
Chitradurga news|nammajana.com|11-03-2025
ನಮ್ಮಜನ.ಕಾಂ, ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ನಿಂದ ಹಣಪಡೆದುಕೊಂಡು ಹೋಗುವ ಗ್ರಾಹಕರ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಿ ಅವರು ಬ್ಯಾಂಕ್ನಿಂದ ಪಡೆದು (Theft) ಹಣವನ್ನು ಚಾಣಾಕ್ಷತನದಿಂದ ಎಗರಿಸುವ ಪ್ರಕರಣಗಳು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.
ಕಳೆದ ಮೂರು ದಿನಗಳ ಹಿಂದೆ ಬೆಂಗಳೂರು ರಸ್ತೆಯ ವಾಸವಿಮಹಲ್ಪಕ್ಕ ನರಹರಿ ನಗರದ ರವಿಕುಮಾರ್ ಎಂಬುವವರ 1.40 ಲಕ್ಷ ಹಣ ಅವರ ವಾಹನದ (Theft) ಬಾಕ್ಸ್ನಲ್ಲಿಟ್ಟಿದ್ದು, ಅದನ್ನು ಹಾಡುಹಗಲೇ ಸಿಸಿ ಕ್ಯಾಮರವನ್ನು ಮರೆಮಾಚಿ ಹಣ ದೋಚಿದ್ದರು.

ಈ ಘಟನೆ ಮಾಸುವೆಮುನ್ನವೇ ಚಿತ್ರದುರ್ಗ ರಸ್ತೆಯ ಕೆನರಾ ಬ್ಯಾಂಕ್ನಲ್ಲಿ ಸೋಮವಾರ ಬೆಳಗ್ಗೆ ಕುರುಡಿಹಳ್ಳಿಯ ತಿಪ್ಫೇಸ್ವಾಮಿ ಎಂಬ ವ್ಯಕ್ತಿ ಕೋಳಿಫಾರಂನ 1.70 ಲಕ್ಷ ಹಣವನ್ನು ಬ್ಯಾಂಕ್ನಿಂದ ಡ್ರಾಮಾಡಿಕೊಂಡು ತನ್ನ ಬೈಕ್ನ (Theft) ಸೈಡ್ಬಾಕ್ಸ್ನಲ್ಲಿಟ್ಟು ಹೊರಡುವ ಸಂದರ್ಭದಲ್ಲಿ ಸೈಡ್ಬಾಕ್ಸ್ನಲ್ಲಿದ್ದ ಹಣವನ್ನು ಯಾರೋಕಳ್ಳರು ದೋಚಿದ್ದಾರೆ.
ಇದನ್ನೂ ಓದಿ: Adike rate | ಚನ್ನಗಿರಿ ಇಂದಿನ ಅಡಿಕೆ ರೇಟ್
ಕೇವಲ ಎರಡು ನಿಮಿಷದ ಅವಧಿಯ ಕಳ್ಳರ ಕೈಚಳಕ ತೋರಿಸಿದ್ದು, ಸಾರ್ವಜನಿಕರಲ್ಲಿ ಗಾಬರಿಗೊಳಿಸಿದೆ. ಡಿವೈಎಸ್ಪಿ ರಾಜಣ್ಣ, ಸಿಬ್ಬಂದಿ ವರ್ಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
