
Chitradurga news|nammajana.com|2-05-2025
ನಮ್ಮಜನ.ಕಾಂ, ಚಿತ್ರದುರ್ಗ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) ನಡೆಸಿದ ಪ್ರಸಕ್ತ (2024-25ನೇ) ಶೈಕ್ಷಣಿಕ ಸಾಲಿನ SSLC ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರೆ, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ (SSLC Result-2025) ಗಳಿಸಿದೆ. ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಗಳಿಸಿದೆ. ಕಲಬುರಗಿ ಜಿಲ್ಲೆ ಕೊನೆ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಲಾಖೆಯ ಹಿರಿಯ ಅಧಿಕಾರಿ ಸಮ್ಮುಖದಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಗೊಂಡಿದೆ.

ಇದನ್ನೂ ಓದಿ: Dina Bhavishya | ದಿನ ಭವಿಷ್ಯ , ಇವತ್ತು ಯಾವ್ಯಾವ ರಾಶಿಗೆ ಶುಭ!
ದಕ್ಷಿಣ ಕನ್ನಡ ಜಿಲ್ಲೆ 91.12 ಶೇ. ಫಲಿತಾಂಶ ದಾಖಲಿಸಿದ್ದರೆ, (SSLC Result-2025) ಉಡುಪಿ ಜಿಲ್ಲೆ 89.96 ಫಲಿತಾಂಶ ದಾಖಲಿಸಿದೆ. 42.43 ಶೇ. ಫಲಿತಾಂಶ ದಾಖಲಿಸಿರುವ ಕಲಬುರಗಿ ಜಿಲ್ಲೆ ರಾಜ್ಯಕ್ಕೆ ಕೊನೆಯ ಸ್ಥಾನಿಯಾಗಿದ