
Chitradurga news|nammajana.com|01-01-2025
ನಮ್ಮಜನ.ಕಾಂ, ಚಿತ್ರದುರ್ಗ: ನಗರದ ತುರುವನೂರು ರಸ್ತೆಯ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ ನಲ್ಲಿ ನೂತನ ವರ್ಷ 2025 ರ (Suco Bank) ಕ್ಯಾಲೆಂಡರ್ ರನ್ನು ಕ್ಲಸ್ಟರ್ ಮ್ಯಾನೇಜರ್ ನವೀನ್ ರಾಜ್ ಅವರು ಬಿಡುಗಡೆಗೊಳಿಸಿರು.
ಈ ಸಂದರ್ಭದಲ್ಲಿ ಮಾತನಾಡಿ ಸುಕೋ ಸೌಹಾರ್ದ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದೆ. ಕೃಷಿ, ಉದ್ಯೋಗ, ಪಿಎಂಇಜಿಪಿ ಸೇರಿ ಹಲವು ರೀತಿಯಲ್ಲಿ ಗ್ರಾಹಕರಿಗೆ ಸಾಲ ಸೌಲಭ್ಯ ಒದಗಿಸಿ ಬದುಕು (Suco Bank) ಕಟ್ಟಿಕೊಳ್ಳಲು ಸಹಕಾರಿಯಾಗಿ ಹೊರಹೊಮ್ಮಿದೆ.

ಚಿತ್ರದುರ್ಗದಲ್ಲಿ ಉತ್ತಮ ಸೇವೆ ಮೂಲಕ ಪ್ರಸಿದ್ಧಿ ಪಡೆದಿದೆ. ಸಂಜೆ 6 ಗಂಟೆವೆರೆಗೂ ಗ್ರಾಹಕರಿಗೆ ಸೇವೆ ನೀಡುವ ಏಕೈಕ ಬ್ಯಾಂಕ್ ಸುಕೋ ಬ್ಯಾಂಕ್ ಆಗಿದೆ. ಮುಂದಿನ ದಿನಗಳಲ್ಲಿ ಸಹ ಗ್ರಾಹಕ ಪರವಾದ ಸೇವೆಯ ಮೂಲಕ ಬ್ಯಾಂಕ್ ವ್ಯವಹಾರ (Suco Bank) ಹೆಚ್ಚಿಸಿಕೊಳ್ಳಲು ನಮ್ಮ ಹೆಜ್ಜೆ ಇಡುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ವಾಣಿ ವಿಲಾಸ ಸಾಗರ ಜಲಾಶಯಕ್ಕೆ 693 ಕ್ಯೂಸೆಕ್ಸ್ ನೀರು | ಸೋಮವಾರಕ್ಕೆ ಎಷ್ಟಿದೆ ನೀರಿನ ಮಟ್ಟ | Vani Vilasa Sagara Dam
ಈ ಸಂದರ್ಭದಲ್ಲಿ ಸುಕೋ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾದ ಸಿ. ಶೈಲಜಾ. ಸುಕೋ ಬ್ಯಾಂಕ್ ಗ್ರಾಹಕರಾದ ಚೂಡಮನಿ, ನಾಗರತ್ನ,ಮಾನಸ, ಶ್ರೀನಿವಾಸ್ ಶೆಟ್ಟಿ, ಶಿವುಕುಮಾರ್ , ಉಮೇಶ್ ರಾಮ ಮತ್ತು ಶಾಖೆಯ ಸಿಬ್ಬಂದಿಗಳಾದ ಶರಣಪ್ಪ ಕೋರಿ, ಶಿವಕುಮಾರ್ ನಾಡಿಗ್, ಯಶೋದ, ಪ್ರಾರ್ಥನ, ನಾಗರಾಜ್ ಉಪಸ್ಥಿತಿಯಲ್ಲಿದರು.
