Chitradurga news|Nammajana.com|12-9-2025
ನಮ್ಮಜನ.ಕಾಂ, ಚಳ್ಳಕೆರೆ: ತಾನು ಪ್ರೀತಿಯಿಂದ ಸಾಕಿ ಸಲುಹಿದ ಮೊಮ್ಮಗಳು ದಿಢೀರನೇ ಮನೆ ಯಿಂದ ಕಣ್ಮರೆಯಾದ ಬಗ್ಗೆ (suicide) ಬೇಸರಗೊಂಡ ಅಜ್ಜಿಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರಯ್ಯನಹಟ್ಟಿಯಲ್ಲಿ ನಡೆದಿದೆ.

ಸಮೀಪದ ಇಂಜಿನಿಯರಿಂಗ್ ಕಾಲೇಜು ಇರುವ ಕರೇಕಲ್ ಕೆರೆಗೆ ಚಿತ್ರಯ್ಯನಹಟ್ಟಿ ನಿವಾಸಿ ಗೌರಮ್ಮ (65) ಕಳೆದ ಮೂರು ದಿನಗಳ ಹಿಂದೆ ಕೆರೆಗೆ ಹಾರಿಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಚಳ್ಳಕೆರೆ : ಇಂದು ವಿದ್ಯುತ್ ವ್ಯತ್ಯಯ | POWER CUT
ಈ ಬಗ್ಗೆ ದೂರು ನೀಡಿರುವ ವೃದ್ಧೆಯ ಪುತ್ರ ತಿಪ್ಪೇಶ್, ಮೊಮ್ಮಗಳು ರೇಖಾ ಎರಡೂರು ದಿನಗಳಿಂದ ಕಣ್ಮರೆಯಾದ ಬಗ್ಗೆ ಗೌರಮ್ಮ ಬೇಸರ ಗೊಂಡಿದ್ದರು. ಇಂಜಿನಿಯರಿಂಗ್ ಕಾಲೇಜು ಬಳಿ (suicide) ಇರುವ ಕೆರೆಗೆ ಹಾರಿ ಮೃತ ಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಠಾಣಾಧಿ ಕಾರಿ ಗಂಗಾಧರ ಪ್ರಕರಣ ದಾಖಲಿಸಿಕೊಂಡಿದ್ದಾರೆ
