Chitradurga news|nammajana.com|22-7-2024
ನಮ್ಮಜನ.ಕಾಂ, ಚಿತ್ರದುರ್ಗ: ಕಳೆದ ಸುಮಾರು ಒಂದು ತಿಂಗಳಿನಿಂದ ಚಳ್ಳಕೆರೆ ಉಪವಿಭಾಗದಲ್ಲಿ ಕಳ್ಳತನ, ದರೋಡೆ, (Thieves Escape) ಸುಲಿಗೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಜುಲೈ ೨೦ ರ ರಾತ್ರಿ ನಾಯಕನಹಟ್ಟಿ ಠಾಣಾ ವ್ಯಾಪ್ತಿಯಲ್ಲಿ ಆಂಧ್ರಪ್ರದೇಶದ ಸುಮಾರು ಏಳು ಜನರ ಗುಂಪೊಂದು ಬುಲರೋ ಜೀಪ್‌ನಲ್ಲಿ ದರೋಡೆಗೆ ಆಗಮಿಸಿದ ಘಟನೆ ನಡೆದಿದೆ.
ಪೋಲಿಸರ ದಿಟ್ಟತನಕ್ಕೆ ಕಳ್ಳರು ಪರಾರಿ (Thieves Escape)
ಈ ಸಂದರ್ಭದಲ್ಲಿ ಪೊಲೀಸರ ಸಕಾಲಿಕ ದಿಟ್ಟ ಕ್ರಮದಿಂದ ದರೋಡೆಕೋರರು ಕತ್ತಲಲ್ಲಿ ಪರಾರಿಯಾಗಿದ್ದು, ಇದೇ ಸಂದರ್ಭದಲ್ಲಿ ಬೆನ್ನಟ್ಟಿದ ಪೊಲೀಸರು ಮತ್ತು ಅವರ ವಾಹನದ ಮೇಲೆ ಕಲ್ಲು ತೂರಿದಾಗ ನಾಯಕನಹಟ್ಟಿ ಪಿಎಸ್‌ಐ-೨ ಶಿವಕುಮಾರ್ ಇಲಾಖೆ ಪಿಸ್ತೂಲ್‌ನಿಂದ ಆತ್ಮರಕ್ಷಣೆಗಾಗಿ ಐದು ಸುತ್ತು ಗುಂಡುಹಾರಿಸಿದಾಗ ದರೋಡೆಕೋರರು ತಮ್ಮ ವಾಹನ ಸಮೇತ ಓಡಿ ಹೋಗಿದ್ಧಾರೆ.
ಘಟನೆಯ ವಿವರ : (Thieves Escape)
ನಾಯಕನಹಟ್ಟಿ ಠಾಣಾ ವ್ಯಾಪ್ತಿಯ ಗಸ್ತು ಸಿಬ್ಬಂದಿ ಶ್ರೀಹರಿ ಮತ್ತು ಸಂತೋಷ್ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ಬಡಾವಣೆಯಿಂದ ಆಂಧ್ರಪ್ರದೇಶಕ್ಕೆ ಸೇರಿದ ಗೂಡ್ಸ್ (Thieves Escape) ವಾಹನವನ್ನು ತಡೆದರೂ ನಿಲ್ಲಿಸದೆ ವೇಗವಾಗಿ ಚಲಿಸಿದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಿಬ್ಬಂದಿ ಕೂಡಲೇ ಪಿಎಸ್‌ಐ ಶಿವಕುಮಾರ್‌ಗೆ ಮಾಹಿತಿ ನೀಡಿದ್ಧಾರೆ.
ಶಿವಕುಮಾರ್ ಸಹ ತಡ ಮಾಡದೆ ತಮ್ಮ ವಾಹನದಲ್ಲಿ ಸಿಬ್ಬಂದಿ ಸಹಿತ ವಾಹನವನ್ನು ಬೆನ್ನತ್ತಿ ಬಂದಾಗ ಕುದಾಪುರ ಗೇಟ್ ಬಳಿ ಕಳ್ಳರ ವಾಹನ ಎದುರಾಗಿದೆ. ನಿಲ್ಲಿಸಲು ಸೂಚಿಸಿದಾಗ ಇವರ (Thieves Escape) ಮೇಲೆ ಕಳ್ಳರು ಕಲ್ಲು ಎಸೆದಿದ್ದು, ಪಿಎಸ್‌ಐ ತಪ್ಪಿಸಿಕೊಂಡು ಕಲ್ಲು ಜೀಪ್‌ನ ಮುಂಭಾಗದ ಗ್ಲಾಸ್‌ಗೆ ಬಿದ್ದು ಜಖಂಗೊಂಡಿದೆ.
ಅಪಾಯದ ಮುನ್ಸೂಚನೆಯನ್ನು ಅರಿತ ಜಾಗೃತಗೊಂಡ ಪಿಎಸ್‌ಐ ತಮ್ಮ ಸರ್ವಿಸ್ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ಧಾರೆ.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, (Thieves Escape) ಗ್ರಾಮಸ್ಥರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ರಾತ್ರಿ ೧.೩೦ರ ಸಮಯದಲ್ಲಿ ಆಂಧ್ರಪ್ರದೇಶಕ್ಕೆ ಸೇರಿದ ಗೂಡ್ಸ್ ವಾಹನ ಇತ್ತಕಡೆ ಬಂದಿದ್ದು, ಕೆಲವೇ ನಿಮಿಷಗಳಲ್ಲಿ ಪೊಲೀಸ್ ವಾಹನ ಆಗಮಿಸುತ್ತು. (Thieves Escape) ಇದನ್ನು ನೋಡಿದ ನಾವು ಯಾರೋ ಕಳ್ಳರು ಬಂದಿದ್ಧಾರೆಂದು ಗಾಬರಿಗೊಂಡೆವು. ಅಷ್ಟರಲ್ಲೇ ಗೈಡ್ಸ್ ವಾಹನದಲ್ಲಿದ್ದವರು ಪೊಲೀಸರ ಮೇಲೆ ಕಲ್ಲುತೂರಿದರು. ನಂತರ ಪೊಲೀಸರು ಜಾಗೃತಗೊಂಡು ಅವರನ್ನು ಬೆನ್ನತ್ತಿದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Accident news: ಕಾರು ಬೈಕ್ ನಡುವೆ ಅಪಘಾತ | ಬೈಕ್ ಸವಾರ ಸ್ಥಳದಲ್ಲೇ ಸಾವು | ಬೈಕ್ ಪುಡಿ ಪುಡಿ
ಪೋಲಿಸರ ಧೈರ್ಯಕ್ಕೆ ಪ್ರಶಂಸೆ
ದರೋಡೆಕೋರರನ್ನು ಧೈರ್ಯದಿಂದ ಹಿಮ್ಮೆಟ್ಟಿಸಿದ ನಾಯಕನಹಟ್ಟಿ ಪಿಎಸ್‌ಐ ಹಾಗೂ ಸಿಬ್ಬಂದಿ ಕಾರ್ಯವನ್ನು (Thieves Escape) ಪ್ರಶಂಸಿದ್ದಾರೆ. ಕುದಾಪುರ ಗ್ರಾಮದಿಂದ ತಳಕು, ಬೇಡರೆಡ್ಡಿಹಳ್ಳಿ, ಬುಕ್ಕಾಂಬೂದಿ ಮೂಲಕ ಸುಮಾರು ೫೦ ಕಿ.ಮೀ ದೂರ ಬೆನ್ನತ್ತಿದರೂ ಕಳ್ಳರು ಸಿಗದೆ ಪರಾರಿಯಾಗಿದ್ಧಾರೆ. ಪೊಲೀಸ್ ಇಲಾಖೆ ಮತ್ತಷ್ಟು ಬಿಗಿಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ಧಾರೆ.