Chitradurga news|nammajana.com|19-11-2024
ನಮ್ಮಜನ.ಕಾಂ, ಹೊಸದುರ್ಗ: ತಾಲೂಕಿನ ಕೆಲ್ಲೋಡು ಗ್ರಾಮದ ಕನಕ ಗುರುಪೀಠದ ಆವರಣದಲ್ಲಿ ಕನಕ (Tagaru kalaga) ಜಯಂತೋತ್ಸವದ ಅಂಗವಾಗಿ ನಡೆದ ಟಗರಿನ ಕಾಳಗ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ನೂರಾರು ಜನರು ಸುತ್ತಲೂ ಜಮಾಯಿಸಿ ಟಗರಿನ ಕಾಳಗ ವೀಕ್ಷಿಸಿದರು. ಕೊಬ್ಬಿದ ಎರಡು ಟಗರುಗಳು ನಾಲ್ಕು ಹೆಜ್ಜೆ ಹಿಂದೆ ಹೋಗಿ ವಾಪಸ್ ಬಂದು ಜೋರಾಗಿ ತಲೆಯಿಂದ ಡಿಚ್ಚಿ ಹೊಡೆಯುವ ದೃಶ್ಯರೋಚಕವಾಗಿತ್ತು.
ಬಲಿಷ್ಟ ಟಗರುಗಳ ರಭಸದ ಟಕ್ಕರ್‌ನಿಂದ ಹೊರಡುತ್ತಿದ್ದ ಶಬ್ದ ನೆರೆದ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸುವ ಮೂಲಕ ಕಾಳಗದ ಅಖಾಡ ರಂಗು ಪಡೆದುಕೊಳ್ಳುತ್ತಿತ್ತು.
2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ 8 ಹಲ್ಲು ಹೀಗೆ (Tagaru kalaga) ಟಗರುಗಳನ್ನು ವಿಂಗಡಿಸಿ ನಡೆದ ಈ ಸ್ಪರ್ಧೆಯಲ್ಲಿ ಟಗರುಗಳ ಸೆಣಸಾಟ ನೆರೆದಿದ್ದವರಲ್ಲಿ ರೋಮಾಂಚನ ಸೃಷ್ಟಿಸಿತು.
ಕಾಳಗದಲ್ಲಿ ಕೆಲವು ಟಗರುಗಳು ತಮ್ಮ ಶಕ್ತಿ ಸಾಮರ್ಥ್ಯ ಸಾಭೀತು ಪಡಿಸಲು ಮುನ್ನುಗಿ ಹೋಗುತ್ತಿದ್ದವು. ಕೆಲವು ಟಗರುಗಳು ಮೊದಲ ಟಕ್ಕರ್ ನಂತರ ಮತ್ತೊಂದು ಗುದ್ದಿಗೆ ಹಿಂಜರಿದು ಅಖಾಡದಿಂದ ಕಾಲ್ಕಿಳುತ್ತಿದ್ದವು.
ನೋಡುಗರು ಕೇಕೆ, ಶಿಳ್ಳೆ ಹೊಡೆದು ಟಗರಿನ ಮಾಲೀಕರನ್ನು ಹುರಿದುಂಬಿಸಿದರು.ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರಿಂದ ಸುಮಾರು 80 ಕ್ಕೂ ಹೆಚ್ಚು ಟಗರುಗಳು ಸ್ಪರ್ಧೆಗೆ ಆಗಮಿಸಿದ್ದವು. ಇದರಲ್ಲಿ ಜಯಶಾಲಿಯಾದ ಟಗರಿನ ಮಾಲೀಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಾಸಕರಾದ ಬಿ.ಜಿ.ಗೋವಿಂದಪ್ಪ ಹಾಗೂ ಟಿ.ರಘುಮೂರ್ತಿ ಟಗರು ಕಾಳಗಕ್ಕೆ ಚಾಲನೆ ನೀಡಿದರು.
ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಶ್ರೀಮಠದ ವತಿಯಿಂದರಾಜ್ಯ ಮಟ್ಟದಟಗರು ಕಾಳಗ (Tagaru kalaga) ಹಮ್ಮಿಕೊಂಡಿರುವುದು ಸ್ವಾಗತರ್ಹ.ಗ್ರಾಮೀಣಜನರಜೀವನದಲ್ಲಿ ಹಾಸು ಹೊಕ್ಕಾಗಿರುವ ಇಂತಹ ಕ್ರೀಡೆಗಳು ನಿರಂತರವಾಗಿ ನಡೆಯಬೇಕು ಎಂದರು.
ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಕನಕ ಜಯಂತೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆಆಯೋಜಿಸಲಾಗಿರುವಟಗರು ಕಾಳಗಕ್ಕೆ ಉತ್ತಮ ಪ್ರತಿಕ್ರಿಯೆದೊರಕಿದೆ.ರಾಜ್ಯದ ನಾನಾ ಭಾಗಗಳಿಂದ ಮಾಲೀಕರು ಟಗರುಗಳನ್ನು ಸ್ಪರ್ಧೆಗೆಕರೆತಂದಿದ್ದಾರೆ. ಮುಂದಿನ ವರ್ಷವೂ ಸಹ ಟಗರು ಕಾಳಗ ಏರ್ಪಡಿಸಲಾಗುವುದು ಎಂದರು.
ಇದನ್ನೂ ಓದಿ: BPL card | ಚಿತ್ರದುರ್ಗ ಜಿಲ್ಲೆಯಲ್ಲಿ ಎಷ್ಟು ಬಿಪಿಎಲ್ ಕಾರ್ಡ್ ರದ್ದು, ಇಲ್ಲಿದೆ ಮಾಹಿತಿ
ಈ ಸಂಧರ್ಬದಲ್ಲಿ ತಾಪಂ ಇಓ ಸುನೀಲ್‌ಕುಮಾರ್, ತಾಲೂಕು ಕುರುಬ ಸಂಘದ ಅಧ್ಯಕ್ಷ ಮಂಜುನಾಥ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಾಂತಕುಮಾರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹಂತೇಶ್, ಕುರುಬ ಸಮಾಜದ ಮುಖಂಡರಾದ ಎಂ.ಆರ್.ಸಿ.ಮೂರ್ತಿ, ಕೆ.ಟಿ.ಮಂಜುನಾಥ್, ಕೆ.ಅನಂತ್, ಬಿ.ಜಿ.ಅರುಣ್, ಮಠ ಶಿವು ಮತ್ತಿತರಿದ್ದರು.