
Chitradurga news|nammajana.com|5-1-2025
ನಮ್ಮಜನ.ಕಾಂ, ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕು ಎನ್. ಮಹದೇವಪುರ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಕಾಯಕ ಮಿತ್ರರಾಗಿ ಕೆಲಸ ನಿರ್ವಹಿಸುತ್ತಿದ್ದ ಜಿ.ಟಿ. ಭವ್ಯ ಅವರು ಸಮರ್ಪಕ ಕರ್ತವ್ಯ ನಿರ್ವಹಿಸದ ಕಾರಣಕ್ಕಾಗಿ ಅವರನ್ನು (Suspension) ವಜಾಗೊಳಿಸಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ.
ಗ್ರಾಮ ಕಾಯಕ ಮಿತ್ರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಿ.ಟಿ. ಭವ್ಯ ಅವರು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವುದಿಲ್ಲ, ನರೇಗಾ ಫೈಲ್‍ಗಳನ್ನು ಸರಿಯಾಗಿ ನಿರ್ವಹಿಸಿರುವುದಿಲ್ಲ ಎಂಬುದಾಗಿ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳು ಚರ್ಚಿಸಿ, ಇವರನ್ನು ಕರ್ತವ್ಯದಲ್ಲಿ (Suspension) ಮುಂದುವರೆಸುವುದು ಸೂಕ್ತವಲ್ಲ ಎಂಬುದಾಗಿ ತೀರ್ಮಾನಿಸಿದ್ದರು.

ಹೀಗಾಗಿ ಜಿ.ಟಿ. ಭವ್ಯ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಬೇರೊಬ್ಬರನ್ನು ನೇಮಕ ಮಾಡಿಕೊಡಬೇಕೆಂದು ಗ್ರಾ.ಪಂ. ಪಿಡಿಒ ಅವರು ಕೋರಿದ್ದರು.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ | ಇವತ್ತು ಯಾವ ರಾಶಿ ಶು ಫಲಗಳು?
ಈ ಹಿನ್ನೆಲೆಯಲ್ಲಿ ಗ್ರಾಮ ಕಾಯಕ ಮಿತ್ರರಾಗಿ ಕೆಲಸ ನಿರ್ವಹಿಸುತ್ತಿದ್ದ ಜಿ.ಟಿ. ಭವ್ಯ ಅವರನ್ನು ವಜಾಗೊಳಿಸಲಾಗಿದೆ (Suspension) ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
