Chitradurga news | nammajana.com | 22-07-2025
ನಮ್ಮಜನ.ಕಾಂ,ಚಿತ್ರದುರ್ಗ: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 42 ನೇ ಕರ್ನಾಟಕ ರಾಜ್ಯ ಟೇಕ್ವಾಂಡೋ(Taekwondo) ಚಾಂಪಿಯನ್‍ಶಿಪ್‍ನಲ್ಲಿ ಚಿತ್ರದುರ್ಗದ ಟೇಕ್ವಾಂಡೋ ಅಮೆಚೂರ್ ಸೆಂಟರ್‍ನ ವಿದ್ಯಾರ್ಥಿಗಳು ಸೀನಿಯರ್, ಕೆಡೆಟ್, ಜೂನಿಯರ್, ಸಬ್ ಜೂನಿಯರ್ ಮತ್ತು ಜಿ-4 ವಿಭಾಗಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ: ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳಿಗೆ ಓದಿನಲ್ಲಿ ಆಸಕ್ತಿ | CDPO ನವೀನ್ ಕುಮಾರ್
ಜಿ-4 ವಿಭಾಗದಲ್ಲಿ ಪ್ರನೀಲ್ ಜಿ. ದೀಕ್ಷಿತ್ ಆರ್. ಲಕ್ಷ್ಮಿನಾರಾಯಣ ಎನ್. ಮೋಹಿತ್ ಆರ್ ಇವರುಗಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಲೋಹಿತ್ ಎನ್.ರೋಹಿತ್ ಎಸ್.ಎಸ್. ಹೃದಯ್ ಎನ್. ಇವರುಗಳು ಬೆಳ್ಳಿ ಪದಕಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ಪದ್ಮಾವತಿ ಎಸ್.ಎಸ್. ರಿಷಿಕ್ ಎಂ. ಇವರುಗಳು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಜಿಲ್ಲಾ ಪಂಚಾಯತ್ ಸಿಇಒಗಳಿಗೆ PDO ನಿಯೋಜನೆ ಅಧಿಕಾರ
ಪದಕ ವಿಜೇತರುಗಳಿಗೆ ಟೇಕ್ವಾಂಡೋ(Taekwondo) ತರಬೇತುದಾರರಾದ ರಂಗನಾಥ್ ಕೆ. ಪೂಜಿತಾ ಎಂ. ಮಾರುತಿ ಕೆ. ಇವರುಗಳು ಅಭಿನಂದಿಸಿದ್ದಾರೆ.
