Chitradurga news|nammajana.com|19-11-2024
ನಮ್ಮಜನ.ಕಾಂ, ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದಲ್ಲಿ ತಾಯಿ-ಮಗಳು ಆತ್ಮಹತ್ಯೆ(suicide) ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ.
ಇದನ್ನೂ ಓದಿ: Tagaru kalaga | ಜನಮನ ಸೆಳೆದ ರಾಜ್ಯ ಮಟ್ಟದ ಟಗರು ಕಾಳಗ | ಡಿಚ್ಚಿ ಮೇಲೆ ಡಿಚ್ಚಿ ಹೊಡೆದುಕೊಂಡ ಟಗರುಗಳು
ತಾಯಿ ಸುಮಾರು (52) ವರ್ಷದ ಪುಷ್ಪ ಹಾಗೂ ಮಗಳು ಲಾವಣ್ಯ (16) ವರ್ಷದ ಮೃತರು. ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. (suicide) ಪುಷ್ಪ ಅವರ ಪತಿ ಬಸವರಾಜಪ್ಪ ಮೂರು ತಿಂಗಳ ಹಿಂದಷ್ಟೇ ಹೃದಯಾಘಾತದಿಂದ ನಿಧನ ಹೊಂದಿದ್ದರು. ಪತಿಯ ಸಾವಿನಿಂದ ತಾಯಿ ಮಗಳು ಕುಗ್ಗಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Adike Rate | 19 ನವೆಂಬರ್ 2024 | ಎಲ್ಲೆಲ್ಲಿ ಎಷ್ಟಿದೆ ಇಂದಿನ ಅಡಿಕೆ ರೇಟ್
ತಾಯಿ-ಮಗಳು ಮನೆಯಲ್ಲಿ ನೇಣು ಬಿಗಿದುಕೊಂಡು (suicide) ಮೃತಪಟ್ಟಿದ್ದು, ಕೊಳೆತ ರೀತಿಯಲ್ಲಿ ಶವ ಪತ್ತೆಯಾಗಿವೆ. ಘಟನಾ ಸ್ಥಳಕ್ಕೆ ಚಿಕ್ಕಜಾಜೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.