
Chitradurga news|nammajana.com|2-12-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ಸಾಣಿಕೆರೆ ಗ್ರಾಮದ (suicide) ಬೆಸ್ಕಾಂ ಉದ್ಯೋಗಿ ಓಬಣ್ಣ(೪೫) ಅನಾರೋಗ್ಯ ಹಿನ್ನೆಲೆಯಲ್ಲಿ ತನ್ನ ಹೊಲದಲ್ಲೇ ನೇಣುಹಾಕಿಕೊಂಡು ಮೃತಪಟ್ಟಿರುತ್ತಾನೆ.
ಕಳೆದ ಕೆಲವು ವರ್ಷಗಳಿಂದ ಎದೆನೋವು, ಭುಜನೋವಿನಿಂದ ನರಳುತ್ತಿದ್ದು ನೇಣುಹಾಕಿಕೊಂಡು ಮೃತಪಟ್ಟಿರುತ್ತಾನೆ. (suicide) ಪತ್ನಿ ಮಂಜುಳಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿ, ಮೃತ ಓಬಣ್ಣ ಬೆಂಗಳೂರಿನ ಕೋರಮಂಗಲ ವಿಭಾಗದ ವಿದ್ಯುತ್ ಸರಬರಾಜು ಕಂಪನಿಯಲ್ಲಿ ಲೈನ್‌ಮ್ಯಾನಾಗಿ ಕಾರ್ಯನಿರ್ವಹಿಸುತ್ತಿದ್ದ ಆಗಾಗೆ ಸಾಣೀಕೆರೆಗೆ ಬರುತ್ತಿದ್ದರು.

ಇದನ್ನೂ ಓದಿ: ಜಿ.ಪಂ, ತಾ.ಪಂ ಚುನಾವಣೆ ನಡೆಸಲು ಸಿದ್ಧತೆ | ಯಾವಾಗ ಚುನಾವಣೆ ನಡೆಯುತ್ತೆ ನೋಡಿ | ZP TP Election
ನ.೨೯ರಂದು ಬೆಂಗಳೂರಿನಿಂದ ಸಾಣಿಕೆರೆ ಬಂದ (suicide) ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡಿದೆ. ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಾಸ್ ಬಂದಿದ್ದೆವು. ಡಿ.೨ರ ಬೆಳಗ್ಗೆ ಮನೆಯಿಂದ ಹೊರಹೋದವರು ಜಮೀನಿನ ಹುಣಸೆ ಮರಕ್ಕೆ ನೇಣುಹಾಕಿಕೊಂಡಿದ್ಧಾನೆ. ಯಾವುದೇ ಅನುಮಾನವಿಲ್ಲವೆಂದು ದೂರಿನಲ್ಲಿ ತಿಳಿಸಿದ್ದಾಳೆ.
ಇದನ್ನೂ ಓದಿ: ಅಡಕೆ ಧಾರಣೆ | 2 ಡಿಸೆಂಬರ್ 2024 | ಚನ್ನಗಿರಿ, ಭೀಮಸಮುದ್ರ ಅಡಿಕೆ ರೇಟ್ | Adike Rate
