Chitradurga news |nammajana.com | 12-9-2024
ನಮ್ಮಜನ.ಕಾಂ, ಗದಗ: ದೇವಸ್ಥಾನಗಳನ್ನೆ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಅಮಾನತು ಆಗಿರುವ ಜೈಲು ವಾರ್ಡನ್ ಸೇರಿದಂತೆ ಮೂವರ ತಂಡವನ್ನು (Theft temple) ಗದಗ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿಖಾನೆ ಇಲಾಖೆ ಅಮಾನತು ಆಗಿರುವ ನೌಕರ ಶ್ರೀಕಾಂತ ಗುಡದೂರ ಮತ್ತು ಆತನ ಸಹಚರರಾದ ಪ್ರಸಾದ ಸಿಳ್ಳಿಕೇತರ, ಗುರುಪ್ರಸಾದ ಸಿಳ್ಳಿಕೇತರ ಬಂಧಿತ ಮೂವರು ಪ್ರಮುಖ ಆರೋಪಿಗಳು, ಗದಗ, ಹಾವೇರಿ, ವಿಜಯನಗರ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯಲ್ಲಿನ ಪ್ರಮುಖ ದೇವಸ್ಥಾನಗಳನ್ನೇ ಗುರಿ ಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಈ ಮೂವರ ತಂಡ,(Theft temple) ಶಿರಹಟ್ಟಿಯ ಅಂಬಾಭವಾನಿ ದೇವಸ್ಥಾನ, ಹೇಮಗಿರಿ ಮಠ ಬನ್ನಿಕೊಪ್ಪ, ದುರ್ಗಾದೇವಿ ಹಾಗೂ ಮಾರುತಿ ದೇವಸ್ಥಾನ,
ಹೇಮಗಿರಿ ಚನ್ನಬಸವೇಶ್ವರ ಮಠ ಗುತ್ತಲ ಗ್ರಾಮ, ಬನಶಂಕರಿ ದೇವಸ್ಥಾನ ತುಮ್ಮಿನಕಟ್ಟಿ ಸೇರಿದಂತೆ ಗದಗ, ಹಾವೇರಿ, ವಿಜಯನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹಲವಾರು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದು ತನಿಖೆ ವೇಳೆ ಪತ್ತೆಯಾಗಿದೆ.
ಇದನ್ನೂ ಓದಿ: ಘಟಪರ್ತಿ ಕಾಲೇಜಿನ ಬಾಲಕಿಯರ ಖೋ-ಖೋ ತಂಡ ರಾಜ್ಯಮಟ್ಟಕ್ಕೆ ಆಯ್ಕೆ | Challakere
ವಿಜಯನಗರ ಜಿಲ್ಲೆಯ ಕೊಟ್ಟೂರು, ಹರಪನಹಳ್ಳಿ, ಶಿವಮೊಗ್ಗ ಜಿಲ್ಲೆಯ ಆನವಟ್ಟಿ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗಗಳಲ್ಲಿ ನಡೆದ ಸರಗಳ್ಳತನ ಪ್ರಕರಣಗಳಲ್ಲಿ ಈ ಮೂರು ಜನ (Theft temple) ಆರೋಪಿಗಳು ಭಾಗಿಯಾಗಿರುವುದು ಲಕ್ಷೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣದ ತನಿಖೆ ನಡೆಸಿದ ವೇಳೆ ಬಯಲಿಗೆ ಬಂದಿವೆ.
ಶ್ರೀಕಾಂತ ಗುಡದೂರ, ಜೈಲು ವಾರ್ಡನ್ ಆಗಿದ್ದ ವೇಳೆ ಜೈಲಿನಲ್ಲಿ ಪರಿಚಯವಾಗಿದ್ದ ಕಳ್ಳರ ಗ್ಯಾಂಗ್ ಬಳಸಿ ದೇವಸ್ಥಾನಗಳನ್ನು ಕಳ್ಳತನ ಮಾಡುತ್ತಿದ್ದರು.