Chitradurga news|Nammajana.com|16-9-2025
ನಮ್ಮಜನ.ಕಾಂ, ಚಿತ್ರದುರ್ಗ: ರೇಣುಕಾಸ್ವಾಮಿ ಅವರ ಆಕಸ್ಮಿಕ (ಟಿ.ರಘುಮೂರ್ತಿ) ಮರಣದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರೇಣಕಾಸ್ವಾಮಿ ಕುಟುಂಬಕ್ಕೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಕುಟುಂಬಕ್ಕೆ ಒಂದು ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಿ ರೇಣುಕಾಸ್ವಾಮಿ ಅವರ ಪತ್ನಿ ಸಹನಾಗೆ ಯಾವುದಾದರೂ ಮಠಗಳ ಸಂಸ್ಥೆಗಳಲ್ಲಿ ಸರ್ಕಾರಿ ಕೆಲಸ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಚಳ್ಳಕೆರೆ ಕೈ ಶಾಸಕ ಟಿ ರಘುಮೂರ್ತಿ ಭೇಟಿ ನೀಡಿದಾಗ ಉದ್ಯೋಗದ ಅಳಲನ್ನು ತೋಡಿಕೊಂಡ ಕುಟುಂಬಕ್ಕೆ ಸಂತ್ವಾನ ಹೇಳಿದ ಶಾಸಕರು ಮುರುಘಾಮಠದ ಆಡಳಿತಾಧಿಕಾರಿ ಶಿವಯೋಗಿ ಕಳಸದ್ ಅವರಿಗೆ ಕರೆ ಮಾಡಿ ಮಠದ ಸಂಸ್ಥೆಯಲ್ಲಿ ಸಹನಾಗೆ ಕೆಲಸ ನೀಡಲು ಮನವಿ ಮಾಡಿದ್ದಾರೆ.
ಸಿರಿಗೆರೆ ತರಳಬಾಳು ಮಠದ ಸಂಸ್ಥೆಯಲ್ಲೂ ಪ್ರಯತ್ನಕ್ಕೆ ಸಲಹೆ ನೀಡಿದ್ದು ಶಾಸಕರ ಸಹಕಾರಕ್ಕೆ ರೇಣುಕಾಸ್ವಾಮಿ ಕಟುಂಬ ಧನ್ಯತಾಭಾವ ಅರ್ಪಿಸಿದೆ.
ರೇಣುಕಾಸ್ವಾಮಿ ಕಷ್ಟಕ್ಕೆ ಮಿಡಿದಿದ್ದಾರೆ
ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಈ ಬಗ್ಗೆ ಹೇಳಿಕೆ (ಟಿ.ರಘುಮೂರ್ತಿ) ನೀಡಿದ್ದಾರೆ. ಶಾಸಕ ರಘುಮೂರ್ತಿ ಮನೆಗೆ ಬಂದಿದ್ದರು. ಅವರು ನಮ್ಮ ಕಷ್ಟ ಕೇಳಿದ್ದಾರೆ. ರಘುಮೂರ್ತಿ 1ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ. ಸೊಸೆ ಸಹನಾಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Dina Bhavishya | 16 ಸೆಪ್ಟೆಂಬರ್ 2025 | ಇಂದಿನ ರಾಶಿ ಭವಿಷ್ಯ, ಯಾರಿಗೆ ಶುಭ
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಬಾಬುರೆಡ್ಡಿ, ಮಾಜಿ ಜಿ.ಪಂ. ಅಧ್ಯಕ್ಷ ರವಿಕುಮಾರ್, ತಾಲೂಕು ಪಂಚಾಯತ್ ಅಧ್ಯಕ್ಷ ಲಿಂಗರಾಜ್ ಇದ್ದರು.
