Chitradurga news |nammajana.com|25-5-2024
ನಮ್ಮಜನ.ಕಾಂ, ಹೊಸದುರ್ಗ: ಮಹಿಳೆಯರು ಸ್ವಾವಲಂಬಿ ಬದುಕು ಯೋಚಿಸಿಕೊಳ್ಳಲು ಟೈಲರ್ (Tailoring training) ತರಬೇತಿಯನ್ನ ಪಡೆದುಕೊಳ್ಳಬೇಕು ಆಗ ಮಾತ್ರ ಹೆಣ್ಣು ಸಮಾಜದ ಮುಖ್ಯಸ್ಥರಕ್ಕೆ ಬರಲು ಸಾಧ್ಯವಾಗುವುದು, ಸ್ವಾವಲಂಬಿ ದುಡಿಮೆ ಕಲಿತ ಹೆಣ್ಣು ಏನನ್ನಾದರೂ ಸಾಧಿಸಬಹುದು ಇದರಿಂದ ಆರ್ಥಿಕವಾಗಿ ತಮ್ಮ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗುವುದು ಎಂದು ಪುರಸಭಾ ಸದಸ್ಯ ಡಾಕ್ಟರ್ ಸ್ವಾತಿ ಪ್ರದೀಪ್ ತಿಳಿಸಿದರು.
ಪಟ್ಟಣದ ಸಮರ್ಥ್ ಕರ್ನಾಟಕ ರಾಜ್ಯ ಜವಳಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ ಮತ್ತು ಮಹರ್ಷಿ ವಾಲ್ಮೀಕಿ ವೃತ್ತಿ ಮತ್ತು ಕೌಶಲ್ಯ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ನಡೆದ ಟೈಲರಿಂಗ್ (Tailoring training) ತರಬೇತಿದಾರರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಟುಂಬ ನಿರ್ವಹಣೆಯಲ್ಲಿ ಮಹಿಳೆ ಪಾತ್ರ ದೊಡ್ಡದು (Tailoring training)
ಒಂದು ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅತಿ ಮುಖ್ಯವಾಗಿರುತ್ತದೆ. ಹಿಂದಿನ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಮನೆ ಕೆಲಸದವಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಳು ಆದರೆ ಪ್ರಸ್ತುತ ಸಂದರ್ಭದಲ್ಲಿ ಮಹಿಳೆ ಸಮಾಜದ ಎಲ್ಲ ಸ್ಥಳದಲ್ಲಿಯೂ ಕೆಲಸ ಮಾಡುತ್ತಿದ್ದಾಳೆ ರಾಜಕೀಯ ಸಾಮಾಜಿಕ ಧಾರ್ಮಿಕ ಕಾರ್ಯಗಳ ಜೊತೆ ಜೊತೆಗೆ ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನ ನಿರ್ವಹಿಸುವ ಮಹಾನ್ ಸಾಧಕಿಯಾಗಿದ್ದಾಳೆ ಎಂದರು.
ಸರ್ಟಿಫಿಕೇಟ್ ಗಾಗಿ ತರಬೇತಿಗೆ ಬರದೇ ಅನುಭವಿಗಳಿಂದ ಕೌಶಲ್ಯ ಕಲಿಯಿರಿ: ಸದ್ಗುರು ಪ್ರದೀಪ್
ಯುವ ಉದ್ಯಮಿ ಸದ್ಗುರು ಪ್ರದೀಪ್ ಮಾತನಾಡಿ ಟೈಲರಿಂಗ್ (Tailoring training) ತರಬೇತಿಯಲ್ಲಿ ಮಹಿಳೆಯರು ಕೇವಲ ಸರ್ಟಿಫಿಕೇಟ್ ತರಬೇತಿ ಪಡೆಯಲು ಬರಬಾರದು, ಬದಲಾಗಿ ಅನುಭವಿ ತರಬೇತಿ ಅಧಿಕಾರಿಗಳಿಂದ ಕೌಶಲ್ಯವನ್ನು ಕಲಿತು ಗುಣಮಟ್ಟದ ಬಟ್ಟೆ ಹೊಲಿಗೆ ಮಾಡಿದಾಗ ಹೆಚ್ಚು ಹೆಚ್ಚು ಗ್ರಾಹಕರು ನಿಮ್ಮನ್ನು ತಲುಪಲು ನೀವು ಪರಿಣಿತರಾಗಬೇಕು.
ಇದನ್ನೂ ಓದಿ: Nayakanahatty: ತಿಪ್ಪೇಶನ ಜಾತ್ರೆಯಲ್ಲಿ ಭಕ್ತರು ಹುಂಡಿಗೆ ಹಾಕಿದ್ದು ಎಷ್ಟು ಲಕ್ಷ ಗೊತ್ತೆ?
ಯಾವುದೇ ವೃತ್ತಿಯಲ್ಲಿ ಮೊದಲು ನಮ್ಮಲ್ಲಿಗೆ ಬರುವ ಗ್ರಾಹಕರನ್ನ ಸೌಜನ್ಯದಿಂದ ಮಾತನಾಡಿಸಿ ನಮ್ಮ ಹೊಲಿಗೆ ಕೆಲಸದಲ್ಲಿ ನೈಕುಣ್ಯತೆ ಇದ್ದು ಅವರ ಮನಸ್ಸನ್ನು ಪರಿವರ್ತಿಸಿದಾಗ ಯಾವುದೇ ವ್ಯವಹಾರಗಳು ಅಭಿವೃದ್ಧಿಯಾಗಬಲ್ಲವು. ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪುವಂತಾಗಬೇಕು ಆಗ ಇಂತಹ ಸೇವೆಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು
ಶ್ರೀ ಮಹರ್ಷಿ ವಾಲ್ಮೀಕಿ ಉಡುಪಿ ಮತ್ತು ಕೌಶಲ್ಯ ತರಬೇತಿ ಸಂಸ್ಥೆಯ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಶಶಿಕಲಾ ಅಶೋಕ್, ಪುರಸಭಾ ಮಾಜಿ ಸದಸ್ಯರಾದ ಸವಿತಾ ರಮೇಶ್, ತಾಯಿ ಅಗ್ರಿಮಾರ್ಟ್ ಗೋಪಾಲಕೃಷ್ಣ ನಿಂಗಪ್ಪ ಹಾಗೂ ತರಬೇತುದಾರರು ಹಾಜದ್ದರು.