Chitradurga news | nammajana.com | 21-08-2025
ನಮ್ಮಜನ.ಕಾಂ,ಹೊಸದುರ್ಗ: ಹೊಸದುರ್ಗ(Lokayukta trap) ಎಡಿಎಲ್ ಆರ್ ಕಚೇರಿಯ ಸರ್ಕಾರಿ ಭೂಮಾಪಕ ಎಸ್.ಕೆ.ನಾಗರಾಜ್ ಪೋಡ್ ಮಾಡಿಕೊಡಲು 10 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂದಿಸಿದ್ದಾರೆ.
ಇದನ್ನೂ ಓದಿ: ವಿಧಾನ ಪರಿಷತ್ ನಲ್ಲಿ ಹಾಸ್ಟೆಲ್ ವಿದ್ಯಾರ್ಥಿ ವರ್ಷಿತಾ ಹತ್ಯೆ ಕುರಿತು ಪ್ರತಿಧ್ವನಿ

ಹೊಸದುರ್ಗ ತಾಲೂಕು ಗುಡ್ಡದನೇರಲಕೆರೆ ಗ್ರಾಮದ ಶಶಿಕಲಾ ಎಂಬುವವರು ತಮ್ಮ ಪತಿಯ ದೊಡ್ಡಮ್ಮ ಎಂ.ರಾಮಕ್ಕ ಎಂಬುವವರ ಜಂಟಿ ಖಾತೆಯಲ್ಲಿರುವ ಪಹಣಿಯನ್ನು ಪ್ರತ್ಯೇಕವಾಗಿ ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಎಡಿಎಲ್ ಆರ್ ಕಚೇರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು.
ಸದರಿ ಅರ್ಜಿ ಕಾರಣಕ್ಕೆ ಕಚೇರಿಯಿಂದ ಬಂದ ಸರ್ವೇಯರ್ ಎಸ್.ಕೆ.ನಾಗರಾಜ್, ಸರ್ವೇ ಮಾಡಿಕೊಂಡು, ಸಹಿ ಹಾಕಿ ಕೊಡಲು 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ವೇಳೆ ಶಶಿಕಲಾ ಅವರು ಗ್ರಾಪಂ ಸದಸ್ಯರಾದ ರಂಗನಾಥ್ ಅವರ ಮೂಲಕ ಮತ್ತೊಮ್ಮೆ ಮಾತನಾಡಿಸಿದಾಗ 12 ಸಾವಿರ ಕೇಳಿದ್ದಾರೆ. ಈ ವಿಷಯವನ್ನು ಮೊಬೈಲ್ ಮೂಲಕ ರೆಕಾರ್ಡ್ ಮಾಡಿಕೊಂಡು ಕರ್ನಾಟಕ ಲೋಕಾಯುಕ್ತ ನಿರೀಕ್ಷಕರಾದ ಮುಸ್ತಾಕ್ ಅಹಮ್ಮದ್ ಡಿ ಶೇಖ್ ಅವರಿಗೆ ಚಿತ್ರದುರ್ಗ ಲೋಕಾಯುಕ್ತ ಕಚೇರಿಯಲ್ಲಿ ದೂರು ಸಲ್ಲಿಸಿದ್ದಾರೆ.
ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಆ.21(ಇಂದು) ಕಾರ್ಯಾಚರಣೆ ನಡೆಸಿದ್ದು, ಹೊಸದುರ್ಗ ತಾಲೂಕು ಕಚೇರಿ ಪಕ್ಕದ ತರೀಕೆರೆ ರಸ್ತೆಯಲ್ಲಿರುವ ಬೆಲಗೂರು ಜೆರಾಕ್ಸ್ ಅಂಗಡಿ ಮುಂಭಾಗದಲ್ಲಿ ಹತ್ತು ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ವರ್ಷಿತಾ ಕೊಲೆ | ಹತ್ಯೆಗೂ ಮೊದಲು ಪ್ರಿಯಕರ ಚೇತನ್ ಜೊತೆ ವರ್ಷಿತಾ ಜೊತೆಯಾಗಿದ್ದೇಲಿ, ಚೇತನ್ ಪ್ಲಾನ್ ಹೇಗಿತ್ತು!
ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ್(Lokayukta trap) ಅವರ ನೇತೃತ್ವದಲ್ಲಿ ನಡೆದ ದೂರು ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಮೃತ್ಯುಂಜಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಠಾಣೆಯ ಇನ್ಸ್‌ಪೆಕ್ಟರ್ ಬಿ.ಮಂಜುನಾಥ್, ಸಿಬ್ಬಂದಿಗಳಾದ ಜಿ.ಎಂ.ತಿಪ್ಪೇಸ್ವಾಮಿ, ಸಿಎಚ್‌ಸಿ ಎಚ್. ಶ್ರೀನಿವಾಸ್, ಪುಷ್ಪ, ಸತೀಶ್ ಎಲ್.ಜಿ, ಮಂಜುನಾಥ್ ಆರ್., ವೀರೇಶ್ ಎಂ., ಮಾರುತಿ ಟಿ., ರಾಜೇಶ್ ಎಸ್., ವೆಂಕಟೇಶ್ ಕುಮಾರ್, ಶ್ರೀಪತಿ, ಮಾರುತಿ, ಸಂತೋಷ್ ಇದ್ದರು.
