Chitradurga news|nammajana.com|17-8-2024
ನಮ್ಮಜನ.ಕಾಂ, ಚಿತ್ರದುರ್ಗ: ಮಹಿಳೆಯೊಬ್ಬರು ನೀಡಿದ ದೂರು ದಾಖಲಿಸಿಕೊಳ್ಳಲು ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಚಳ್ಳಕೆರೆ ಪೊಲೀಸ್ ಠಾಣೆಯ ಎಎಸ್ಐ (ASI) ಮುಸ್ಟೂರಪ್ಪರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು (Suspended) ಮಾಡಿದ್ದಾರೆ.
ರತ್ನಮ್ಮ ಎಂಬುವವರ ಪುತ್ರ ಪೃಥ್ವಿರಾಜ್ (27) ಕಾಣೆಯಾಗಿದ್ದು, ದೂರು ನೀಡಲು ಜು.21ರಂದು ಚಳ್ಳಕೆರೆ ಪೊಲೀಸ್ ಠಾಣೆಗೆ (Suspended) ಹೋದಾಗ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದರು.

ಈ ನಡುವೆ ಪೃಥ್ವಿರಾಜ್ ಪೃಥ್ವಿರಾಜ್ ಮನೆಗೆ ವಾಪಸ್ ಬಂದ. ದೂರು ನೀಡಲು ಠಾಣೆಗೆ ಹೋದಾಗ ಪೊಲೀಸರು ತನ್ನ ತಾಯಿಯೊಂದಿಗೆ ವರ್ತಿಸಿದ ರೀತಿಗೆ ವ್ಯಗ್ರನಾಗಿ ಆತ, (Suspended) ತಾಯಿಯೊಂದಿಗೆ ಠಾಣೆಗೆ ತೆರಳಿ ಆ ದಿನ ದೂರನ್ನೇಕೆ ದಾಖಲಿಸಿಕೊಂಡಿಲ್ಲ ಎಂದು ಪ್ರಶ್ನಿಸಿದ. ಆಗಲೂ ಪೊಲೀಸರು ಬೇಜವಾಬ್ದಾರಿ ತೋರಿದ್ದರು.
ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ವರದಿ ಬಳಿಕ ಸಸ್ಪೆಂಡ್
ಬಳಿಕ ಪೊಲೀಸರ ವರ್ತನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೃಥ್ವಿ ವಿಡಿಯೋ ಒಂದನ್ನು (Suspended) ಪೋಸ್ಟ್ ಮಾಡಿದ್ದ. ಪ್ರಕರಣ ಬಯಲಾದ ಕೂಡಲೇ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ಪರಿಶೀಲಿಸಿ ವರದಿ ನೀಡುವಂತೆ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣಗೆ ಸೂಚಿಸಿದ್ದರು.
ಪ್ರಕರಣದ ವೇಳೆ ಕರ್ತವ್ಯದಲ್ಲಿದ್ದ ಮುಸ್ಟೂರಪ್ಪ, ಪೃಥ್ವಿ ಅವರ ತಾಯಿ ಠಾಣೆಗೆ ಬಂದಾಗ ದೂರು ದಾಖಲಿಸದೇ ಕರ್ತವ್ಯ ಲೋಪ ಎಸಗಿದ್ದಾರೆ’ ಎಂದು ಡಿವೈಎಸ್ಪಿ ವರದಿ ನೀಡಿದ್ದರು. ವರದಿ ಆ. 13ರಂದು ಎಎಸ್‌ಐನನ್ನು ಆಮಾನತು ಮಾಡಲಾಗಿದೆ.
ವಿಡಿಯೋದಲ್ಲೇನಿದೆ?:
ತಾಯಿಯ ದೂರು ಏಕೆ ದಾಖಲಿಸಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನಗೆ ನ್ಯಾಯ ಸಿಗದಿದ್ದರೆ ನಾನು ಟೆರರಿಸ್ಟ್ ಆಗುತ್ತೇನೆ. ಇಡೀ (Suspended) ಬೆಂಗಳೂರು ಮ್ಯಾಪ್ ನನ್ನ ನನ್ನ ಬಳಿ ಇದೆ. ಐಐಎಸ್ಸಿ, ಬೆಂಗಳೂರು ಮೆಟ್ರೋದಲ್ಲಿ 9 ವರ್ಷ ಕೆಲಸ ಮಾಡಿದ್ದೇನೆ.
ಇಸ್ರೋ, ಡಿಆರ್‌ಡಿಒಗೆ ಪವರ್ ಎಲ್ಲಿಂದ ಹೋಗುತ್ತೆ ಅಂತ ನನಗೆ ಗೊತ್ತು. ಎಲ್ಲಿಗೆ ಪಿನ್ ಇಟ್ರೆ, ಎಲ್ಲಿ ಬ್ಲಾಸ್ಟ್ ಮಾಡಬಹುದೆಂದು ಗೊತ್ತು. ಏನ್ ಬೇಕಾದ್ರೂ ಬ್ಲಾಸ್ಟ್, ಮಾಡಿ ಶಿವಾ ಅನಿಸ್ತೀನಿ’ ಎಂದು ವಿಡಿಯೋದಲ್ಲಿ ಪೃಥ್ವಿರಾಜ್ ಹೇಳಿಕೊಂಡಿದ್ದ. ಮುಂದುವರಿದು ‘ವಿಧಾನಸೌಧ,
ರಾಜಭವನಕ್ಕೆ ಪವರ್ ಎಲ್ಲಿಂದ ಬರುತ್ತೆ ಅಂತ ಗೊತ್ತು. ಎಲ್ಲಿ, ಏನು ಬ್ಲಾಸ್ಟ್ ಮಾಡ್ತೀನಿ ನನಗೆ ಗೊತ್ತು. ನನಗೆ ನ್ಯಾಯ ಕೊಡ್ಲಿಲ್ಲಾಂದ್ರೆ ಅದೇ ಕೆಲಸ ಮಾಡೋದು. ನನ್ನ ಕೈಮ್ ಮಾಡೋಕೆ ಪ್ರವೋಕ್ ಮಾಡಿದ್ದೀರ.
ನನ್ನನ್ನು ಗಲ್ಲಿಗೆ ಏರುಸ್ತೀರಾ…ಏರಿಸಿ
ನನ್ನನ್ನು ಗಲ್ಲಿಗೆ ಏರಿಸ್ತೀರಾ… ಏರಿಸಿ’ ಎಂದು ಸವಾಲು ಹಾಕಿದ್ದ. ಬಳಿಕ ಪೊಲೀಸರು ಪೃಥ್ವಿಯನ್ನು ಠಾಣೆಗೆ ಕರೆಸಿ ಕೌನ್ಸಿಲಿಂಗ್ ಮಾಡಿದ್ದರು. ಆದರೂ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದ. ಇದಾದ ಕೆಲ ದಿನಗಳಲ್ಲಿ ಬೆಂಗಳೂರಿಗೆ ತೆರಳಿ, ವಿಧಾನಸೌಧದದ ಮುಂದೆ ಸ್ಕೂಟರ್‌ಗೆ ಬೆಂಕಿ ಹಚ್ಚಿ (Suspended) ಸುದ್ದಿಯಾಗಿದ್ದ ಪೃಥ್ವಿರಾಜ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ‘ನನ್ನ ತಾಯಿಯೊಂದಿಗೆ ಚಳ್ಳಕೆರೆ ಪೊಲೀಸರು ಸರಿಯಾಗಿ ನಡೆದುಕೊಳ್ಳದ ಕಾರಣ ಹೀಗೆ ಮಾಡಿದ್ದಾಗಿ ಹೇಳಿಕೆ ನೀಡಿ ಜಾಮೀನಿನ ಮೇಲೆ ಹೊರ ಬಂದಿದ್ದಾನೆ.
ಇದನ್ನೂ ಓದಿ: ಕುರಿಹಟ್ಟಿಯ ಮೇಲೆ ಚಿರತೆ ದಾಳಿ, 5 ಕುರಿಗಳು ಸಾವು | Leopard attack
ಪ್ರಕರಣದಲ್ಲಿ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ನೀಡಿದ ವರದಿಯ ಆಧಾರದಲ್ಲಿ ಎಎಸ್‌ಐ ನ್ನು ಅಮಾನತು ಮಾಡಲಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252