Chitradurga news|nammajana.com | 08-05-2025
ನಮ್ಮಜನ.ಕಾಂ, ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಭರಮಣ್ಣ ನಾಯಕನ ದುರ್ಗ (ಬಿ.ದುರ್ಗ) ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ಇಂಧಿರಾಗಾಂಧಿ ವಸತಿ ಶಾಲೆ (ಪ.ಜಾತಿ)ಯಲ್ಲಿ 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಲ್ಲಾ 49 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸತತ ನಾಲ್ಕನೇ ಬಾರಿ ಶೇಕಡ 100% ಫಲಿತಾಂಶ ಗಳಿಸಿ (SSLC Result) ಹೊಳಲ್ಕೆರೆ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶೇಕಡ 100 ರಷ್ಟು ಫಲಿತಾಂಶ ಪಡೆದ ಏಕೈಕ ಶಾಲೆಯಾಗಿ ಹೊರ ಹೊಮ್ಮುವ ಜೊತೆಗೆ ಹೊಳಲ್ಕೆರೆ ತಾಲೂಕಿಗೆ ನಂಬರ್ ಒನ್ ಸ್ಥಾನ ಪಡೆದ ಶ್ರೇಯಕ್ಕೆ ಪಾತ್ರವಾಗಿದೆ.
ಅತ್ಯುನ್ನತ ಶ್ರೇಣಿಯಲ್ಲಿ 14 (ಡಿಸ್ಟಿಂಕ್ಷನ್) ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ದ್ವಿತೀಯ ಶ್ರೇಣಿಯಲ್ಲಿ 5 ವಿದ್ಯಾರ್ಥಿಗಳು (SSLC Result) ಉತ್ತೀರ್ಣರಾಗಿರುತ್ತಾರೆ.

ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಅತ್ಯತ್ತಮ ಶ್ರೇಣಿಯಲ್ಲಿ ವಸಂತ.ಜಿ 607 (ಶೇ.97.12) ಮೊದಲ ಸ್ಥಾನ, ಕಾವ್ಯ.ಕೆ 594 (ಶೇ.95.04) ದ್ವೀತಿಯ ಸ್ಥಾನ, ಆದರ್ಶ (ಶೇ.94.56) ತೃತೀಯ ಸ್ಥಾನ ಪಡೆದುಕೊಂದಿದ್ದು ನಂತರ ಸ್ಥಾನಗಳಲ್ಲಿ ಸಂಜನ.ಡಿ 584 (ಶೇ.93.44), ಅಮೂಲ್ಯ.ಎಸ್ 580 (ಶೇ.92.80), ಸೂರಜ್.ಎನ್ 567 (ಶೇ.92), ಅನುಷ.ಜೆ 572 (ಶೇ.91.52),ಹರ್ಷ ಎ.ಕೆ 564 (ಶೇ.90.24), ಮಂಜುನಾಥ್. ಟಿ 557 (ಶೇ.89.12), ಕೀರ್ತನ.ಎಸ್ 551(ಶೇ.88.16), ಆರ್ಚನ.ಆರ್. 543 (ಶೇ.86.88), ಜಯದೇವ.ಕೆ.ಪಿ. 539 (ಶೇ.86.24), ಶ್ರೀನಿವಾಸ್ 540 (ಶೇ.86.40), ಶ್ವೇತ ಬಿ.ಎಲ್ 535 (ಶೇ.85.60) ಅಂಕಗಳನ್ನು ಗಳಿಸಿ ಶಾಲೆಗೆ (SSLC Result) ಕೀರ್ತಿ ತಂದಿದ್ದಾರೆ.
ಕಳೆದ 2017-18ರಲ್ಲಿ ಆರಂಭವಾದ ಈ ಶಾಲೆ ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂರು ಬಾರಿ 100 ರ ಫಲಿತಾಂಶ ದಾಖಲಿಸಿದ್ದು ನಾಲ್ಕನೇ ಬಾರಿಗೂ ಶೇ.100 ರ ಫಲಿತಾಂಶ ದಾಖಲಿಸುವ ಮೂಲಕ ಶಿಕ್ಷಣ ಇಲಾಖೆಯ ಗೌರವವನ್ನು ಹೆಚ್ಚಿಸಿದೆ ಎಂದು ಹೊಳಲ್ಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಶ್ರೀನಿವಾಸ್ ತಿಳಿಸಿದ್ಧಾರೆ.
ಪ್ರಸ್ತುತ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸಲು ಹಲವಾರು ರೀತಿಯ ಪರಿಶ್ರಮವನ್ನು ವಹಿಸಲಾಗಿತ್ತು. ಆದರೂ ಸಹ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ (SSLC Result) ಏರಿಕೆಯಾಗದಿದ್ದರೂ ಬಿ.ದುರ್ಗ ಇಂದಿರಾಗಾಂಧಿ ಶಾಲೆ ಶೇ.100 ಫಲಿತಾಂಶ ದಾಖಲಿಸುವಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿರುವ ಶಿಕ್ಷಣದ ಕಾಳಜಿಯನ್ನು ತೋರಿಸಿದೆ ಎಂದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಜಗದೀಶ್ ಹೆಬ್ಬಳ್ಳಿ ಇವರ ಮಾರ್ಗದರ್ಶನ ಮತ್ತು ಆದೇಶದಂತೆ ಜೂನ್ ಮಾಹೆಯಿಂದಲೆ ಉತ್ತಮ ಫಲಿತಾಂಶ ಪಡೆಯಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ವಿದ್ಯಾರ್ಥಿಗಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಯಲ್ಲಿ ತೊಡಗಿಸಿದ್ದರಿಂದ ಈ ಫಲಿತಾಂಶ ಪಡೆಯಲು ಸಾಧ್ಯವಾಗಿದೆ.
ಇದನ್ನೂ ಓದಿ: JOB NEWS | ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಭೋದಕರಾದ ನಾಗರಾಜ್, ಶಾಹಿತಾ ತಸ್ಲಿಮ್, ರಾಜೀವ್, ರತ್ನಕರ್, ಭರತ್, ವಿನೋದ್ ಕಾಂಬಳೆ, ತಿಪ್ಪೇಸ್ವಾಮಿ, ಸೋಮಶೇಖರ್, ಅಂಜುಜಾ ಮತ್ತು ಭೋದಕೇತರ ವರ್ಗದ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲ ಮಂಜುನಾಥ್ ರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252