
Chitradurga news|nammajana.com|24-12-2024
ನಮ್ಮಜನ.ಕಾಂ, ಚಿತ್ರದುರ್ಗ: ಟೂ-ಟಯರ್ ಕಾಟ್ ದುರಪಯೋಗ ಪಡಿಸಿಕೊಂಡ ಆರೋಪದ ಮೇರೆಗೆ (suspended) ಕೋನಸಾಗರ ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ವಾರ್ಡನ್ ಫಯಾಜ್ ಬಾಷಾ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.
ಮೊಳಕಾಲ್ಮೂರು ಟಾನ್ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ವಾರ್ಡ್ನ ಆಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ನಿಲಯಕ್ಕಾಗಿ, ಚಿತ್ರದುರ್ಗ ನಗರದ ಐ.ಯು.ಡಿ.ಪಿ ಲೇ ಔಟ್ನ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ (suspended) ವಿದ್ಯಾರ್ಥಿನಿಲಯದಲ್ಲಿ ಹೆಚ್ಚುವರಿಯಾಗಿದ್ದ 30 ಟೂ-ಟಯರ್ ಕಾಟ್, 44 ಬೆಡ್ ಮತ್ತು 36 ಪಿಲ್ಲೋಗಳನ್ನು ತೆಗೆದುಕೊಂಡು ಹೋಗಿದ್ದ, ವಾರ್ಡನ್ ಫಯಾಜ್ ಬಾಷಾ ಇವುಗಳಲ್ಲಿ 30 ಟೂ-ಟಯರ್ ಕಾಟ್ಗಳನ್ನು ದುರಪಯೋಗ ಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಾಣಿ ವಿಲಾಸ ಸಾಗರ | 24 ಡಿಸೆಂಬರ್ 2024 | ಇಂದು 693 ಕ್ಯೂಸೆಕ್ಸ್ ಹೆಚ್ಚಳ |Vani Vilasa Sagara Dam
ಸರ್ಕಾರಿ ಆಸ್ತಿಗಳ ದುರ್ಬಳಕೆ, ಕರ್ತವ್ಯ ನಿರ್ಲಕ್ಷತೆ ಮತ್ತು ಬೇಜಬ್ದಾರಿ ತೋರಿದ ಆಧಾರದಲ್ಲಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನೀಡಿದ ವರದಿ ಆಧರಿಸಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಕೆ.ಸಿ.ಎಸ್(ಸಿ.ಸಿ.ಎ) ನಿಯಮಾವಳಿ-1957ರ ನಿಯಮ (suspended) 10(1)ರ ಅನ್ವಯ ವಾರ್ಡನ್ ಫಯಾಜ್ ಬಾಷಾ ಅವರನ್ನು ಅಮಾನುತ್ತುಗೊಳಿಸಿದ್ದಾರೆ.
