾಡೇಶ್ವರಿ ದೇವಿ ಭಕ್ತರ ಇರ್ಷ್ಟಾಥ ಸಿದ್ದಿಗಾಗಿ ಇಲ್ಲಿ ನೆಲೆಸಿ ಲೋಕಕಲ್ಯಾಣ ನೆರವೇರಿಸುತ್ತಿದ್ದಾಳೆ ಎನ್ನುವ ಭಕ್ತರ ನಂಬಿಗೆ ಅನಾಧಿಕಾಲದಿಂದ ಇದ್ದು, ಇದುವರೇಗೂ ಚಿಕ್ಕದಾದ ದೇವಸ್ಥಾನದಲ್ಲಿದ್ದ ದೇವಿಯ ಅಶಯದಂತೆ ಭಕ್ತರು ಸುಮಾರು 4 ಕೋಟಿ ಹಣದಲ್ಲಿ ಬೃಹತ್ ಮಾದರಿಯ ಕಲ್ಲಿನಿಂದ ದೇವಸ್ಥಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೆವೇರಿಸಲು ಸಿದ್ದತೆ ಕೈಗೊಂಡಿದ್ದು, ಶುಕ್ರವಾರ ಮುಂಜಾನೆ ನಾನಾ ಸಂಪ್ರಾಯದ ಜತೆ ಪೂಜಿ ಸಲ್ಲಿಸಿ ನಾಡಿನ ಮಠಾಧೀಶರ, ಸಾದು ಸಂತರ, ಸಾವಿರಾರು ಭಕ್ತರ ಸಮಷಮ ಭೂಮಿ ಪೂಜೆ ಸಲ್ಲಿಸಿ ದೇವಸ್ಥಾನದ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ.

ಶಂಕುಸ್ಥಾಪನೆ ಹಿನ್ನೇಲೆಯಲ್ಲಿ ಮುಂಜಾನೆ ನೂರಾರು ಮಹಿಳೆಯರಿಂದ ಪಟ್ಟಣದ ಕಾಲಭೈರವ ದೇವಸ್ಥಾನದ ಪುಪ್ಕರಣಿಯಲ್ಲಿ ನೂರೋಂದು ಕುಂಬಗಳಿಗೆ ಗಂಗಾಪೂಜೆ ಸಲ್ಲಿಸಿ ಕುಂಬ ಹೊತ್ತ ಮರೆವಣಿಗೆ ಜತೆ ವಿವಿಧ (Shri Kukwadeshwari) ವಾಧ್ಯಗಳೊಂದಿಗೆ ಪಟ್ಟಣದ ರಾಜಬೀದಿಗಳಲ್ಲಿ ಕುಕ್ವಾಡೇಶ್ವರಿ ದೇವಿ ಮೆರವಣಿಗೆ ನಡೆಸಲಾಗುತ್ತದೆ.
ಶಂಕುಸ್ಥಾಪನೆಯ ದಿವ್ಯ ಸಾನಿಧ್ಯವನ್ನು ಕನಕ ಗುರುಪೀಠ ಕಾಗಿನೆಲೆ ಮಹಾಸಂಸ್ಥಾನದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಹೊಸದುರ್ಗ ಕುಂಚಿಟಿಗ ಸಂಸ್ಥಾನದ ಶ್ರೀ ಶಾಂತವೀರ ಮಹಾಸ್ವಾಮಿಗಳು, ರಾಜನಹಳ್ಳಿ ವಾಲ್ಮೀಕಿ ಮಹಾಸಂಸ್ಥಾನದ ಶ್ರೀ ಪ್ರಸನ್ನಾನಂದಾಪುರಿ ಮಹಾಸ್ವಾಮಿಗಳು, ಚಿತ್ರದುರ್ಗದ ಮಾದಾರ ಚನ್ನಯ್ಯ ಮಠದ ಶ್ರೀ ಬಸವ ಪ್ರಿಯ ಮಾದರ ಚೆನ್ನಯ್ಯ ಮಹಾಸ್ವಾಮಿಗಳು, ಭಗಿರಥ ಪೀಠದ ಶ್ರೀ ಪುರುಷೋತ್ತಮಾನಂದ ಮಹಾಸ್ವಾಮಿಗಳು, ಹೊಸದುರ್ಗ ಕನಕಪೀಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಲಂಬಾಣಿ ಗುರುಪೀಠದ ಸೇವಾಲಾಲ್ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಇದನ್ನೂ ಓದಿ: Lake development | ಅಧಿಕಾರ ಶಾಶ್ವತವಲ್ಲ, ಇದ್ದಾಗ ಎಲ್ಲರ ನೆನಪಿನಲ್ಲಿ ಉಳಿಯುವಂತೆ ಮಾಡಬೇಕು: ಎಂ.ಚಂದ್ರಪ್ಪ
ಅಧ್ಯಕ್ಷತೆಯನ್ನು ಕುಕ್ವಾಡೇಶ್ವರಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಎಸ್.ರುದ್ರಪ್ಪ ವಹಿಸಲಿದ್ದು, ಚಿತ್ರದುರ್ಗದ ಲೋಕಸಭಾ ಸದಸ್ಯ ಗೋವಿಂದ ಎಂ ಕಾರಜೋಳ, ಶಾಸಕ ಡಾ.ಎಂ.ಚAದ್ರಪ್ಪ, ಹೊಸದುರ್ಗ ಕ್ಷೇತ್ರದ ಶಾಸಕ ಬಿ.ಜಿ.ಗೋವಿಂದಪ್ಪ, ಸಾಗರ ಕ್ಷೇತ್ರದ ಶಾಸಕ ಬೇಲೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಸಚಿವರಾದ ಎಚ್ .ಆಂಜನೇಯ, ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ, ಎ.ನಾರಾಯಣಸ್ವಾಮಿ, ಪುರಸಭೆಯ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಪುರಸಭೆಯ ಉಪಾಧ್ಯಕ್ಷೆ ಹೆಚ್.ಆರ್.ನಾಗರತ್ನ ವೇದಮೂರ್ತಿ ಉಪಸ್ಥಿತಿಯಲ್ಲಿ, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎ.ವಿ.ಉಮಾಪತಿ, ಪಿ. ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್.ಶಿವಕುಮಾರ್, ಮಾಜಿ ಉಪಾಧ್ಯಕ್ಷ ಬಿ. ಗಂಗಾಧರ್, ಮಾಜಿ ಸದಸ್ಯರಾದ ಸವಿತಾ ರಘು, ಪುರಸಭೆಯ ಮಾಜಿ ಅಧ್ಯಕ್ಷ ಆರ್ .ಎ.ಅಶೋಕ್, ಮಾಜಿ ಉಪಾಧ್ಯಕ್ಷ ಕೆ.ಸಿ.ರಮೇಶ್, ಪಿ.ಆರ್.ಮಲ್ಲಿಕಾರ್ಜುನ, ಡಿ.ಎಸ್. ವಿಜಯ್, ಮಮತಾ ಜಯಸಿಂಹ ಖಾಟ್ರೋತ್, ಪಿ.ಎಚ್.ಮುರುಗೇಶ್, ಷಬೀನ ಆಶ್ರಫ್ ವುಲ್ಲಾ, ಸೈಯದ್ ಸಜಿಲ್, ಸೈಯದ್ ಮನ್ಸೂರ್, ಪೂರ್ಣಿಮಾ ಬಸವರಾಜು, ಸುಧಾ ಬಸವರಾಜ್ ಯಾದವ್, ಸವಿತಾ ನರಸಿಂಹ ಖಾಟ್ರೋತ್, ವಸಂತ ರಾಜಪ್ಪ, ಮಂಜುನಾಥ್ ಸಂಗನಗುAಡಿ, ಬಸವರಾಜ್ ಜಿ.ಎಚ್, ಮಜರುಲ್ಲಾಖಾನ್, ದೇವಸ್ಥಾನ ಸಮಿತಿ ಕಾರ್ಯದರ್ಶಿ ಶಿಕ್ಷಕ ವರದರಾಜ್, ಸದಸ್ಯರಾದ ಬಸವರಾಜ್ ಸೇರಿ ಹಲವಾರು ಮುಖಂಡರು ಪಾಲ್ಗೊಳ್ಳಲಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252