Chitradurga news|nammajana.com|11-8-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಜಿಗುಂಟೆ ಗ್ರಾಮದ ಹರಿಜನ ಕುಟುಂಬಗಳು ಗ್ರಾಮದ ಸರ್ಕಾರಿ ಗೋಮಾಳದಲ್ಲಿ ನಿವೇಶನ (T. Raghumurthy) ರಹಿತರಿಗೆ ನಿವೇಶನ, ಹಕ್ಕು ಪತ್ರ ಸಹಿತ ನೀಡುವಂತೆ ಅಲ್ಲಿರುವ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿದ್ದ ಐದು ದಿನದ ಪ್ರತಿಭಟನೆ ಸ್ಥಳಕ್ಕೆ ಚಳ್ಳಕೆರೆ ಶಾಸಕರು ಹಾಗೂ ಸಣ್ಣ ಕೈಗಾರಿಕೆ ನಿಗಮದ ಅಧ್ಯಕ್ಷರಾಗಿರುವ ಟಿ.ರಘುಮೂರ್ತಿ ಎಂಟ್ರಿಯಿಂದ ಇಂದು ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.
ಆಗಸ್ಟ್ 7 ರಿಂದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಭಾನುವಾರಕ್ಕೆ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮುಷ್ಕರನಿರತ ನಿವೇಶನರೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಿ (T. Raghumurthy) ಶೀಘ್ರದಲ್ಲೇ ತಹಶೀಲ್ಧಾರ್ ನೇತೃತ್ವದಲ್ಲಿ ಅರ್ಜಿಗಳನ್ನು ಆಹ್ವಾನಿಸಿ ನಿಯಮಗಳ ಪ್ರಕಾರ ನಿವೇಶನ ನೀಡುವ ಭರವಸೆ ನೀಡಿದರು.

ಗ್ರಾಮದ ಮುಖಂಡ ಎನ್.ನಿಜಲಿಂಗಪ್ಪ ಮಾತನಾಡಿ, ಗ್ರಾಮದ ರಿಸರ್ವೆನಂ ೧೦೫ರಲ್ಲಿ ಸುಮಾರು ಐದು ಎಕರೆ ಸರ್ಕಾರಿ (T. Raghumurthy) ಗೋಮಾಳವಿದ್ದು ಅಲ್ಲಿ ನಮ್ಮೆಲ್ಲ ಕುಟುಂಬಗಳು ತಾತ್ಕಾಲಿಕವಾಗಿ ಕಳೆದ ೩೫ ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳ ಭರವಸೆ ಮೇರೆಗೆ ಮುಷ್ಕರ ಕೈಬಿಡಲಾಗುತ್ತಿತ್ತು.
ಇತ್ತೀಚೆಗೆ ಗ್ರಾಮದ ಕೆಲಪೆಟ್ಟಭದ್ರಶಕ್ತಿಗಳು ಸದರಿ ಪ್ರದೇಶವನ್ನು ಅಕ್ರಮಿಸಿಕೊಂಡಿದ್ಧಾರೆ. ಇದರಿಂದ ನೂರಾರು ಹರಿಜನ (T. Raghumurthy) ಕುಟುಂಬಗಳು ಸೂರಿಲ್ಲದೆ ಬೀದಿಗೆ ಬರುವ ಸ್ಥಿತಿ ಉಂಟಾಗಿದೆ. ಆದ್ದರಿಂದ ಮುಷ್ಕರ ನಡೆಸುತ್ತಿದ್ದೇವೆ.
ಆದರೆ, ಶಾಸಕರು ಇಂದು ನಮ್ಮ ಪ್ರತಿಭಟನಕಾರರನ್ನು ಭೇಟಿ ಮಾಡಿ ಅಧಿಕಾರಿಗಳಿಗೆ ನಿರ್ಧಿಷ್ಟ ಸೂಚನೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ ಸಹ ಭರವಸೆ ನೀಡಿದ್ದಾರೆ, (T. Raghumurthy) ಭರವಸೆ ನೀಡಿದಂತೆ ಆದಷ್ಟು ಬೇಗ ಸಮೀಕ್ಷೆ ನಡೆಸಿ ನಿವೇಶನ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ವಯನಾಡಿನ ಗುಡ್ಡ ಕುಸಿತ | ನೊಂದ ನಿರಾಶ್ರಿತರಿಗೆ ಮಿಡಿದ ಚಳ್ಳಕೆರೆ ಯುವಕ ತಂಡದಿಂದ ನೆರವು | Challakere Youth Team
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್‌ಪಾಷ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ, ಗ್ರಾಮದಮುಖಂಡರಾದ ಎನ್.ಮಹಲಿಂಗಪ್ಪ, ಆರ್.ರಂಗನಾಥ, ಎನ್.ಶ್ರೀನಿವಾಸ್, ಆರ್.ರಮೇಶ್, (T. Raghumurthy) ಕೆ.ಪ್ರಹ್ಲಾದ, ಎನ್.ಹರೀಶ್, ದೇವಿರಮ್ಮ, ಕರಿಯಮ್ಮ, ಜಯಮ್ಮ, ಕಮಲಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಶಶಿಧರ, ಕೃಷ್ಣ, ಆರ್.ಭದ್ರಿ, ಭೀಮನಕೆರೆಶಿವಮೂರ್ತಿ, ತಳಕು ಕಂದಾಯಾಧಿಕಾರಿ ಲಿಂಗೇಗೌಡ, ಕಸಬಾ ಕಂದಾಯ ಅಧಿಕಾರಿ ತಿಪ್ಫೇಸ್ವಾಮಿ, ಗ್ರಾಮಲೆಕ್ಕಿಗ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252